ಪಡ್ಡೆಗಳ ಪಾಲಿಗೆ ಘಮಘಮ ತುಪ್ಪವಾದ ರಾಗಿಣಿ ದ್ವಿವೇದಿ

ಮೋಹಕ ತಾರೆ ರಮ್ಯಾ "ಜಾನಿ ಮೇರಾ ನಾಮ್" ಚಿತ್ರದಲ್ಲಿ ಪದ್ಮಾವತಿ ಐಟಂ ಹಾಡಿಗೆ ಕುಣಿದಿದ್ದೇ ತಡ, ರಾಗಿಣಿ ಕ್ರೇಜಿಸ್ಟಾರ್ ರವಿಚಂದ್ರನ್ ಜೊತೆ "ಕಳ್ಳ ಮಳ್ಳ ಸುಳ್ಳ" ಚಿತ್ರದಲ್ಲಿ "ತುಪ್ಪ ಬೇಕೇ ತುಪ್ಪ" ಎಂದು ಹಾಡಿ, ಕುಣಿದಿದ್ದಾರೆ. ಅದೇ ಹಾಡನ್ನು ಮತ್ತೆ ಮತ್ತೆ ನೋಡಲು ಪಡ್ಡೆಹುಡುಗರು ಸಿನಿಮಾ ಥಿಯೇಟರಿನೊಳಕ್ಕೆ ಹೋಗುತ್ತಿರುವುದನ್ನೂ ಗಮನಿಸಿದವರಿದ್ದಾರೆ.
ರಾಗಿಣಿಯ ಮೈಮಾಟಕ್ಕೆ ಮೊದಲೇ ಮನಸೋತಿದ್ದ ಕನ್ನಡ ಪ್ರೇಕ್ಷಕ ಎವೆಯಿಕ್ಕದೇ ರಾಗಿಣಿ ನೋಡಿ ಕನಸಿನಲ್ಲೂ ರಾಗಿಣಿಯನ್ನೇ ಕಾಣತೊಡಗಿರುವುದು ಸಳ್ಳಲ್ಲ.
ಈ ಕನ್ನಡದ ಟಾಪ್ ಹೀರೋಯಿನ್ ಗಳೆಲ್ಲಾ ನಾಮುಂದು, ತಾಮುಂದು ಎಂದು ಹೀಗೆ ಐಟಂ ಸಾಂಗ್ ಗಳಿಗೆ ಹೆಜ್ಜೆ ಹಾಕುತ್ತಿದ್ದರೆ ಸೌತ್ ಅಂಡ್ ನಾರ್ತ್ ಐಟಂ ಸಾಂಗ್ ಬೆಡಗಿಯರಾದ ಮುಮೈತ್ ಖಾನ್ ಹಾಗೂ ರಚನಾ ಮೌರ್ಯ ಮುಂತಾದವರೆಲ್ಲಾ ಕಂಗಾಲಾಗಿ ಕೂತಿದ್ದಾರಂತೆ. ಅಲ್ವೇ ಮತ್ತೆ? ಅದೇ ಕೆಲಸ ನಂಬಿಕೊಂಡ ಅವರ ಪಾಡು ಏನಾಗಬೇಕು ಹೇಳಿ!
ಹೀಗೆ ತುಪ್ಪದ ಹುಡುಗಿ ಆಗಿರುವ ಈಕೆಯನ್ನು ಯಾರಾದರೂ "ಘೀ ಗರ್ಲ್" ಎಂದು ಕರೆದರೆ ಅವರು ಸಖತ್ ಖುಷಿಯಾಗಿ ಕೆಂಪಗಾಗ್ತಾರಂತೆ. ಗಾಂಧಿನಗರ ಕೂಡ ಈಕೆಯ ಮೇಲೆ ಸಾಕಷ್ಟು ಭರವಸೆ ಇಟ್ಟಿರುವುದಕ್ಕೆ ಈಗ ರಾಗಿಣಿ ಕೈಯಲ್ಲಿರುವ ಚಿತ್ರಗಳೇ ಸಾಕ್ಷಿ. ಒಟ್ಟಿನಲ್ಲಿ ರಾಗಿಣಿಯಿಂದ ತುಪ್ಪಕ್ಕೆ ಲಾಭವೋ ಅಥವಾ ತುಪ್ಪದಿಂದ ರಾಗಿಣಿಗೋ?
ಇಷ್ಟೆಲ್ಲಾ ಬೆಳವಣಿಗೆಗಳ ನಡುವೆ "ನಂದಿನಿ" ತುಪ್ಪದ ಒಡೆತನದ ಕೆಎಂಎಫ್ ಮಾತ್ರ ಕಂಗಾಲಾಗಿರುವ ಸಾಧ್ಯತೆ ಇದೆ. ಏಕೆಂದರೆ ಗ್ರಾಹಕರು ಇನ್ನು ಮುಂದೆ ನಂದಿನಿ ತುಪ್ಪ ಎಂದು ಕೇಳುವ ಬದಲು ರಾಗಿಣಿ ತುಪ್ಪ ಎಂದು ಕೇಳಿದರೆ ಗತಿಯೇನು ಎಂಬುದು ಅವರ ಚಿಂತೆಗೆ ಕಾರಣವಾಗಬಹುದು. ಇದೆಲ್ಲಾ ತುಪ್ಪದ ಮಹಿಮೆಯೋ ಅಥವಾ ರಾಗಿಣಿಯದೋ..! (ದಟ್ಸ್‌ಕನ್ನಡ ಸಿನಿವಾರ್ತೆ)


Click it and Unblock the Notifications











