For Quick Alerts
  ALLOW NOTIFICATIONS  
  For Daily Alerts

  ಸದ್ಯಕ್ಕೆ ಚಿತ್ರರಂಗಕ್ಕೆ ಹಿಂತಿರುಗುತ್ತಿಲ್ಲವಂತೆ ಮೀನಾ

  By Rajendra
  |

  ಕೆಲ ದಿನಗಳ ಹಿಂದೆ ಒಂದು ಸುದ್ದಿ ಇತ್ತು. ದಕ್ಷಿಣದ ಖ್ಯಾತ ತಾರೆ ಮೀನಾ ಅತ್ತೆಯಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲಿದ್ದಾರೆ ಎಂಬುದು. ಆದರೆ ಈ ಸುದ್ದಿ ಈಗ ಠುಸ್ ಆಗಿದೆ. ಸದ್ಯಕ್ಕೆ ತಾವು ಚಿತ್ರರಂಗಕ್ಕೆ ಹಿಂತಿರುಗುತ್ತಿಲ್ಲ ಎಂದು ನಟಿ ಮೀನಾ ಸ್ಪಷ್ಟಪಡಿಸಿದ್ದಾರೆ.

  ರಾಮ್ ಚರಣ್ ತೇಜ ಅಭಿನಯದತೆಲುಗಿನ ಚಿತ್ರದಲ್ಲಿ ಮೀನಾ ನಟಿಸಲಿದ್ದಾರೆ ಎನ್ನಲಾಗಿತ್ತು. ತಾವು ಆ ರೀತಿಯ ಯಾವುದೇ ಚಿತ್ರದಲ್ಲಿ ಅಭಿನಯಿಸುತ್ತಿಲ್ಲ. ಸದ್ಯಕ್ಕೆ ನನ್ನ ಐದು ತಿಂಗಳ ಮಗಳು ನೈನಿಕಾಳನ್ನು ನೋಡಿಕೊಳ್ಳುತ್ತಿದ್ದೇನೆ. ಮನೆ ಜವಾಬ್ದಾರಿಗಳು ಹೆಚ್ಚಾಗಿವೆ. ಅಭಿನಯಕ್ಕಾಗಿ ಅವರೆಲ್ಲರನ್ನೂ ಕಳೆದುಕೊಳ್ಳಲು ನನಗೆ ಇಷ್ಟವಿಲ್ಲ ಎಂದಿದ್ದಾರೆ.

  ಬೆಂಗಳೂರಿನ ಸಾಫ್ಟ್ ವೇರ್ ಉದ್ಯೋಗಿ ವಿದ್ಯಾ ಸಾಗರ್ ಅವರನ್ನು ಕೈಹಿಡಿದ ಬಳಿಕ ನಟಿ ಮೀನಾ ಚಿತ್ರರಂಗದಿಂದ ದೂರ ಸರಿದಿದ್ದರು. 'ಹೆಂಡ್ತೀರ್ ದರ್ಬಾರ್' ಚಿತ್ರ ಮೀನಾ ಅಭಿನಯದ ಕೊನೆಯ ಕನ್ನಡ ಚಿತ್ರ. ಪುನಃ ಅವರು ಚಿತ್ರರಂಗಕ್ಕೆ ಯಾವಾಗ ಮರಳುತ್ತಾರೆ ಎಂಬುದನ್ನು ಮೀನಾ ಖಚಿತವಾಗಿ ಹೇಳಿಲ್ಲ. (ದಟ್ಸ್‌ಕನ್ನಡ ಸಿನಿವಾರ್ತೆ)

  English summary
  South Indian actress Meena has clarified that she is not going to come back to films anytime soon. News broke out that she would act as mother in law of Ramcharan in his upcoming film. Also she clarified that she is not acting in that movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X