twitter
    For Quick Alerts
    ALLOW NOTIFICATIONS  
    For Daily Alerts

    ಕರುನಾಡ ಚೆಲುವೆ ಐಶ್ವರ್ಯಾಗೆ ಹುಟ್ಟುಹಬ್ಬದ ಸಂಭ್ರಮ

    |

    Aishwarya Rai
    ಮಾಜಿ ವಿಶ್ವಸುಂದರಿ, ಬಾಲಿವುಡ್ ನಟಿ, ಅಮಿತಾಬ್ ಬಚ್ಚನ್ ಸೊಸೆ ಐಶ್ವರ್ಯಾ ರೈ ಜನುಮ ದಿನ ಇಂದು. ಜಗತ್ತಿನಲ್ಲಿ ಐಶ್ವರ್ಯಾ ರೈ ಬಚ್ಚನ್ ಹೆಸರು ಕೇಳದವರಿಲ್ಲ. ಗರ್ಭಿಣಿಯಾಗಿರುವ ಐಶೂ, ಸದ್ಯದಲ್ಲೇ ಅಮ್ಮ ಆಗಲಿದ್ದಾಳೆ. ಈಕೆಯ ಹುಟ್ಟುಹಬ್ಬಕ್ಕೆ ಜಗತ್ತಿನೆಲ್ಲೆಡೆಯಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.

    ಐಶು ಕನ್ನಡದ ಕೂಸು. ಮಂಗಳೂರಿನ ಬಂಟ್ ಕುಟುಂಬ ಇವರ ಮೂಲ. ತಂದೆ ಕೃಷ್ಣರಾಜ್, ಜಲಜೀವಶಾಸ್ತ್ರಜ್ಷ. ತಾಯಿ ಹೆಸರು ಬೃಂದಾ. ಅಣ್ಣ ಆದಿತ್ಯಾ ರೈ, ಮರ್ಚಂಟ್ ನೇವಿಯಲ್ಲಿ ಎಂಜಿನಿಯರ್. ಐಶ್ ಸ್ಕೂಲ್ ಓದುತ್ತಿದ್ದ ವೇಳೆಯಲ್ಲೇ ಈ ಕುಟುಂಬ ಮಂಗಳೂರಿನಿಂದ ಮುಂಬೈಗೆ ಶಿಫ್ಟ್ ಆಗಿ ಅಲ್ಲೇ ನೆಲೆಯಾಗಿದೆ.

    ಇದೀಗ 39ನೇ ವರ್ಷಕ್ಕೆ ಕಾಲಿಡುತ್ತಿರುವ ಐಶ್ವರ್ಯಾ ರೈ ಬಚ್ಚನ್ ಜನ್ಮ ದಿನಾಂಕ 01-11-1973. 9ನೇ ತರಗತಿಯಲ್ಲಿದ್ದಾಗಲೇ ಮಾಡೆಲಿಂಗ್ ಪ್ರಪಂಚಕ್ಕೆ ಎಂಟ್ರಿಯಾಗಿದ್ದ ಐಶ್, 'ಭಾರತ ಸುಂದರಿ' ಹಾಗೂ 'ವಿಶ್ವಸುಂದರಿ'ಯಾಗಿ ಆಯ್ಕೆಯಾಗಿದ್ದು 1994 ರಲ್ಲಿ. ಮಣಿರತ್ನಂ ನಿರ್ದೇಶನದ 'ಇರುವರ್' ತಮಿಳು ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ.

    ಅಲ್ಲಿಂದ ಮುಂದೆ ಐಶ್ವರ್ಯಾ ರೈ ಬೆಳೆದದ್ದು ಈಗ ಇತಿಹಾಸ. 40ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿರುವ ಐಶ್, 'ನಾವೈ ಚಂದಮಾಮ' ಎಂಬ ತೆಲುಗು ಚಿತ್ರವನ್ನೂ ಸೇರಿಸಿದರೆ ತಮಿಳು, ಹಿಂದಿ, ಇಂಗ್ಲಿಷ್, ಬೆಂಗಾಲಿ ಭಾಷೆಗಳ ಚಿತ್ರಗಳಲ್ಲಿ ಅಭಿನಯಿಸಿರುವ ಬಹುಭಾಷಾ ತಾರೆ. 2 ಫಿಲ್ಮ್ ಫೇರ್, ಪದ್ಮಶ್ರೀ ಪುರಸ್ಕಾರಗಳು ಇವರಿಗೆ ಲಭಿಸಿದೆ.

    2007 ರಲ್ಲಿ ಅಮಿತಾಬ್ ಬಚ್ಚನ್ ಮಗ ಅಭಿಷೇಕ್ ರನ್ನು ಮದುವೆಯಾಗುವ ಮೂಲಕ ಐಶ್ವರ್ಯಾ ರೈ ಬಚ್ಚನ್ ಆಗಿದ್ದಾರೆ. ಜೀನ್ಸ್, ಎಂಥಿರನ್, ದೇವದಾಸ್, ಧೂಮ್-2, ಜೋಧಾ ಅಕ್ಬರ್ ಮುಂತಾದವು ಐಶ್ ಖ್ಯಾತ ಚಿತ್ರಗಳು. ಇದೀಗ ತಾಯಿಯಾಗುವ ಸಂಭ್ರಮದಲ್ಲಿರುವ ಐಶ್ವರ್ಯಾ ರೈ ಬಚ್ಚನ್ ಗೆ "ಹುಟ್ಟುಹಬ್ಬದ ಶುಭಾಶಯಗಳು" (ಒನ್ ಇಂಡಿಯಾ ಕನ್ನಡ)

    English summary
    Today, Aishwarya Rai Bachchan Birthday. Her birth date is 01-11-1973. Born in Mangalore, Karnataka. brought up and educated in Mombai. Her father is Krishnaraj, a marine biologist, mother Brindya and elder brother Adithya, engineer in the merchant navy. Becoming mother Now.
 
    Tuesday, November 1, 2011, 16:12
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X