For Quick Alerts
  ALLOW NOTIFICATIONS  
  For Daily Alerts

  'ಜೋಶ್' ಚಿತ್ರ ಮಾತಿನ ಮನೆಯಲ್ಲಿ

  By Staff
  |

  ತೆಂಗಿನಕಾಯಿ ಒಡಿಸಿಕೊಂಡು ಆರಂಭವಾಗುವ ಎಷ್ಟೋ ಚಿತ್ರಗಳಿಗೆ ಕುಂಬಳಕಾಯಿ ನೋಡುವ ಸೌಭಾಗ್ಯವಿರುವುದಿಲ್ಲ. ಚಿತ್ರೀಕರಣ ಅಂದುಕೊಂಡ ಹಾಗೆ ಪೂರ್ಣವಾದರೆ ನಿರ್ಮಾಪಕರಿಗೆ ಅದಕ್ಕಿಂತ ಸಂತಸವಿಲ್ಲ. ಈಗ ಚಿತ್ರೀಕರಣವನ್ನು ಯಶಸ್ವಿಯಾಗಿ ಪೂರೈಸಿದ ಸಂತಸದಲಿರುವವರು ನಿರ್ಮಾಪಕ ಎಸ್.ವಿ.ಬಾಬು. 'ಜೋಶ್ ಚಿತ್ರಕ್ಕೆ ಕಳೆದವಾರ 60ದಿನಗಳ ಚಿತ್ರೀಕರಣ ಪೂರ್ಣವಾಗಿ ಕುಂಬಳಕಾಯಿ ಒಡೆಯಲಾಗಿದೆ.

  ಹೊಸಬರ ತಂಡದೊಂದಿಗೆ ಕೆಲಸ ಮಾಡಿದ ಖುಷಿ ಒಂದೆಡೆಯಾದರೆ ನಿರ್ಮಾಪಕರ ಸಂಪೂರ್ಣ ಸಹಕಾರ ಮತ್ತೊಂದೆಡೆ. ನಿರ್ದೇಶಕ ತನ್ನ ಇಚ್ಛೆಗೆ ಬಂದ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಲು ಬಾಬು ಅವರಂತಹ ನಿರ್ಮಾಪಕರು ಅಗತ್ಯ ಎಂದ ಶಿವಮಣಿ ಹಾಗಾಗಿ ನಾನು ಜೈಪುರ ಹಾಗೂ ಮುಂತಾದೆಡೆ ಚಿತ್ರೀಕರಣ ಸರಾಗವಾಗಿ ಪೂರೈಸಲು ಕಾರಣವಾಯಿತು ಎಂದಿದ್ದಾರೆ.

  ತಾರಾಗಣ ಹಾಗೂ ತಂತ್ರಜ್ಞರ ಆಯ್ಕೆಯಿಂದ ಹಿಡಿದು ಚಿತ್ರೀಕರಣ ಮುಗಿಯುವ ತನಕ ಆದ ಘಟನೆಗಳು ನನಗೆ ವಿಶೇಷ ಅನುಭವ ನೀಡಿದೆ ಎಂಬುದು ನಿರ್ದೇಶಕರ ಅನಿಸಿಕೆ. ಪ್ರಸ್ತುತ ಮಾತಿನ ಮನೆಯಲ್ಲಿರುವ ಜೋಶ್ ಚಿತ್ರವನ್ನು ಎಸ್.ವಿ.ಬಾಬು ಅವರ ಪುತ್ರ ಸಂಜಯ್‌ಬಾಬು ನಿರ್ಮಿಸಿದ್ದಾರೆ. ಡಿ ಐ ತಂತ್ರಜ್ಞಾನದಿಂದ ಅಲಂಕರಿಸುವ ಚಿತ್ರದ ಹಾಡುಗಳ ನೃತ್ಯ ನಿರ್ದೇಶನಕ್ಕಾಗಿ ಮುಂಬೈಯಿಂದ ಸ್ಟ್ಯಾನ್ಲಿ ಡಿ ಕೋಸ್ಟಾ, ನೊಬಲ್, ಪವನ್‌ಕಲ್ಯಾಣ್ ಚಿತ್ರಗಳಿಗೆ ನೃತ್ಯ ನಿರ್ದೆಶಕರಾಗಿದ್ದ ಹರೀಶ್ ಪೈ ಹಾಗೂ ಪ್ರಿಯದರ್ಶನ್ ಅವರ ಚಿತ್ರಗಳಿಗೆ ನೃತ್ಯ ಸಂಯೋಜಿಸಿದ್ದ ಸೆಲ್ವಿ ಅವರು ಆಗಮಿಸಿ ಹಾಡಿನ ಶ್ರೀಮಂತಿಕೆಯನ್ನು ಹೆಚ್ಚಿಸಿದ್ದಾರೆ.

  ಎರಡು ಹಾಡುಗಳ ಚಿತ್ರೀಕರಣಕ್ಕೆ ತಲಾ 20ಲಕ್ಷಕ್ಕೂ ಅಧಿಕ ವೆಚ್ಚ ಮಾಡಿರುವುದಾಗಿ ನಿರ್ಮಾಪಕರು ತಿಳಿಸಿದ್ದಾರೆ. ಶಿವಮಣಿ ಅವರೇ ಕತೆ, ಚಿತ್ರಕತೆ ಬರೆದಿರುವ 'ಜೋಶ್ಗೆ ಬಿ.ಎ.ಮಧು ಸಂಭಾಷಣೆ ಬರೆದಿದ್ದಾರೆ. ವರ್ಧನ್ ಸಂಗೀತ, ಸಂತೋಷ್ ರೈ ಪತಾಜೆ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನವಿರುವ ಚಿತ್ರದ ತಾರಾಬಳಗದಲ್ಲಿ ರಾಕೇಶ್, ವಿಷ್ಣುಪ್ರಸನ್ನ, ಅಕ್ಷಯ್, ಅಲೋಕ್, ಜಗನ್ನಾಥ್, ಅಮಿತ್, ರೋಬೊಗಣೇಶ್, ಪೂರ್ಣ, ಸ್ನೇಹ, ಚೇತನ್, ಮಂಡ್ಯರಮೇಶ್, ಕರಿಬಸವಯ್ಯ, ಮನದೀಪ್‌ರಾಯ್, ಶ್ರೀನಿವಾಸಪ್ರಭು, ಸುಧಾಬೆಳವಾಡಿ, ತುಳಸಿಶಿವಮಣಿ ಮುಂತಾದವರಿದ್ದಾರೆ.
  (ದಟ್ಸ್ ಕನ್ನಡ ಸಿನಿವಾರ್ತೆ)

  'ಜೋಶ್'ನಲ್ಲಿ ಅಪಾರ ವೆಚ್ಚದ ಸುಂದರ ಗೀತೆ
  ಜೈಪುರದಲ್ಲಿ ಜೋಶ್ಹಾಡಿಗೆ ಕುಣಿದ ಹುಡುಗರು
  ದ್ವಿತೀಯ ಹಂತದ ಚಿತ್ರೀಕರಣದಲ್ಲಿ 'ಜೋಶ್'
  ಜೋಶ್‌ನಲ್ಲಿ ಲಂಡನ್ ಬೆಡಗಿ ನವನಟರ ನರ್ತನ

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X