»   » ಹಬ್ಬದ ಸಮಯಕ್ಕೆ,ಗಣೇಶ ಮತ್ತೆ ಬಂದ

ಹಬ್ಬದ ಸಮಯಕ್ಕೆ,ಗಣೇಶ ಮತ್ತೆ ಬಂದ

Subscribe to Filmibeat Kannada

ಭಾದ್ರಪದ ಶುಕ್ಲ ಚತುರ್ಥಿಯ ಶುಭದಿನ ಗೌರಿನಂದನನ ಆಗಮನ. ಅದರ ಮರುದಿನ ಸೌಭಾಗ್ಯ ಪಿಕ್ಚರ್ಸ್ ಅವರ ಗಣೇಶನ ಆಗಮನ. ಅಂದರೆ ಫಣಿ ರಾಮಚಂದ್ರ ನಿರ್ದೇಶನದ ಗಣೇಶ ಮತ್ತೆ ಬಂದ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ಹಲವು ವರ್ಷಗಳ ನಂತರ ಫಣಿರಾಮಚಂದ್ರ ಅವರು ಗಣೇಶನೊಂದಿಗೆ ಮತ್ತೆ ಬಂದಿದ್ದಾರೆ. ಗಣೇಶನನ್ನು ಪಟ್ಟಾಗಿ ಹಿಡಿದಿರುವ ನಿರ್ದೇಶಕರು ಈ ಚಿತ್ರದ ಮೂಲಕ ಪ್ರೇಕ್ಷಕರಿಗೆ ವಿಶಿಷ್ಟ ಮನೋರಂಜನೆ ನೀಡುವಲ್ಲಿ ಮುಂದಾಗಿದ್ದಾರೆ. ನಿರ್ಮಾಪಕ ಎಸ್.ಎ.ಚಿನ್ನೇಗೌಡರ ಪತ್ನಿ ಶ್ರೀಮತಿ ಜಯಮ್ಮಚಿನ್ನೇಗೌಡ ನಿರ್ಮಾಣದ ಈ ಚಿತ್ರದಲ್ಲಿ ಅವರ ಜೇಷ್ಠ ಪುತ್ರ ವಿಜಯರಾಘವೇಂದ್ರ ನಾಯಕನಾಗಿ ಅಭಿನಯಿಸಿದ್ದಾರೆ. ಅವರೊಟ್ಟಿಗೆ ವಿಶಾಲ್‌ಹೆಗ್ಡೆ, ಅನಂತನಾಗ್, ನೀತು, ಪ್ರಜ್ಞಾ, ಪ್ರೀತಿ, ವಿನಯಾಪ್ರಕಾಶ್, ದೊಡ್ಡಣ್ಣ, ವಿಕ್ರಂಸೂರಿ ಮುಂತಾದವರಿದ್ದಾರೆ.

ಜೆ.ಎಂ.ಪ್ರಹ್ಲಾದ್ ಅವರು ಕತೆ ಬರೆದಿರುವ ಈ ಚಿತ್ರಕ್ಕೆ ವಿ.ಮನೋಹರ್ ಸಂಗೀತ ಸಂಯೋಜಿಸಿದ್ದಾರೆ. ರೇಣುಕುಮಾರ್ ಛಾಯಾಗ್ರಹಣ, ಇಮ್ರಾನ್, ಚಿನ್ನಿಪ್ರಕಾಶ್ ನೃತ್ಯ, ಇಸ್ಮಾಯಿಲ್ ಕಲೆ, ರಾಮು, ಮಂಜುನಾಥ್ ಸಹನಿರ್ದೇಶನ, ರವಿಶಂಕರ್ ಹಾಗೂ ಜೈಕುಮಾರ್ ಅವರ ನಿರ್ಮಾಣನಿರ್ವಹಣೆ ಗಣೇಶ ಮತ್ತೆ ಬಂದ ಚಿತ್ರಕ್ಕಿದೆ.

(ದಟ್ಸ್ ಕನ್ನಡಸಿನಿ ವಾರ್ತೆ)

ವಿಜಯ್ ರ 'ಗಣೇಶ ಮತ್ತೆ ಬಂದ' ಚಿತ್ರಕ್ಕೆ ಸಂಗೀತ

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada