ಉದ್ಯಮಿ ಹೆಂಡತಿ ಜೊತೆ ವಿನೋದ್ ಪ್ರಭಾಕರ್ ಚಕ್ಕಂದ?
ಪತ್ನಿ ಪೀಡಕನೆಂದು ಆರೋಪ ಹೊತ್ತು ದರ್ಶನ್, ಜೈಲು ಸೇರಿ ಬಂದಾಯಿತು. ಒರಟ ಪ್ರಶಾಂತನ ವಿರುದ್ಧ ಪತ್ನಿ ಶಶಿರೇಖಾ ದೂರು-ದುಮ್ಮಾನಗಳು ಓಡಾಡುತ್ತಿರುವ ಈ ಸಂದರ್ಭದಲ್ಲಿಯೇ ಮತ್ತೊಬ್ಬ ನಟನ ವಿರುದ್ಧ ಆರೋಪ ಕೇಳಿ ಬಂದಿದೆ. ಅದು ನಟ ವಿನೋದ್ ಪ್ರಭಾಕರ್ ಹೆಸರು.
ಶರತ್ ಕುಮಾರ್ ಎಂಬ ಉದ್ಯಮಿ, ತನ್ನ ಹೆಂಡತಿ ಬೇರೊಬ್ಬರ ಜೊತೆ ಮೊಬೈಲ್ ಫೋನಿನಲ್ಲಿ ಹೆಚ್ಚು ಮಾತನಾಡುತ್ತಾಳೆ ಎಂದು ಆರೋಪಿಸಿ ಇಬ್ಬರ ಮೊಬೈಲ್ ನಂಬರ್ ಕೊಟ್ಟಿದ್ದಾರೆ. ಅವುಗಳಲ್ಲಿ ಒಂದು ನಟ ವಿನೋದ್ ಪ್ರಭಾಕರ್ ಅವರದು. ಮೂರು ತಿಂಗಳ ಹಿಂದೆಯೇ ದೂರು ದಾಖಲಿಸಲಾಗಿದೆ.
ಪೊಲೀಸರು ನಟನ ವಿರುದ್ಧ ಯಾವುದೇ ದೂರು ತೆಗೆದುಕೊಂಡಿಲ್ಲ. ಬದಲಿಗೆ ಕೌಟುಂಬಿಕ ಕಲಹ ಹಾಗೂ ದೌರ್ಜನ್ಯದ ಆರೋಪದ ಮೇಲೆ ದೂರು ಸಲ್ಲಿಸಿರುವ ಶರತ್ ಕುಮಾರ್ ಅವರನ್ನೇ ಬಂಧಿಸಿದ್ದಾರೆ ಎನ್ನಲಾಗಿದೆ. ಆದರೆ ಉಪ್ಪಾರಪೇಟೆ ಪೊಲೀಸರು ವಿನೋದ್ ಪ್ರಭಾಕರ್ ಯಾರೆಂದೇ ಗೊತ್ತಿಲ್ಲ, ಯಾವ ದೂರೂ ದಾಖಲಾಗಿಲ್ಲ ಎಂದಿರುವ ಮಾಹಿತಿ ಲಭಿಸಿದೆ.
ಮುಂದಿನ ನಡೆ ಹಾಗೂ ಸಂಪೂರ್ಣ ಮಾಹಿತಿ ಇನ್ನಷ್ಟೇ ತಿಳಿಯಬೇಕಾಗಿದೆ. ಒಬ್ಬರಾದ ಮೇಲೆ ಇನ್ನೊಬ್ಬರಂತೆ ಸ್ಯಾಂಡಲ್ ವುಡ್ ನಟರು ವಿವಾದದಲ್ಲಿ ಸಿಲುಕುತ್ತಿರುವುದು ಸಿನಿಮಾ ಉದ್ಯಮದತ್ತ ಎಲ್ಲರೂ ಬಿಟ್ಟ ಕಣ್ಣು, ಬಾಯಿ ಬಿಟ್ಟುಕೊಂಡೇ ಇರುವಂತೆ ಮಾಡಿದೆ. ವಿನೋದ್ ಪ್ರಭಾಕರ್ ಎಪಿಸೋಡ್ ಪ್ರಾರಂಭವಾಗಿದೆ, ಹೇಗೆ ಯಾವಾಗ ಮುಗಿಯುವುದೋ!


Click it and Unblock the Notifications











