ಕೋಟೆ ಚಿತ್ರೀಕರಣದ ವೇಳೆ ಸ್ಫೋಟ; ಇಬ್ಬರಿಗೆ ಗಾಯ
ಪ್ರಜ್ವಲ್ ದೇವರಾಜ್ ಮುಖ್ಯಭೂಮಿಕೆಯಲ್ಲಿರುವ 'ಕೋಟೆ' ಚಿತ್ರೀಕರಣದ ವೇಳೆ ಒಂದು ಸಣ್ಣ ಅವಘಡ ಸಂಭವಿಸಿದೆ. ಬಣ್ಣಗಳನ್ನು ಸಿಡಿಸುವ ಸಂದರ್ಭದಲ್ಲಿ ಇಬ್ಬರು ವಿದ್ಯಾರ್ಥಿಗಳು ಗಾಯಗೊಂಡ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಕಿತ್ತ್ತೂರು ರಾಣಿ ಚೆನ್ನಮ್ಮ ಸರ್ಕಲ್ ನಲ್ಲಿ ಬಣ್ಣದ ಗುಲಾಲನ್ನು ಸಿಡಿಸಲು ವ್ಯವಸ್ಥೆ ಮಾಡಲಾಗಿತ್ತು. ಆಗ ಅಚಾನಕ್ ಸಂಭವಿಸಿ ಸ್ಫೋಟ ಅಲ್ಲೇ ನಡೆದು ಹೋಗುತ್ತಿದ್ದ ವಿದ್ಯಾರ್ಥಿಗಳಿಬ್ಬರು ಗಾಯಗೊಳಿಸಿದೆ. ಕೂಡಲೆ ವಿದ್ಯಾರ್ಥಿಗಳು ಮುಖಕ್ಕೆ ರಂಗು ರಂಗಿನ ಬಣ್ಣಗಳು ಮೆತ್ತಿಕೊಂಡಿವೆ. ಬಣ್ಣದ ಧೂಳಿನ ಓಕುಳಿ ಅವರ ಉಸಿರಾಟಕ್ಕೂ ತೊಂದರೆಯಾಗಿ ವಿದ್ಯಾರ್ಥಿಗಳು ತಲೆ ಸುತ್ತಿ ಬಿದ್ದುಬಿಟ್ಟ್ಟಿದ್ದಾರೆ. ಕೂಡಲೆ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಯಿತು.
ಈ ಘಟನೆಯಿಂದ ರೋಷಗೊಂಡ ವಿದ್ಯಾರ್ಥಿಗಳ ಪೋಷಕರು 'ಕೋಟೆ' ಚಿತ್ರ ತಂಡದ ಮೇಲೆ ಪೊಲೀಸರಿಗೂ ದೂರು ನೀಡಿದ್ದಾರೆ. ಈ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸದ ಕಾರಣ 'ಕೋಟೆ' ಚಿತ್ರತಂಡ ನೆಮ್ಮದಿಯ ನಿಟ್ಟುಸಿರು ಬಿಟ್ಟಿದೆ ಎನ್ನಲಾಗಿದೆ.
ಸೆಪ್ಟೆಂಬರ್ 19ರಂದು ಹುಬ್ಬಳ್ಳಿಯಲ್ಲಿ ಆರಂಭವಾದ 'ಕೋಟೆ' ಚಿತ್ರೀಕರಣ ಭರದಿಂದ ಸಾಗುತ್ತಿತ್ತು. ಆದರೆ ಅಚಾನಕ್ ಸಂಭವಿಸಿದ ಈ ಸ್ಫೋಟದಿಂದ ಚಿತ್ರೀಕರಣ ಸದ್ಯಕ್ಕೆ ಸ್ಥಗಿತಗೊಂಡಿದೆ. ಈ ಘಟನೆ ಬಗ್ಗೆ ಪ್ರತಿಕ್ರಿಯಿಸಲು ಚಿತ್ರದ ನಾಯಕ ನಟ ಪ್ರಜ್ವಲ್, ನಿರ್ಮಾಪಕ ಮಂಜುನಾಥ್ ಹಾಗೂ ನಿರ್ದೇಶಕ ಶ್ರೀನಿವಾಸ ರಾಜು ಸಿಗುತ್ತಿಲ್ಲ.


Click it and Unblock the Notifications











