ಹುಡುಗರು 'ಹಿಟ್' ಗೆ ಯೋಗೀಶ್ ಕಾರಣ; ಪುನೀತ್ ಅಲ್ಲ
ಹುಡುಗರು ಚಿತ್ರದಲ್ಲಿ ಎಲ್ಲರೂ ಮೆಚ್ಚಿದ್ದು ಲೂಸ್ ಮಾದ ಅಲಿಯಾಸ್ 'ಯೋಗೇಶ್' ಅಭಿನಯ. ಚಿತ್ರ ನೋಡಿದವರೆಲ್ಲಾ ಬೇರೆಯವರ ಅಭಿನಯಕ್ಕಿಂತ ಯೋಗೇಶ್ ಅಭಿನಯವನ್ನು ಅತೀ ಹೆಚ್ಚು ಪ್ರಶಂಸಿಸಿದ್ದಾರೆ. ಹುಡುಗರು ಅಂದರೆ ಮೊದಲು ಪ್ರೇಕ್ಷಕರಿಗೆ ನೆನಪಾಗುವುದು ಪುನೀತ್ ಅಲ್ಲ, ಲೂಸ್ ಮಾದ ಯೋಗೇಶ್.
ತಮಿಳು ರಿಮೇಕ್ ಹುಡುಗರು ಬಾಕ್ಸ್ ಆಫೀಸ್ ನಲ್ಲಿ ಸೂಪರ್ ಹಿಟ್ ಆಗಿರುವ ಚಿತ್ರ. ಅದರಲ್ಲಿ ಹುಡುಗರಾಗಿ ನಟಿಸಿದ್ದು, ಪುನೀತ್, ಶ್ರೀನಗರ ಕಿಟ್ಟಿ ಹಾಗೂ ಯೋಗೇಶ್. "ಈ ಮೂವರಲ್ಲಿ ಚಿತ್ರವನ್ನು ಗೆಲ್ಲಿಸಿದ್ದು ಪುನೀತ್ ಅಲ್ಲ, ಅದು ಯೋಗೇಶ್. ನಾನು ಅವನ ಅಭಿಮಾನಿ." ಹೀಗೆಂದು ಹೇಳಿದವರು ಸ್ವತಃ ಈ ಚಿತ್ರದ ನಿರ್ಮಾಪಕ ರಾಘವೇಂದ್ರ ರಾಜ್ ಕುಮಾರ್.
"ಪುನೀತ್ ಭೀಮೇಶ್ವರದಲ್ಲಿ ಶೂಟಿಂಗ್‌ನಲ್ಲಿದ್ದರೆ, ಶಿವರಾಜ್ ಕುಮಾರ್ ಪ್ಯಾರಿಸ್‌ನಲ್ಲಿದ್ದಾರೆ. ಆದರೂ ಯೋಗೇಶ್ ಮೇಲಿನ ಅಭಿಮಾನದಿಂದ ನಾನು ಆಡಿಯೋ ಬಿಡುಗಡೆ ಸಮಾರಂಭಕ್ಕೆ ಬಂದಿದ್ದೇನೆ. ನಮ್ಮ ಪುನೀತ್‌ಗೆ ಯೋಗೇಶ್ ಜತೆ ಇನ್ನೂ ಸಾಕಷ್ಟು ಸಿನಿಮಾಗಳಲ್ಲಿ ನಟಿಸುವ ಬಯಕೆಯಿದೆ. ಆತನೀಗ ಯೋಗಿ ಫ್ಯಾನ್ ಆಗಿ ಬಿಟ್ಟಿದ್ದಾನೆ" ಎಂದು ರಾಘಣ್ಣ ಹೇಳಿದ್ದಾರೆ. ಅಲ್ಲಿಗೆ ಯೋಗೇಶ್ ಹಾಗೂ ಅಭಿಮಾನಿಗಳ ದಿಲ್ ಫುಲ್ ಖುಷ್. (ಒನ್ ಇಂಡಿಯಾ ಕನ್ನಡ)


Click it and Unblock the Notifications











