For Quick Alerts
  ALLOW NOTIFICATIONS  
  For Daily Alerts

  ಡಿಸೆಂಬರ್‌ನಲ್ಲಿ Rascal ಆಗಲಿದ್ದಾರೆ ನಟ ಆದಿತ್ಯ

  By Rajendra
  |

  ಡೆಡ್ಲಿ ಸೋಮ ಖ್ಯಾತಿಯ ನಟ ಆದಿತ್ಯ ಈಗ Rascal ಆಗಿದ್ದಾರೆ. ಜೈ ಜಗದೀಶ್ ಹಾಗೂ ವಿಜಯಲಕ್ಷ್ಮಿ ಸಿಂಗ್ ನಿರ್ಮಾಣದ ಈ ಚಿತ್ರ ಡಿಸೆಂಬರ್ 14ರಂದು ಸೆಟ್ಟೇರಲಿದೆ. ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿರುವವರು ಮಾದೇಶ.

  ಈ ಚಿತ್ರದಲ್ಲಿ ನಾಯಕಿ ಪಾತ್ರಕ್ಕೆ ಬಹಳ ಪ್ರಾಮುಖ್ಯತೆ ನೀಡಲಾಗಿದೆಯಂತೆ. ಹಾಗಾಗಿ ಯಾರನ್ನು ಆಯ್ಕೆ ಮಾಡಿದರೆ ಚೆನ್ನಾಗಿರುತ್ತದೆ ಎಂಬ ಗೊಂದಲದಲ್ಲಿರುವ ಕಾರಣ ನಾಯಕಿಯ ಆಯ್ಕೆ ಇನ್ನೂ ಅಂತಿಮವಾಗಿಲ್ಲ.

  ಬಹುಶಃ ರಾಧಿಕಾ ಪಂಡಿತ್ ಅವರನ್ನು ಆಯ್ಕೆ ಮಾಡುವ ಸಾಧ್ಯತೆಗಳಿವೆ. ಡಿಸೆಂಬರ್‌ನಲ್ಲಿ ರಾಧಿಕಾ ಸಖತ್ ಬಿಜಿಯಾಗಿರುವ ಕಾರಣ ಅವರ ಡೇಟ್ಸ್ ಹೊಂದಾಣಿಕೆಯಾಗುವುದೇ ಕಷ್ಟವಾಗಿದೆ. 'ಬ್ರೇಕಿಂಗ್ ನ್ಯೂಸ್' ಹಾಗೂ 'ಅಲೆಮಾರಿ' ಚಿತ್ರಗಳಲ್ಲಿ ರಾಧಿಕಾ ಬಿಜಿಯಾಗಿದ್ದಾರೆ. ಅವರು ಎಸ್ ಎಂದರೆ ಚಿತ್ರಕ್ಕೆ ಅವರೇ ನಾಯಕಿ. (ಏಜೆನ್ಸೀಸ್)

  English summary
  Aditya's new movie titled as Rascal. The film is being produced by produced by Jai Jagadish and his wife Vijayalakshmi Singh. Maadesh is the director of the film. Radika Pandit may play the female lead. 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X