ಬಾಯ್ ಫ್ರೆಂಡ್ ಕೈಹಿಡಿದ ಇಂತಿ ನಿನ್ನ ಪ್ರೀತಿಯ ಸೋನು
ಹಲವಾರು ಕನ್ನಡ ಚಿತ್ರಗಳಲ್ಲಿ ಅಭಿನಯಿಸಿರುವ ನಟಿ ಸೋನು ಸೋಮವಾರ (ನ.1) ದಾಂಪತ್ಯ ಜೀವನಕ್ಕೆ ಅಡಿಯಿಟ್ಟರು. ಕಳೆದ ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದ ಬಾಯ್ ಫ್ರೆಂಡ್ ಮನೋಜ್ ಕುಮಾರ್ (ಮನು) ಕೈಹಿಡಿಯುವ ಮೂಲಕ ನೂತನ ದಾಂಪತ್ಯಕ್ಕೆ ಪ್ರವೇಶಿಸಿದರು.
ಜೆ ಪಿ ನಗರದ ರಂಗಶಂಕರ ಬಳಿ ಇರುವ ವೆಂಕಟೇಶ್ವರ ದೇವಾಲಯದಲ್ಲಿ ಗುರು ಹಿರಿಯ ಸಮ್ಮುಖದಲ್ಲಿ ಸೋನು ಮತ್ತು ಮನೋಜ್ ಮದುವೆ ನೆರವೇರಿತು. ಮನೋಜ್ ಉದ್ಯಮಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರಂತೆ. ಸೂರಿ ನಿರ್ದೇಶನದ 'ಇಂತಿ ನಿನ್ನ ಪ್ರೀತಿಯ' ಚಿತ್ರದ ಮೂಲಕ ಸೋನು ಬೆಳ್ಳಿತೆರೆಗೆ ಅಡಿಯಿಟ್ಟಿದ್ದರು.
ಸೋನು ಅವರ ತಂದೆ ಮೇಕಪ್ ಕಲಾವಿದರು. ನವೆಂಬರ್ 3ರಂದು ಆರತಕ್ಷತೆ ಕಾರ್ಯಕ್ರಮ ಬುಲ್ ಟೆಂಪಲ್ ರಸ್ತೆಯ ಗಂಜಾಮ್ ಹಾಲ್ ನಲ್ಲಿ ನಡೆಯಲಿದೆ. ಅಂದಹಾಗೆ ಸೋನು ಕನ್ನಡದ 'ಪರಮೇಶ ಪಾನ್ ವಾಲ', 'ಗುಲಾಮ' ಮತ್ತು 'ಪೊಲೀಸ್ ಕ್ವಾಟ್ರಸ್' ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
ಸೋನು ಮದುವೆ ಇಂತಿ ನಿನ್ನ ಪ್ರೀತಿಯ ಗುಲಾಮ ಪರಮೇಶ ಪಾನ್ ವಾಲ sonu marriage wedding bells paramesha panwala gulama police quarters


Click it and Unblock the Notifications