ಕರುನಾಡ ಚೆಲುವೆ ಐಶ್ವರ್ಯಾಗೆ ಹುಟ್ಟುಹಬ್ಬದ ಸಂಭ್ರಮ

ಐಶು ಕನ್ನಡದ ಕೂಸು. ಮಂಗಳೂರಿನ ಬಂಟ್ ಕುಟುಂಬ ಇವರ ಮೂಲ. ತಂದೆ ಕೃಷ್ಣರಾಜ್, ಜಲಜೀವಶಾಸ್ತ್ರಜ್ಷ. ತಾಯಿ ಹೆಸರು ಬೃಂದಾ. ಅಣ್ಣ ಆದಿತ್ಯಾ ರೈ, ಮರ್ಚಂಟ್ ನೇವಿಯಲ್ಲಿ ಎಂಜಿನಿಯರ್. ಐಶ್ ಸ್ಕೂಲ್ ಓದುತ್ತಿದ್ದ ವೇಳೆಯಲ್ಲೇ ಈ ಕುಟುಂಬ ಮಂಗಳೂರಿನಿಂದ ಮುಂಬೈಗೆ ಶಿಫ್ಟ್ ಆಗಿ ಅಲ್ಲೇ ನೆಲೆಯಾಗಿದೆ.
ಇದೀಗ 39ನೇ ವರ್ಷಕ್ಕೆ ಕಾಲಿಡುತ್ತಿರುವ ಐಶ್ವರ್ಯಾ ರೈ ಬಚ್ಚನ್ ಜನ್ಮ ದಿನಾಂಕ 01-11-1973. 9ನೇ ತರಗತಿಯಲ್ಲಿದ್ದಾಗಲೇ ಮಾಡೆಲಿಂಗ್ ಪ್ರಪಂಚಕ್ಕೆ ಎಂಟ್ರಿಯಾಗಿದ್ದ ಐಶ್, 'ಭಾರತ ಸುಂದರಿ' ಹಾಗೂ 'ವಿಶ್ವಸುಂದರಿ'ಯಾಗಿ ಆಯ್ಕೆಯಾಗಿದ್ದು 1994 ರಲ್ಲಿ. ಮಣಿರತ್ನಂ ನಿರ್ದೇಶನದ 'ಇರುವರ್' ತಮಿಳು ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ.
ಅಲ್ಲಿಂದ ಮುಂದೆ ಐಶ್ವರ್ಯಾ ರೈ ಬೆಳೆದದ್ದು ಈಗ ಇತಿಹಾಸ. 40ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿರುವ ಐಶ್, 'ನಾವೈ ಚಂದಮಾಮ' ಎಂಬ ತೆಲುಗು ಚಿತ್ರವನ್ನೂ ಸೇರಿಸಿದರೆ ತಮಿಳು, ಹಿಂದಿ, ಇಂಗ್ಲಿಷ್, ಬೆಂಗಾಲಿ ಭಾಷೆಗಳ ಚಿತ್ರಗಳಲ್ಲಿ ಅಭಿನಯಿಸಿರುವ ಬಹುಭಾಷಾ ತಾರೆ. 2 ಫಿಲ್ಮ್ ಫೇರ್, ಪದ್ಮಶ್ರೀ ಪುರಸ್ಕಾರಗಳು ಇವರಿಗೆ ಲಭಿಸಿದೆ.
2007 ರಲ್ಲಿ ಅಮಿತಾಬ್ ಬಚ್ಚನ್ ಮಗ ಅಭಿಷೇಕ್ ರನ್ನು ಮದುವೆಯಾಗುವ ಮೂಲಕ ಐಶ್ವರ್ಯಾ ರೈ ಬಚ್ಚನ್ ಆಗಿದ್ದಾರೆ. ಜೀನ್ಸ್, ಎಂಥಿರನ್, ದೇವದಾಸ್, ಧೂಮ್-2, ಜೋಧಾ ಅಕ್ಬರ್ ಮುಂತಾದವು ಐಶ್ ಖ್ಯಾತ ಚಿತ್ರಗಳು. ಇದೀಗ ತಾಯಿಯಾಗುವ ಸಂಭ್ರಮದಲ್ಲಿರುವ ಐಶ್ವರ್ಯಾ ರೈ ಬಚ್ಚನ್ ಗೆ "ಹುಟ್ಟುಹಬ್ಬದ ಶುಭಾಶಯಗಳು" (ಒನ್ ಇಂಡಿಯಾ ಕನ್ನಡ)


Click it and Unblock the Notifications











