»   » ಚಿಕ್ಕಮಗಳೂರಲ್ಲಿ ಸಾಗಿದೆ 'ನಂ ಯಜಮಾನ್ರ' ದರ್ಬಾರು

ಚಿಕ್ಕಮಗಳೂರಲ್ಲಿ ಸಾಗಿದೆ 'ನಂ ಯಜಮಾನ್ರ' ದರ್ಬಾರು

Subscribe to Filmibeat Kannada

27ವರ್ಷಗಳ ಹಿಂದೆ ತೆರೆಕಂಡ ಬಂಗಾರದ ಜಿಂಕೆ ಚಿತ್ರದ ನಂತರ ಸಾಹಸಸಿಂಹ ಡಾ:ವಿಷ್ಣುವರ್ಧನ್ ಹಾಗೂ ಖ್ಯಾತ ನಿರ್ದೇಶಕ ನಾಗಾಭರಣ ಸಂಗಮದ ನಂ ಯಜಮಾನ್ರು ಚಿತ್ರವನ್ನು ಕರಿಸುಬ್ಬು ಅವರು ಅರ್ಪಿಸಿ ರಾಜಶೇಖರ್ ಅವರು ನಿರ್ಮಿಸುತ್ತಿದ್ದಾರೆ.

ಬೆಂಗಳೂರಿನ ಹೊರವಲಯದ ಸ್ಯಾಮಿಸ್ ಡ್ರೀಂ ಲ್ಯಾಂಡ್‌ನಲ್ಲಿ 10 ದಿನಗಳ ಕಾಲ ಬಿರುಸಿನ ಚಿತ್ರೀಕರಣ ಪೂರೈಸಿರುವ ನಂ ಯಜಮಾನ್ರು ಮಾತಿನ ಭಾಗದ ಚಿತ್ರೀಕರಣಕ್ಕಾಗಿ ಚಿಕ್ಕಮಗಳೂರಿಗೆ ತೆರಳಿದ್ದಾರೆ. ಡಾ:ವಿಷ್ಣುವರ್ಧನ್, ನವ್ಯಾ ನಾಯರ್, ಲಕ್ಷ್ಮೀ ಗೋಪಾಲಸ್ವಾಮಿ, ರಮೇಶ್‌ಭಟ್ ಹಾಗೂ ಚಿತ್ರಾಶೆಣೈ ಬೆಂಗಳೂರಿನಲ್ಲಿ ನಡೆದ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು.

ವಿಷ್ಣುವರ್ಧನ್ ಅವರು ಈ ಚಿತ್ರದಲ್ಲಿ ಜನುಮದ ಜೋಡಿ.ಕಾಮ್ನ ಮಾಲೀಕನಾಗಿ ವಿಭಿನ್ನ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಇಂದಿನ ಪೀಳಿಗೆಯನ್ನು ಕಾಡುತ್ತಿರುವ ಸಾಮಾಜಿಕ ವಿಷಯ, ಅವುಗಳ ಸಾಧಕ-ಬಾಧಕಗಳ ವಿಶ್ಲೇಷಣೆ ಚಿತ್ರದಲ್ಲಿ ಅಡಕವಾಗಿದೆ. ನಾಗಾಭರಣ ಅವರು ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಹಂಸಲೇಖ ಅವರ ಗೀತರಚನೆ, ಸಂಗೀತವಿದೆ. ರಮೇಶ್‌ಬಾಬು ಛಾಯಾಗ್ರಹಣ, ಶಿವು ಸಂಕಲನ, ಬಿ.ಎಲ್.ವೇಣು ಸಂಭಾಷಣೆ, ರಾಂಶೆಟ್ಟಿ ಸಾಹಸ, ಚಿನ್ನಿಪ್ರಕಾಶ್ ನೃತ್ಯ, ಎಂ.ಎಸ್.ಮಠ ಸಹ ನಿರ್ದೇಶನ.

ಡಾ:ವಿಷ್ಣುವರ್ಧನ್, ವಿಜಯರಾಘವೇಂದ್ರ, ಅನಂತನಾಗ್, ನವ್ಯನಾಯರ್, ಲಕ್ಷ್ಮೀ ಗೋಪಾಲಸ್ವಾಮಿ, ರಮೇಶ್‌ಭಟ್, ಚಿತ್ರಾಶೆಣೈ, ಉಮೇಶ್, ಮೈಕಲ್‌ಮಧು ಮುಂತಾದವರ ತಾರಾಗಣ ಚಿತ್ರದಲ್ಲಿದೆ.

ಪೂರಕ ಓದಿಗೆ
ನಾಗಾಭರಣ ಚಿತ್ರದಲ್ಲಿ ವಿಷ್ಣು ಜೊತೆ ನವ್ಯಾ ನಾಯರ್
ನವ್ಯಾ ನಾಯರ್ ಚಿತ್ರಪಟ

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada