ಗಣೇಶ್ ಕೂಲ್ ಹಿಟ್ ಅಲ್ಲ ಆದರೆ ಫ್ಲಾಪ್ ಆಗಿಲ್ಲ!

By Rajendra

ಗೋಲ್ಡನ್ ಸ್ಟಾರ್ ಗಣೇಶ್ ಚೊಚ್ಚಲ ನಿರ್ದೇಶನದ 'ಕೂಲ್ ಸಖತ್ ಹಾಟ್ ಮಗಾ' ಚಿತ್ರ ಸೋತಿದೆ ಎಂಬ ಸುದ್ದಿಯನ್ನು ಅವರು ಅಲ್ಲಗಳೆದಿದ್ದಾರೆ. ತಮ್ಮ ಚೊಚ್ಚಲ ನಿರ್ದೇಶನದಲ್ಲಿ ಭರ್ಜರಿ ಲಾಭ ಬರದಿದ್ದರೂ ಲಾಸಂತೂ ಆಗಿಲ್ಲ ಎಂದಿದ್ದಾರೆ ಗಣೇಶ್.

ಕೂಲ್ ಚಿತ್ರ ಸೂಪರ್ ಆಗಿಲ್ಲ ಎಂಬ ಮಾತನ್ನು ಒಪ್ಪುತ್ತೀನಿ. ಈ ಚಿತ್ರ ನನ್ನ ವಿಶ್ವಾಸವನ್ನು ಇಮ್ಮಡಿಸಿದೆ. ನನ್ನ ಚಿತ್ರದ ಬಗ್ಗೆ ಕೆಟ್ಟ ಕೆಟ್ಟದಾಗಿ ಮಾತನಾಡುವವರ ಬಗ್ಗೆ ಡೋಂಟ್ ಕೇರ್. ನನ್ನ ಪತ್ನಿ ನನಗೆ ಮುಖ್ಯ. ಆದರೆ ನಾನು ತೆಗೆದುಕೊಳ್ಳುವ ನಿರ್ಧಾರಗಳ ಬಗ್ಗೆ ಶಿಲ್ಪಾರದ್ದು ಏನೂ ತಕರಾರಿಲ್ಲ ಎಂದಿದ್ದಾರೆ ಗಣೇಶ್.

ಮುಸ್ಸಂಜೆ ಮಹೇಶ್ ನನ್ನ ಚಿತ್ರದಿಂದ ಹೊರ ನಡೆದಾಗ ನಾನೇ ಚಿತ್ರ ನಿರ್ದೇಶನಕ್ಕೆ ಮುಂದಾದೆ. ಚಿತ್ರ ನಿರ್ದೇಶಿಸುವಷ್ಟೂ ದಿನವೂ ನಾನು ಕೂಲ್ ಆಗಿಯೇ ಇದ್ದೆ. ಆರಂಭದ ನನ್ನ ಟೆಲಿವಿಷನ್ ದಿನಗಳನ್ನು ನೆನಪಿಸುವಂತಿತ್ತು. ಚಿತ್ರ ಬಿಡುಗಡೆಯಾಗಿ ಒಳ್ಳೆ ದುಡ್ಡು ಮಾಡಿದೆ. ಲಾಭ ತಂದುಕೊಟ್ಟಿದೆ. ಅದರ ಬಗ್ಗೆ ಮಾತ್ರ ಯಾರೂ ಮಾತನಾಡುತ್ತಿಲ್ಲ ಎಂದು ಗಣೇಶ್ ಬೇಸರ ವ್ಯಕ್ತಪಡಿಸಿದ್ದಾರೆ. (ದಟ್ಸ್‌ಕನ್ನಡ ಸಿನಿವಾರ್ತೆ)

More from Filmibeat

English summary
Golden star Ganesh says his debut directional Kool….Sakkath Hot Maga is not failure. Meanwhile he agrees it is not a super hit film. But it is a major gain for Ganesh. He blasts on those who are commenting against his first venture as director.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X