ಇಲಿಯಾನಾ ರೇಟು ಈಗ ನಮ್ಮ ರಮ್ಯಾ ಅಷ್ಟೆಯಾ!

By Rajendra

ಬಿಂಕದ ಸಿಂಗಾರಿ ಮೈ ಡೊಂಕಿನ ಬಂಗಾರಿ ಇಲಿಯಾನಾ ಡಿಕ್ರೂಜ್ ಈಗ ಅರ್ಧ ಬೆಲೆಗೆ ಲಭ್ಯ. ದಕ್ಷಿಣ ಭಾರತದಲ್ಲಿ ಅತ್ಯಧಿಕ ಸಂಭಾವನೆ ಪಡೆಯುವ ಬೆಡಗಿಯಲ್ಲಿ ಒಬ್ಬಳು ಎಂಬ ಗೌರವ'ಧನ'ಕ್ಕೆ ಪಾತ್ರರಾಗಿದ್ದರು ಇಲಿಯಾನಾ. ಬಾಲಿವುಡ್ ಚಿತ್ರ 'ಬರ್ಫಿ'ಗಾಗಿ ಈಕೆ ತನ್ನ ಸಂಭಾವನೆಯನ್ನು ಅರ್ಧದಷ್ಟು ಕಡಿತ ಮಾಡಿಕೊಂಡಿದ್ದಾರೆ.

ತೆಲುಗು, ತಮಿಳು ಚಿತ್ರಗಳಲ್ಲಾದರೆ ಒಂದು ಕೋಟಿ ಸಂಭಾವನೆ ಕೊಟ್ಟರೆ ಮಾತ್ರ ಚಿತ್ರಕ್ಕೆ ಸಹಿ ಹಾಕುತ್ತಿದ್ದರು ಇಲಿಯಾನಾ. ಈಗ ಹಿಂದಿ ಚಿತ್ರ ಎಂಬ ಕಾರಣಕ್ಕೆ ಐವತ್ತು ಲಕ್ಷಕ್ಕೆ ಓಕೆ ಎಂದಿದ್ದಾರೆ ಎನ್ನುತ್ತವೆ ಮೂಲಗಳು. ಕನ್ನಡದ 'ಹುಡುಗ ಹುಡುಗಿ' ಚಿತ್ರದ ಒಂದು ಹಾಡಿಗೆ ರು.30 ಲಕ್ಷ ಎಣಿಸಿದ್ದರು ಇಲಿಯಾನಾ.

ಸದ್ಯಕ್ಕೆ ಟಾಲಿವುಡ್‌ನಲ್ಲೂ ಹೇಳಿಕೊಳ್ಳುವಂತಹ ಆಫರ್‌ಗಳು ಇಲಿಗೆ ಇಲ್ಲ. ತೆಲುಗಿನ ಭಾರಿ ಬಜೆಟ್ ಚಿತ್ರ 'ಶಕ್ತಿ' ಬಳಿಕ ಇಲಿಯನ್ನು ಕೇಳುವವರಿಲ್ಲವಂತೆ. ಈಕೆ ಶೇಕಡಾ 50 ಡಿಸ್ಕೌಂಟ್ ಪ್ರಕಟಿಸಿದ್ದೇ ತಡ ಬಾಲಿವುಡ್ ಬಾಗಿಲು ತೆರೆದಿದೆ. ಚಿತ್ರವೊಂದಕ್ಕೆ ಈಗ ಈಕೆಯ ಸಂಭಾವನೆ ಹೆಚ್ಚುಕಡಿಮೆ ನಮ್ಮ ಗೋಲ್ಡನ್ ಗರ್ಲ್ ರಮ್ಯಾ ಅಷ್ಟೆ.(ಏಜೆನ್ಸೀಸ್)

More from Filmibeat

English summary
Ileana D'Cruz, who is one of the most paid actress in south Indian films like Tollywood and Kollywood has given the discount for her debut Bollywood film Barfee. Ileana, who is desperate for work has even offered a whopping discount of 50% of her remuneration.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X