ನಟ ಜಗ್ಗೇಶ್ ಈಗ ಮಂಜುನಾಥ ಬಿಎ ಎಲ್‌ಎಲ್‌ಬಿ
ನವರಸ ನಾಯಕ ಜಗ್ಗೇಶ್ ಈಗ ಬಿಎ ಎಲ್‌ಎಲ್‌ಬಿ ಪದವೀಧರ! ಅಯ್ಯೋ ಶಿವನೇ ಅವರು ಯಾವಾಗ ಬಿಎ ಎಲ್‌ಎಲ್‌ಬಿ ಮಾಡಿದರಪ್ಪಾ ಎಂಬುದು ತಾನೆ ನಿಮ್ಮ ಡೌಟು. 'ಎದ್ದೇಳು ಮಂಜುನಾಥ'ನ ಮಹಿಮೆಯೋ ಏನೋ ಈಗ ಮತ್ತೊಮ್ಮೆ 'ಮಂಜುನಾಥ ಬಿಎ ಎಲ್‌ಎಲ್‌ಬಿ' ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ.
ಜಗ್ಗೇಶ್ ಅಭಿನಯದ 'ಬಾಡಿಗಾರ್ಡ್' ಚಿತ್ರ ಬಾಕ್ಸಾಫೀಸಲ್ಲಿ ಬೋರಲು ಮಲಗಿದ ಮೇಲೆ. ಈಗ ರೀಮೇಕ್ ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. 'ಮಂಜುನಾಥ ಬಿಎ ಎಲ್‌ಎಲ್‌ಬಿ' ಚಿತ್ರ ಮಲಯಾಳಂನ 'ಹಲೋ' ಚಿತ್ರದ ರೀಮೇಕ್. ಆಕ್ಷನ್ ಕಟ್ ಹೇಳುತ್ತಿರುವವರು ನಟ ಮೋಹನ್.
ಡಿಸೆಂಬರ್ 1ರ ಶುಭ ಗುರುವಾರ ಚಿತ್ರ ಸೆಟ್ಟೇರಿದೆ. ಸುರೇಶ್ ಭೈರಸಂದ್ರ ಅವರ ಛಾಯಾಗ್ರಹಣ ಚಿತ್ರಕ್ಕಿದ್ದು, ರೆಗ್ಯುಲರ್ ಚಿತ್ರೀಕರಣ ಡಿಸೆಂಬರ್ 12ರಿಂದ ಆರಂಭವಾಗಲಿದೆ. ಈ ಚಿತ್ರಕ್ಕೆ ನಾಯಕಿಯಾಗಿ ನಿಖಿತಾ ತುಕ್ರಲ್ ಹೆಸರು ಕೇಳಿಬರುತ್ತಿದೆ. (ಏಜೆನ್ಸೀಸ್)
More from Filmibeat
English summary
Navarasa Nayaka jaggesh forthcoming film has been titled as Manjunatha BA.LLB. Sources say this is the remake of the Malayalam hit Hello and the film would be launched on December 1st.


Click it and Unblock the Notifications











