For Quick Alerts
  ALLOW NOTIFICATIONS  
  For Daily Alerts

  ಸುಂದರಾಂಗ ಮಧು ಬಂಗಾರಪ್ಪನಿಗೆ ಸಿಕ್ಕಿದಳು ಸುಂದರಿ

  By Rajendra
  |

  ಆಕಾಶ್ ಆಡಿಯೋ ಮಾಲೀಕ ಹಾಗೂ ಸಾರೆಕೊಪ್ಪ ಬಂಗಾರಪ್ಪ ಅವರ ಪುತ್ರ ಮಧು ಬಂಗಾರಪ್ಪ ಅವರ ಚಿತ್ರಕ್ಕೆ ನಾಯಕಿ ಸಿಕ್ಕಿದ್ದಾಳೆ. ಮಧು ಬಂಗಾರಪ್ಪ ಇದೇ ಮೊದಲ ಬಾರಿಗೆ ನಾಯಕ ನಟನಾಗಿ ಅಭಿನಯಿಸುತ್ತಿದ್ದು, 'ದೇವಿ' ಎಂಬ ಚಿತ್ರವನ್ನು ಕೈಗೆತ್ತಿಕೊಂಡಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ.

  ದೇವಿ ಚಿತ್ರಕ್ಕೆ ಅಡಿಯಿಟ್ಟಿರುವ ಚೆಂದುಳ್ಳಿ ಚೆಲುವೆ ಹೆಸರು ಆಕಾಂಕ್ಷ. ಈಶ್ವರ್ ಬಾಳೆಗುಂಡಿ ನಿರ್ದೇಶನದಲ್ಲಿ 'ದೇವಿ' ಚಿತ್ರ ಮೂಡಿಬರುತ್ತಿದೆ. ಚಿತ್ರದಲ್ಲಿ ಇಬ್ಬರು ನಾಯಕಿಯರು. ಆಕಾಂಕ್ಷ ಅವರದು ಬಬ್ಲಿ ಪಾತ್ರವಾದರೆ, ಸ್ನೇಹಾ ಉಲ್ಲಾಳ್ ಅವರದು ಪ್ರಮುಖ ಪಾತ್ರವಂತೆ.

  ವಿ ಶ್ರೀಧರ್ ಎಂಬುವವರ ಸಂಗೀತ ಹಾಗೂ ಸುರೇಶ್ ಬಾಬು ಕ್ಯಾಮೆರಾ ಚಿತ್ರಕ್ಕಿದೆ. ರವಿಕಾಳೆ, ಬುಲೆಟ್ ಪ್ರಕಾಶ್, ಮುನಿ, ಲಕ್ಷ್ಮಿ ಮುಂತಾದವರು ನಟಿಸಲಿರುವ ಚಿತ್ರಕ್ಕೆ ಸಂಭಾಷಣೆ ಬರೆದಿರುವ ಮಳವಳ್ಳಿ ಸಾಯಿಕೃಷ್ಣರೂ ನಟಿಸುತ್ತಿದ್ದಾರೆ. ಲವ್ ಸೆಂಟಿಮೆಂಟ್ ಇರುವ ಪಕ್ಕಾ ಮಾಸ್ ಸಿನಿಮಾ ಎನ್ನುತ್ತಾರೆ ಸುಂದರಾಂಗ ಮಧು ಬಂಗಾರಪ್ಪ.[ಸ್ನೇಹಾ ಉಲ್ಲಾಳ್]

  English summary
  Akanksha is the new heroine of of the movie Devi. Akanksha will be seen in a bubbly role.Madhu Bangarappa is all set to make his debut in the Kannada cine circuit. The film is directed by Eshwar. The film also has the sizzling beauty Sneha Ullal as the main lead.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X