ಬಾಲಿವುಡ್ ದಿಗಂತಕ್ಕೆ ಧೂದ್‌ಪೇಡ ದಿಗಂತ್
ಕನ್ನಡದಲ್ಲಿ ಸಾಕಷ್ಟು ಅವಕಾಶಗಳನ್ನು ಗಿಟ್ಟಿಸಿಕೊಂಡಿರುವ 'ಜಾಲಿ ಬಾಯ್' ದಿಗಂತ್ ಶೀಘ್ರದಲ್ಲೆ ಬಾಲಿವುಡ್ ಚಿತ್ರಕ್ಕೆ ಸಹಿಹಾಕಲಿದ್ದಾರೆ. ಮಣಿ ಶಂಕರ್ ನಿರ್ದೇಶಿಸಲಿರುವ ಈ ಚಿತ್ರದ ನಾಯಕ ನಟ ದಿಗಂತ್. ಈ ಮೂಲಕ ಬಾಲಿವುಡ್‌ಗೆ ಮತ್ತೊಬ್ಬ ಚಾಕೋಲೇಟ್ ಹೀರೋ ಸಿಕ್ಕಂತಾಗಿದೆ.
ಈ ಹಿಂದೆ ಮಣಿ ಶಂಕರ್ ಅವರು ನಾಕ್ ಔಟ್, 16th ಡಿಸೆಂಬರ್, ರುದ್ರಾಕ್ಷ, ಟಾಂಗೋ ಚಾರ್ಲಿ ಹಾಗೂ ಮುಕ್ಬರ್ ಚಿತ್ರಗಳಿಗೆ ಆಕ್ಷನ್ ಕಟ್ ಹೇಳಿದ್ದಾರೆ. ಈ ಬಗ್ಗೆ ಮಾತನಾಡಿರುವ ದಿಗಂತ್, ಇನ್ನೂ ಡೇಟ್ಸ್ ಕನ್ಫರ್ಮ್ ಆಗಿಲ್ಲ. ಸದ್ಯಕ್ಕೆ ಮಾತುಕತೆ ನಡೆಯುತ್ತಿದ್ದು ಇನ್ನಷ್ಟೆ ವಿವರಗಳು ಹೊರಬೀಳಲಿವೆ.
ಸದ್ಯಕ್ಕೆ ಕನ್ನಡದಲ್ಲಿ ದಿಗಂತ್ ಪಾರಿತಾಜ, ಮೈನಾ, ತುಂಬ ಇಷ್ಟ ಸ್ವಲ್ಪ ಕಷ್ಟ ಸೇರಿದಂತೆ ಸಾಕಷ್ಟು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಹೌದು ಇಷ್ಟಕ್ಕೂ ದಿಗಂತ್ ಜೊತೆ ಬಾಲಿವುಡ್‌ನಲ್ಲಿ ನಟಿಸಲಿರುವ ಸುಂದರಿ ಯಾರು ಎಂಬುದು ಸದ್ಯಕ್ಕೆ ಸದ್ಯಕ್ಕೆ ಕುತೂಹಲ ಮೂಡಿಸಿರುವ ಅಂಶ. (ಏಜೆನ್ಸೀಸ್)
More from Filmibeat
English summary
Kannada actor Diganth has got a chance to act in Hindi film. This film will be directed by Mani Shankar who had directed Bollywood films Knock Out , 16th December, Rudraksh, Tango Charlie and Mukhbir.


Click it and Unblock the Notifications











