ದರ್ಶನ್ ನಿಖಿತಾ ಖಾಸಾ ದೋಸ್ತ್ ಓಂ ಗಪ್‌ಚಿಪ್!

By Rajendra

ನಟ ದರ್ಶನ್ ಪ್ರಕರಣದ ಗದ್ದಲ ಊರೆಲ್ಲಾ ಕೇಳಿಸುತ್ತಿದ್ದರೂ ಅವರ ಖಾಸಾ ದೋಸ್ತ್ ಓಂ ಪ್ರಕಾಶ್ ರಾವ್ ಮಾತ್ರ ತನಗೇನೂ ಗೊತ್ತೇ ಇಲ್ಲ ಎಂಬಂತಿದ್ದಾರೆ. ದರ್ಶನ್ ಜೊತೆ ಪ್ರಿನ್ಸ್, ಯೋಧ, ಮಂಡ್ಯ, ಅಯ್ಯ, ಕಲಾಸಿಪಾಳ್ಯದಂತಹ ಚಿತ್ರಗಳನ್ನು ಮಾಡಿದ ಓಂ ಈಗ ಮೌನಕ್ಕೆ ಶರಣಾಗಿದ್ದಾರೆ.

ಆರಂಭದಲ್ಲಿ ನಟಿ ನಿಖಿತಾರನ್ನು ದರ್ಶನ್‌ಗೆ ಪರಿಚಯಿಸಿದ್ದೇ ಓಂ. ಇವರಿಬ್ಬರಿಗೂ ಖಾಸಾ ದೋಸ್ತ್ ಓಂ ಗಪ್‌ಚಿಪ್ ಆಗಿದ್ದು ಯಾಕೆ? ಭೀಮಾತೀರದಲ್ಲಿ ಚಿತ್ರದ ಶೂಟಿಂಗ್‌ನಲ್ಲಿ ಸಚಿವ ರೇಣುಕಾಚಾರ್ಯರಿಗೆ ನಟನೆ ಹೇಳಿಕೊಡುವಾ ಟಿವಿ ಚಾನಲ್‌ಗಳಲ್ಲಿ ಕಾಣಿಸಿಕೊಂಡಿದ್ದು ಬಿಟ್ಟರೆ ಓಂ ಸುಳಿವಿಲ್ಲ.

ಇಷ್ಟಕ್ಕೂ ಓಂ ಏನಾದರು? ಎಲ್ಲಿಗೆ ಹೋದರು? ಓಂ ಎಲ್ಲಿ ಹೋಗಿಲ್ಲ ಏನೂ ಆಗಿಲ್ಲ. ಇಲ್ಲೇ ಬೆಂಗಳೂರಿನಲ್ಲೇ ಇದ್ದಾರೆ. ಆದರೆ ಫೋನ್ ಸ್ವಿಚ್ ಆಫ್ ಮಾಡಿಕೊಂಡು ಮಾಧ್ಯಮಗಳ ಕಣ್ಣಿಗೆ ಬೀಳದಂತೆ ಜಾಗ್ರತೆ ವಹಿಸಿದ್ದಾರೆ ಅಷ್ಟೆ. ನಿಖಿತಾರನ್ನು ನಿರ್ಮಾಪಕರ ಸಂಘ ಬ್ಯಾನ್ ಮಾಡಿದಾಗಲೂ ಓಂ ನಾಪತ್ತೆ. ದರ್ಶನ್ ಜೈಲಿಗೆ ಸೇರಿದಾಗಲೂ ಹಾಸಿಗೆ ಹಿಡಿದಾಗಲೂ ಕಾಣಲಿಲ್ಲ.

ಸದ್ಯಕ್ಕೆ ಭೀಮಾತೀರದಲ್ಲಿ ಬ್ಯುಸಿಯಾಗಿದ್ದಾರೆ. ಶಿವರಾಜ್ ಕುಮಾರ್ ಜೊತೆಗಿನ ಶಿವ ಚಿತ್ರೀಕರಣದಲ್ಲೂ ಬ್ಯುಸಿಯಾಗಿದ್ದಾರೆ. ಶಿವ ಚಿತ್ರೀಕರಣ ಸೆಂಟ್ರಲ್ ಜೈಲಿನಲ್ಲಿ ನಡೆದರೂ ಅಲ್ಲೂ ದರ್ಶನ್ ಜೊತೆ ಓಂ ಹೆಂಗಿದ್ದೀಯ ಎಂದು ಮಾತನಾಡಿಲ್ಲ. ಒಟ್ಟಿನಲ್ಲಿ ಓಂ ಜಾಣ ಕಿವುಡ ಕುರುಡರಾಗಿದ್ದಾರೆ ಅಷ್ಟೇ! (ದಟ್ಸ್‌ಕನ್ನಡ ಸಿನಿವಾರ್ತೆ)

More from Filmibeat

English summary
Kannada films successful director Om Prakash Rao maintain silence about actor Darshan issue. Even he didn't talk about actress Nikita Thukral also. Why and where he is gone?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X