For Quick Alerts
  ALLOW NOTIFICATIONS  
  For Daily Alerts

  ಪ್ರಿಯಾಂಕ ಚೋಪ್ರಾ ಸುದ್ದಿಗೆ ನಂದಿಬೆಟ್ಟ ಹೌಸ್ 'ಫೂಲ್'

  |

  ಕನ್ನಡದ ಬಾಲಿವುಡ್ ಅಭಿಮಾನಿ ಪ್ರೇಕ್ಷಕರೆಲ್ಲ ನಂದಿಬೆಟ್ಟ ಹತ್ತಿದ್ದಾರೆ. ಕಾರಣ ಅಲ್ಲಿಗೆ ಬಾಲಿವುಡ್ ಬೆಡಗಿ, ನಟಿ ಪ್ರಿಯಾಂಕಾ ಚೋಪ್ರಾ ಬಂದಿದ್ದಾರೆ ಎಂಬ ಸುದ್ದಿ. ಸುದ್ದಿ ನಿಜವೆಂದು ಭ್ರಮಿಸಿದ ಪ್ರಿಯಾಂಕ ಅಭಿಮಾನಿಗಳು ತಾಮುಂದೆ ತಾಮುಂದೆ ಎಂದು ಬೆಟ್ಟ ಹತ್ತಿ ಹೋಗಿದ್ದಾರೆ. ಅವರನ್ನು ನಿಯಂತ್ರಿಸಲಾಗದೇ ಪೊಲೀಸರು ಸುಸ್ತಾಗಿ ಕುಳಿತಿದ್ದಾರೆ.

  ಕಾರಣ ಇಷ್ಟೇ. ಇಂದು ಏಪ್ರಿಲ್ ಒಂದನೆಯ ತಾರೀಖು ತಾನೇ? ಯಾರೋ ಹಬ್ಬಿಸಿದ ಸುಳ್ಳುಸುದ್ದಿಗೆ ನಂದಿಬೆಟ್ಟದತ್ತ ಜನಸಾಗರವೇ ಹರಿದುಹೋಗಿದೆ. ಅಲ್ಲಿಗೆ ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಚಿತ್ರೀಕರಣಕ್ಕೆ ಬಂದಿದ್ದಾರೆ ಎಂಬುದು ಹಬ್ಬಿರುವ ಸುಳ್ಳುಸುದ್ದಿ. ಆದರೆ ಜನ ಸುಮ್ಮನಿರಬೇಕಲ್ಲ! ಹೋಗಿಯೇ ನೋಡೋಣ ಎಂದು ಹೋಗಿ ಬೆಟ್ಟವನ್ನು ಹತ್ತುತ್ತಿದ್ದಾರೆ.

  ಅವರನ್ನು ತಡೆಯಲು ಹರಸಾಹಸ ಪಡುತ್ತಿರುವ ಪೊಲೀಸರು ಎಷ್ಟೇ ಹೇಳಿದರೂ ಕೇಳುವ ಸ್ಥಿತಿಯಲ್ಲಿಲ್ಲ ಪ್ರಿಯಾಂಕ ಅಭಿಮಾನಿಗಳು. ಹತ್ತಿದವರು ಸಾಯಂಕಾಲದವರೆಗೂ ಅಲ್ಲಿಯೇ ನಿಂತಿದ್ದರೂ ಆಶ್ಚರ್ಯವಿಲ್ಲ ಎನ್ನುತ್ತಿವೆ ಸುದ್ದಿ ಮೂಲಗಳು. ಒಟ್ಟಿನಲ್ಲಿ ಪ್ರತಿವರ್ಷ ಏಪ್ರಿಲ್ ಒಂದರಂದು ಸಾಕಷ್ಟು ಮಂದಿ ಮೂರ್ಖರಿದ್ದಾರೆಂಬುದು ಸಾಬೀತಾಗುತ್ತಲೇ ಇರುತ್ತದೆ.

  ಅಂದಹಾಗೇ, ಮುಂದಿನ ವರ್ಷ ನಂದಿಬೆಟ್ಟಕ್ಕೆ 'ಸಿಡಿಲು ತೊಡೆಗಳ ರಾಣಿ' ಶ್ರೀದೇವಿಯ ಮಗಳು ಜಾಹ್ನವಿ ಬರಲಿದ್ದಾರೆ... (ಒನ್ ಇಂಡಿಯಾ ಕನ್ನಡ)

  English summary
  Actress Priyanka Chopra Comes Nandibetta Rumour had spred as April Fool. Priyanka Fans crowded at Nandibetta because of this rumour.
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X