ಚಿತ್ರೀಕರಣದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್‌ಗೆ ಗಾಯ
ಗೋಲ್ಡನ್ ಸ್ಟಾರ್ ಗಣೇಶ್ ಚಿತ್ರೀಕರಣದಲ್ಲಿ ಗಾಯಗೊಂಡ ಘಟನೆ ಸೋಮವಾರ (ಆ.1) ಕೇರಳದ ಮನ್ನಾರ್‌ನಲ್ಲಿ ನಡೆದಿದೆ. 'ಶೈಲೂ' ಚಿತ್ರದ ಸಾಹಸ ಸನ್ನಿವೇಶವನ್ನು ಚಿತ್ರೀಕರಿಸಬೇಕಾದರೆ ಈ ಘಟನೆ ನಡೆದಿದೆ. ಗಣೇಶ್ ಅವರ ಕೈ ಮತ್ತು ಕಾಲಿಗೆ ಸಣ್ಣ ಪ್ರಮಾಣದ ಗಾಯಗಳಾಗಿವೆ.
ಕಾರಿನ ಗಾಜು ಹೊಡೆಯುವ ಫೈಟಿಂಗ್ ಸೀನ್ ಚಿತ್ರೀಕರಿಸಬೇಕಾದರೆ ಈ ಅವಘಡ ಸಂಭವಿಸಿದೆ ಎಂದು 'ಶೈಲೂ' ಚಿತ್ರತಂಡ ತಿಳಿಸಿದೆ. ಕೂಡಲೆ ಮನ್ನಾರ್ ಬಳಿಯ ಖಾಸಗಿ ಆಸ್ಪತ್ರೆಗೆ ಗಣೇಶ್ ಅವರನ್ನು ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಗಣೇಶ್ ಅಭಿಮಾನಿಗಳು ಗಾಬರಿಬೀಳುವಂಥಹ ದುರ್ಘಟನೆಯೇನು ನಡೆದಿಲ್ಲ ಎಂದು ಚಿತ್ರತಂಡ ತಿಳಿಸಿದೆ.
ಕಲಾ ಸಾಮ್ರಾಟ್ ಎಸ್ ನಾರಾಯಣ್ ಆಕ್ಷನ್ ಕಟ್ ಹೇಳುತ್ತಿರುವ ಚಿತ್ರ ಇದಾಗಿದ್ದು, ತಮಿಳಿನ ಸೂಪರ್ ಹಿಟ್ ಚಿತ್ರ 'ಮೈನಾ' ರೀಮೇಕ್ ಇದಾಗಿದೆ. ನಾಲ್ಕು ವರ್ಷಗಳ ಗ್ಯಾಪ್ ಬಳಿಕ ಎಸ್ ನಾರಾಯಣ್ ಜೊತೆ ಗಣೇಶ್ ಕೈಜೋಡಿಸಿರುವ ಚಿತ್ರ ಇದು. ಚಿತ್ರೀಕರಣದಲ್ಲಿ ಚಿತ್ರದ ನಾಯಕಿ ಭಾಮಾ, ರಂಗಾಯಣ ರಘು ಮುಂತಾದವರು ಭಾಗವಹಿಸಿದ್ದರು. (ದಟ್ಸ್‌ಕನ್ನಡ ಸಿನಿವಾರ್ತೆ)
More from Filmibeat
English summary
Kannada actor Golden Star Ganesh met with an accident while shooting for the film 'Shyloo' at Munnar, Kerala on 1st August Monday. He was rushed to nearest hospital in Munnar after the incident.


Click it and Unblock the Notifications











