ಪ್ರಭು ನಯನತಾರಾ ಮದುವೆಗೆ ಶೀಘ್ರ ಗಟ್ಟಿಮೇಳ
ಡ್ಯಾನ್ಸ್ ಮಾಸ್ಟರ್ ಪ್ರಭುದೇವ ಹಾಗೂ ನಟಿ ನಯನತಾರಾ ಮದುವೆಗೆ ಶೀಘ್ರದಲ್ಲೆ ಗಟ್ಟಿಮೇಳ ಮೊಳಗಲಿದೆ. ಈ ಜೋಡಿ ಹಕ್ಕಿಗಳ ಮದುವೆ ಮುಂಬೈನಲ್ಲಿ ನಡೆಯಲಿದೆ. ಸದ್ಯಕ್ಕೆ ಪ್ರಭು ಒಂದು ತಮಿಳು ಇನ್ನೊಂದು ಹಿಂದಿ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಆ ಎರಡೂ ಪ್ರಾಜೆಕ್ಟ್‌ಗಳು ಮುಗಿದ ಬಳಿಕವೇ ಮಾಂಗಲ್ಯಂ ತಂತು ನಾನೇನಾ...
ಈಗಾಗಲೆ ಪ್ರಭುದೇವ ತಮ್ಮ ಪತ್ನಿ ರಾಮಲತಾರಿಂದ ವಿವಾಹ ವಿಚ್ಛೇದನ ಪಡೆದಿದ್ದಾರೆ. ತಮ್ಮ ಪತ್ನಿ ಹಾಗೂ ಇಬ್ಬರು ಮಕ್ಕಳಾದ ರಿಷಿ ಹಾಗೂ ಆದಿತ್ಯರಿಗೆ ರು.10 ಲಕ್ಷನಗದು, ಫಾರ್ಮ್ ಹೌಸ್ ಸೇರಿದಂತೆ ಹಲವು ಜೀವನಾಂಶ ಬರೆದುಕೊಟ್ಟಿದ್ದಾರೆ ಪ್ರಭುದೇವ.
ಅತ್ತ ನಯನತಾರಾ ಕೂಡ ಮದುವೆ ಸಿದ್ಧತೆಯಲ್ಲಿದ್ದು, ಒಮ್ಮೆ ಚಿತ್ರರಂಗ ತೊರೆಯುತ್ತೇನೆ ಎಂದು ಮತ್ತೊಮ್ಮೆ ಇಲ್ಲ ಇಲ್ಲ ಎಲ್ಲಾದರೂ ಉಂಟಾ! ಎಂದು ಹೇಳುತ್ತಾ ಗೊಂದಲದಲ್ಲಿದ್ದಾರೆ. ರಾಮಲತಾಗೆ ಚೆನ್ನೈನಲ್ಲಿನ ಅಪಾರ್ಟ್‌ಮೆಂಟ್ ಒಂದನ್ನೂ ಪ್ರಭುದೇವ ವರ್ಗಾಯಿಸಿದ್ದಾರೆ. (ಏಜೆನ್ಸೀಸ್)
More from Filmibeat
English summary
Prabhu Deva and Nayantara would soon tie the knot in Mumbai to keep the paparazzi away. Recently A Family Court in Chennai recently sanctioned the divorce of Prabhu Deva and his wife Latha aka Ramlath.


Click it and Unblock the Notifications











