»   » ಎಸ್.ನಾರಾಯಣ್ ರ ಚೈತ್ರದ ಚಂದ್ರಮ ಸಿದ್ಧ

ಎಸ್.ನಾರಾಯಣ್ ರ ಚೈತ್ರದ ಚಂದ್ರಮ ಸಿದ್ಧ

Subscribe to Filmibeat Kannada

'ಚ'ಕಾರ ಪ್ರಿಯ ನಿರ್ದೇಶಕ ಎಸ್.ನಾರಾಯಣ್ ಅವರ ನಿರ್ಮಾಣ ಹಾಗೂ ನಿರ್ದೇಶನದ ಚಿತ್ರ ಚೈತ್ರದ ಚಂದ್ರಮ ಈ ವಾರ ರಾಜ್ಯಾದ್ಯಂತ ತೆರೆ ಕಾಣುತ್ತಿದೆ. ನಾರಾಯಣ್ ಅವರ ಪುತ್ರ ಪಂಕಜ್ ಈ ಚಿತ್ರದ ನಾಯಕ. ಚಿತ್ತಾರದ ಚೆಲುವೆ ಅಮೂಲ್ಯ ನಾಯಕಿ, ತಂದೆಯ ನಿರ್ದೇಶನದಲ್ಲೇ ಮಗ ಪೂರ್ಣಪ್ರಮಾಣದ ನಾಯಕನಾಗಿರುವುದು ಚಿತ್ರದ ವಿಶೇಷ. ನಾಯಕ, ನಾಯಕಿ ಇಬ್ಬರು ನಿಜ ಜೀವನದಲ್ಲಿ ಇನ್ನೂ ವಿದ್ಯಾರ್ಥಿಗಳಾಗಿರುವುದರಿಂದ, ಅವರ ಶೈಕ್ಷಣಿಕ ರಜೆ ಇದ್ದ ಸಮಯದಲ್ಲಿ ಚಿತ್ರೀಕರಣ ನಡೆಸಲಾಗಿದೆ.

ಚೈತ್ರ ಹುಣ್ಣಿಮೆಯ ಶಶಿಯ ಕಿರಣಗಳ ತಂಪಿಗೆ ನಿರೀಕ್ಷಿಸುವ ಹಾಗೆ ನಾರಾಯಣ್ ಅವರು ಜನರ ಪ್ರತಿಕ್ರಿಯೆಗೆ ಕಾಯುತ್ತಿದ್ದಾರೆ. ಕತೆ, ಚಿತ್ರಕತೆ, ಸಂಭಾಷಣೆ, ಸಂಕಲನ, ಸಂಗೀತ ಹಾಗೂ ಸಾಹಿತ್ಯದ ಜವಾಬ್ದಾರಿ ಹೊತ್ತಿರುವ ನಿರ್ದೇಶಕರು ಚಿತ್ರ ವಿಶಿಷ್ಟವಾಗಿ ಮೂಡಿಬರಲು ಅಪಾರ ಶ್ರಮವಹಿಸಿದ್ದಾರೆ. ಆನಂದ್ ಆಡಿಯೋ ಹೊರತಂದಿರುವ ಚಿತ್ರದ ಧ್ವನಿಸುರುಳಿಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.

ಸುರೇಶ್‌ಅಯ್ಯರ್, ಶ್ರೇಯಾಘೋಷಾಲ್, ಕುನಾಲ್‌ಗಾಂಜಾವಾಲ, ಶ್ರೀನಿವಾಸ್, ಚಿತ್ರ, ಟಿಪ್ಪು, ಚೇತನ್ ಚಿತ್ರದ ಆರು ಸುಮಧುರ ಗೀತೆಗಳಿಗೆ ಧ್ವನಿಯಾಗಿದ್ದಾರೆ. ಶ್ರೀಮತಿ ಭಾಗ್ಯವತಿ ಅವರು ಚೆಲುವಾಂಬಿಕಾ ಪಿಕ್ಚರ್ಸ್ ಮೂಲಕ ನಿರ್ಮಿಸಿರುವ ಚಿತ್ರದ ತಾರಾಬಳಗದಲ್ಲಿ ಪಂಕಜ್, ಅಮೂಲ್ಯ, ವೀಣಾಸುಂದರ್, ಪಲ್ಲಕ್ಕಿ ರಾಧಾಕೃಷ್ಣ, ವಿಜಯ್‌ಜೆಟ್ಟಿ, ಸುಮಾ ಮುಂತಾದವರಿದ್ದಾರೆ. ಮಾಲೂರ್ ಶ್ರೀನಿವಾಸ್ ನೃತ್ಯ ಹಾಗೂ ರೇಣುಕುಮಾರ್ ಛಾಯಾಗ್ರಹಣ ಚೈತ್ರದ ಚಂದ್ರಮನಿಗಿದೆ.

(ದಟ್ಸ್ ಕನ್ನಡ ಸಿನಿವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada