For Quick Alerts
  ALLOW NOTIFICATIONS  
  For Daily Alerts

  ಹೊಸಪೇಟೆಯಲ್ಲಿ ಅಣ್ಣಾಬಾಂಡ್ ಹೊಸ ದಾಖಲೆ

  |

  ಹೊಸಪೇಟೆಯ ಸರಸ್ವತಿ ಚಿತ್ರಮಂದಿರದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಅಣ್ಣಾಬಾಂಡ್ ಚಿತ್ರವು ಇಂದು ಬೆಳಿಗ್ಗೆ 4.00 ಗಂಟೆಗೇ ಪ್ರದರ್ಶನಗೊಂಡು ದಾಖಲೆ ನಿರ್ಮಿಸಿದೆ. ಇಂದು (ಮೇ 01 2012, ಮಂಗಳವಾರ) ರಾಜ್ಯಾದ್ಯಂತ ಬಿಡುಗಡೆಯಾಗಿರುವ ಅಣ್ಣಾಬಾಂಡ್, ಹೊಸಪೇಟೆಯಲ್ಲಿ ಮಾಮೂಲಿ ಸಮಯಕ್ಕಿಂತ ತೀರಾ ಮೊದಲು ಪ್ರದರ್ಶನಗೊಂಡು ಅಚ್ಚರಿ ಮೂಡಿಸಿದೆ.

  ಈ ಮೊದಲು ಜೋಗಯ್ಯ ಕೂಡ ನಿಗದಿತ ವೇಳೆಗಿಂತ ಮೊದಲು ಪ್ರದರ್ಶನಗೊಂಡು ದಾಖಲೆ ನಿರ್ಮಿಸಿತ್ತು. ಈಗ ಅಣ್ಣಾಬಾಂಡ್ ಆ ದಾಖಲೆಯನ್ನು ಮುರಿದಿದೆ. ಬಿಡುಗಡೆ ಹಿಂದಿನ ದಿನ ಆನ್ ಲೈನ್ ಮೂಲಕ ಟಿಕೆಟ್ ಸೇಲ್ ಮಾಡಿ ಅಣ್ಣಾಬಾಂಡ್ ನೂತನ ದಾಖಲೆಯನ್ನೂ ನಿರ್ಮಿಸಿದ್ದಾನೆ. ಅಷ್ಟೇ ಅಲ್ಲ, ಮಂಗಳವಾರ ಕನ್ನಡ ಚಿತ್ರವೊಂದು ಬಿಡುಗಡೆಯಾಗಿರುವುದು ಇದೇ ಮೊದಲು.

  ಒಟ್ಟಿನಲ್ಲಿ, ಕರ್ನಾಟಕದ ನೂರೈವತ್ತು ಚಿತ್ರಮಂದಿರಗಳು ಹಾಗೂ ವಿದೇಶದಲ್ಲಿಯೂ ಒಟ್ಟಿಗೆ ಬಿಡುಗಡೆ ಕಂಡಿರುವ ಅಣ್ಣಾಬಾಂಡ್, ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ. ಇನ್ನೂ ಯಾವ ಯಾವ ದಾಖಲೆ ಅಣ್ಣಾಬಾಂಡ್ ಕೈಹಿಡಿಯುತ್ತೆ ಎಂಬುದನ್ನು ಕಾದು ನೋಡಬೇಕಾಗಿದೆ. ಸದ್ಯಕ್ಕಂತೂ ಕನ್ನಡದ ಪವರ್ ಸ್ಟಾರ್ ಪುನೀತ್ ಅಣ್ಣಾಬಾಂಡ್ ಸದ್ದು ಹಾಗೂ ಸುದ್ದಿ ಸ್ಯಾಂಡಲ್ ವುಡ್ ನಲ್ಲಿ ಜೋರಾಗಿದೆ. (ಒನ್ ಇಂಡಿಯಾ ಕನ್ನಡ)

  English summary
  Power Star Puneeth Rajkumar movie Anna Bond released early morning, at 4-30 AM in Hospet. This is the Record, after the movie Jogayya.
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X