ದೀಪಾ ಸನ್ನಿಧಿಗೆ ಈಗ ಡಬ್ಬಲ್ ದೀಪಾವಳಿ

deepa-sannidhi
ದರ್ಶನ್ ಸಾರಥ್ಯದ "ಸಾರಥಿ" ರಾಜ್ಯಾದ್ಯಂತ ಯಶಸ್ವೀ ಪ್ರದರ್ಶನ ಕಾಣುತ್ತಿದೆ. ಇದರಲ್ಲಿ ಸಾರಥಿಯ ಸಂಗಾತಿಯಾಗಿ ಕಾಣಿಸಿಕೊಂಡಿದ್ದು ದೀಪಾ ಸನ್ನಿಧಿ. ನಟಿಸಿದ ಮೊದಲ ಸಿನಿಮಾಕ್ಕೇ ಸಿಕ್ಕ ಭರ್ಜರಿ ಓಪನಿಂಗ್ ನಿಂದ ದೀಪಾ ದಿಲ್ ಫುಲ್ ಖುಷ್. ಇದು ದೀಪಾರಿಗೆ ಮೊದಲ ದೀಪಾವಳಿ.

ಜೊತೆಗೆ ಸದ್ಯವೇ ಬಿಡುಗಡೆ ಆಗಲಿರುವ ಪವರ್ ಸ್ಟಾರ್ ಪುನೀತ್ ಹಾಗೂ ಯಶಸ್ವೀ ನಿರ್ದೇಶಕ ಯೋಗರಾಜ್ ಭಟ್ ಸಂಗಮದ "ಪರಮಾತ್ಮ" ದೀಪಾರ ಎರಡನೇ ಚಿತ್ರ. ಬಿಡುಗಡೆಗೆ ಮುಂಚೆಯೇ ಸಾಕಷ್ಟು ನಿರೀಕ್ಷೆ ಹುಟ್ಟಿಸಿರುವ ಈ ಚಿತ್ರದ ಹಾಡುಗಳು ಎರ್ರಾಬಿರ್ರಿ ಕ್ಲಿಕ್ ಆಗಿರೋದು ದೀಪಾರಿಗೆ ಇನ್ನೊಂದು ದೀಪಾವಳಿ ಕಾದಿರುವುದರ ಸೂಚನೆ. ಹೀಗಾಗಿ ದೀಪಾಗೆ ಈ ಬಾರಿ ಡಬ್ಬಲ್ ದೀಪಾವಳಿ.

ಇಷ್ಟು ದಿನ ಸ್ಮೈಲ್ ನಲ್ಲೇ ಮಾತಾಡುತ್ತಿದ್ದ ದೀಪಾ ಇದೀಗ ಸಾರಥಿಗೆ ಸಿಕ್ಕ ಅಭೂತಪೂರ್ವ ಯಶಸ್ಸಿನಿಂದ ಮಾತಾಡಲು ಪ್ರಾರಂಭಿಸಿದ್ದಾರಂತೆ. ಇಷ್ಟು ದಿನ ಮುಗುಳ್ನಗು ಚೆಂದ ಎನ್ನುತ್ತಿದ್ದವರು ಮುಂದೆ ಮಾತೂ ಚೆಂದ ಎನ್ನಬಹುದು.

"ಚಿಕ್ಕಮಗಳೂರ ಓ ಚಿಕ್ಕ ಮಲ್ಲಿಗೆ, ಸಕ್ಕರೆಯ ಮಾತು ಒಂದ್ ಹೇಳು ಮೆಲ್ಲಗೆ" ಎಂದು ಈಗಾಗಲೇ ಹುಡುಗರು ಹಾಡತೊಡಗಿರುವ ಸುದ್ದಿ ಇದೆ. ಇನ್ನು ಪರಮಾತ್ಮ ನಂತರ ಏನೇನ್ ಮಾಡ್ತೀವಿ ನೋಡ್ತಾ ಇರಿ ಅಂದ್ರೆ ಕಷ್ಟ ಕಷ್ಟ!

ಸದ್ಯಕ್ಕಂತೂ ಸಂತೋಷದ ಅಲೆಯ ಮೇಲೆ ತೇಲಾಡುತ್ತಿರುವ ದೀಪಾ ಇದೀಗ ಪರಮಾತ್ಮನ ಧ್ಯಾನ ಪ್ರಾರಂಭಿಸಲಿದ್ದಾರೆ ಎನ್ನುತ್ತಿವೆ ಅವರ ಆಪ್ತವೃಂದ. ಕನ್ನಡದ ಈ ಅಚ್ಚ ಮಲ್ಲಿಗೆ ದೀಪಾ, ದೀಪವೇ ಆಗಿ ಸ್ಯಾಂಡಲ್ ವುಡ್ ನಲ್ಲಿ ದೀಪಾವಳಿಯನ್ನೇ ಆಚರಿಸುತ್ತಾರೋ ಎಂಬುದು ಸದ್ಯಕ್ಕೆ ರಹಸ್ಯ!

More from Filmibeat

English summary
Sandalwood welcoming number of heroins. Deepa Sannidhi also one of the new comer heroine. After release of movie "Sarathi" deepa's journey starting in sandlewood. Now, there is great talk about sarathi. So, anybody can say, victory journey of deepa starting from Sarathi. 
 
 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X