ಫೆಬ್ರವರಿಯಲ್ಲಿ ಭಟ್ಟರ ಪರಮಾತ್ಮನಿಗೆ ಮುಹೂರ್ತ

By Rajendra

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಗೂ ಯೋಗರಾಜ್ ಭಟ್ ಕಾಂಬಿನೇಷನ್ ಚಿತ್ರ 'ಪರಮಾತ್ಮ'. ಈ ಚಿತ್ರ ಸೆಟ್ಟೇರಲು ಇನ್ನೇನು ಕೌಂಟ್ ಡೌನ್ ಶುರುವಾಗಿದೆ. ಫೆಬ್ರವರಿಯಲ್ಲಿ ಚಿತ್ರ ಸೆಟ್ಟೇರುವ ಎಲ್ಲಾ ಲಕ್ಷಣಗಳು ನಿಚ್ಚಳವಾಗಿವೆ.

ಪುನೀತ್ ಅಭಿನಯದ 'ಹುಡುಗ್ರು' ಚಿತ್ರೀಕರಣ ಇನ್ನೇನು ಮುಕ್ತಾಯ ಹಂತಕ್ಕೆ ಬಂದಿದೆ. ಸದ್ಯಕ್ಕೆ ಮೈಸೂರಿನಲ್ಲಿ ಬಿರುಸಿನ ಚಿತ್ರೀಕರಣ ನಡೆಯುತ್ತಿದ್ದು ಜನವರಿ ಅಂತ್ಯಕ್ಕೆ ಮಂಗಳ ಹಾಡಲಾಗುತ್ತದೆ. ಇದಾದ ಬಳಿಕ ಭಟ್ ಮತ್ತು ಪುನೀತ್ ಕಾಂಬಿನೇಷನ್ ಚಿತ್ರ 'ಪರಮಾತ್ಮ'ನ ಆಟ ಶುರುವಾಗಲಿದೆ.

ಜಯಣ್ಣ ಮತ್ತು ಯೋಗರಾಜ್ ಮೂವೀಸ್ ಜಂಟಿಯಾಗಿ ನಿರ್ಮಿಸುತ್ತಿರುವ ಚಿತ್ರ ಇದು. ಈ ಬಾರಿ ಪುನೀತ್‌‍ಗೆ ಮೂವರು ನಾಯಕಿಯರು. ಒಬ್ಬರು ದೀಪಾ ಸನ್ನಿದ್ಧಿ ಎಂಬುದು ಈಗಾಗಲೆ ಜಗಜ್ಜಾಹೀರಾಗಿದೆ. ಉಳಿದ ಇನ್ನಿಬ್ಬರು ಯಾರು ಎಂಬುದು ಸದ್ಯಕ್ಕೆ ಮಾಹಿತಿ ಇಲ್ಲ.

ಸಂತೋಷ್ ಕುಮಾರ್ ಪತಾಜೆ ಅವರ ಛಾಯಾಗ್ರಹಣ, ಹರಿಕೃಷ್ಣ ಸಂಗೀತ, ದೀಪು ಎಸ್ ಕುಮಾರ್ ಅವರ ಸಂಕಲನ ಚಿತ್ರಕ್ಕಿದೆ. ರಂಗಾಯಣ ರಘು ಹೊರತುಪಡಿಸಿದರೆ ಪೋಷಕ ಪಾತ್ರವರ್ಗದ ವಿವರಗಳು ಸದ್ಯಕ್ಕೆ ಲಭ್ಯವಿಲ್ಲ. ಶೀಘ್ರದಲ್ಲೆ ನಡೆಯಲಿರುವ ಪತ್ರಿಕಾಗೋಷ್ಠಿಯಲ್ಲಿ ಎಲ್ಲ ವಿವರಗಳು ಬಹಿರಂಗವಾಗಲಿವೆ.

More from Filmibeat

English summary
Power Star Puneet Rajkumar and director Yograj Bhat combination movie Paramathma to be launched in February. Which will be produced jointly by Jayanna and Yogaraj Movies. Santhosh Kumar Pathaaje crank the camera.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X