»   » ನಿರ್ದೇಶಕನ ನಾಯಕನಾಗಿ ನವೀನ್ ಕೃಷ್ಣ!

ನಿರ್ದೇಶಕನ ನಾಯಕನಾಗಿ ನವೀನ್ ಕೃಷ್ಣ!

Subscribe to Filmibeat Kannada
Naveen Krishna to act as director
ತಾನು ಮಾಡುವ ಕೆಲಸವನ್ನು ಪ್ರೀತಿಸದ ವ್ಯಕ್ತಿ ವಿರಳ. ಆತ ತನ್ನ ವೃತ್ತಿಯ ಬಗ್ಗೆ ಸಾವಿರಾರು ಕನಸು ಹೊತ್ತಿರುತ್ತಾನೆ. ಸಿನೆಮಾ ರಂಗದಲ್ಲೂ ಹೀಗೆ. ಎಲ್ಲರಿಗಿಂತ ಹೆಚ್ಚಿನ ಜವಾಬ್ದಾರಿ ನಿರ್ದೇಶಕನದ್ದು. ಪೂರ್ವದಲ್ಲಿ ಸಾಕಷ್ಟು ಜನರ ಬಳಿ ಸಹಾಯಕನಾಗಿ ದುಡಿದು ಹಲವು ತೊಂದರೆಗಳನ್ನು ಮೀರಿ ಆತ 'ನಿರ್ದೇಶಕ'ನ ಪಟ್ಟಕೇರಿರುತ್ತಾನೆ.

ಈ ಹಿಂದೆ 'ಬೆಳ್ಳಿಬೆಟ್ಟ' ಎಂಬ ಚಿತ್ರವನ್ನು ನಿರ್ದೇಶಿಸಿದ ಶಿವರಾಜ್‌ಹೊಸಕೆರೆ 'ತಾರೆ' ಚಿತ್ರದ ನಿರ್ದೇಶಕರೂ ಕೂಡ. ಶಿವರಾಜ್ ತಮ್ಮ ಮೂರನೇ ಚಿತ್ರಕ್ಕೆ 'ನಿರ್ದೇಶಕ' ಎಂಬ ವಿಶಿಷ್ಟ ಶೀರ್ಷಿಕೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಚಿತ್ರಕ್ಕೆ ಕತೆ, ಚಿತ್ರಕತೆ ಬರೆದಿರುವ ನಿರ್ದೇಶಕರು ನಿರ್ಮಾಣದ ಹೊಣೆಯನ್ನು ಹೊತ್ತಿದ್ದಾರೆ. ನಿರ್ದೇಶಕ 'ಆಕರ್ಷಕ' ಕಥಾಹಂದರ ಹೊಂದಿದೆ ಎನ್ನುವ ಶಿವರಾಜ್, ಚಿತ್ರಕ್ಕೆ ನವೀನ್‌ಕೃಷ್ಣರನ್ನು ನಾಯಕನನ್ನಾಗಿ ಸ್ವಾತಿ ಹಾಗೂ ನವ್ಯಾ ನಾಯಕಿಯರಾಗಿ ಆಯ್ಕೆಮಾಡಿಕೊಂಡಿದ್ದಾರೆ.

ಶ್ರೀಸಿದ್ದಲಿಂಗೇಶ್ವರ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ 'ನಿರ್ದೇಶಕ'ನಿಗೆ ಸದ್ಯದಲ್ಲೇ ಹಾಡುಗಳ ಧ್ವನಿಮುದ್ರಣ ನಡೆಯಲಿದ್ದು ಮುಂಬರುವ ಜನವರಿಯಲ್ಲಿ ಚಿತ್ರೀಕರಣ ಆರಂಭವಾಗಲಿದೆ. ವೆಂಕಟ್ ನಾರಾಯಣ್ ಸಂಗೀತ ಸಂಯೋಜಿಸುತ್ತಿರುವ ಈ ಚಿತ್ರಕ್ಕೆ ರೇಣುಕುಮಾರ್ ಅವರ ಛಾಯಾಗ್ರಹಣವಿದೆ. ಬಸವರಾಜ್ ಅರಸ್ ಸಂಕಲನ, ರುದ್ರೇಶ್‌ನಾಗಸಂದ್ರ ಸಂಭಾಷಣೆ, ಡಿಫ಼ರೆಂಟ್‌ಡ್ಯಾನಿ, ಜಂಪರ್ ರವಿ ಸಾಹಸ, ದೇವಸಂಪತ್, ನಟರಾಜ್ ನೃತ್ಯ, ಡಿ.ರಮೇಶ್ ಅವರ ನಿರ್ಮಾಣನಿರ್ವಹಣೆಯಿರುವ 'ನಿರ್ದೇಶಕ'ನಿಗೆ ಉಳಿದ ತಾರಾಗಣದ ಆಯ್ಕೆ ನಡೆಯುತ್ತಿದೆ.

(ದಟ್ಸ್ ಕನ್ನಡಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada