»   » ರಾಜ್ಯಾದ್ಯಂತ ರಜನಿಯ ಕುಸೇಲನ್ ಪ್ರದರ್ಶನ

ರಾಜ್ಯಾದ್ಯಂತ ರಜನಿಯ ಕುಸೇಲನ್ ಪ್ರದರ್ಶನ

Posted By:
Subscribe to Filmibeat Kannada

ಬೆಂಗಳೂರು, ಆ.1 : ತೀವ್ರ ವಿವಾದಕ್ಕೆ ಗುರಿಯಾಗಿದ್ದ ಕನ್ನಡಿಗ, ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಅವರು ನಟಿಸಿದ ಕುಸೇಲನ್ ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗಿದ್ದು, ಆಭಿಮಾನಿಗಳು ತಮ್ಮ ನೆಚ್ಚಿನ ನಟನ ಚಿತ್ರವನ್ನು ಮುಗಿಬಿದ್ದು ನೋಡುತ್ತಿದ್ದಾರೆ. ಬೆಂಗಳೂರಿನಲ್ಲಿ ಒಟ್ಟು 18 ಚಿತ್ರಮಂದಿರಗಳಲ್ಲಿ ಕುಸೇಲನ್ ಚಿತ್ರ ಬಿಡುಗಡೆಯಾಗಿದೆ. ಪ್ರಥಮ ಪ್ರದರ್ಶನದ ವರದಿ ಬಂದಾಗ ಚಿತ್ರಮಂದಿರಗಳೆಲ್ಲ ಹೌಸ್ ಫುಲ್ ಆಗಿ ಓಡುತ್ತಿದ್ದವು. ಚಿತ್ರ ನೋಡಲು ಪ್ರೇಕ್ಷಕರು ಚಿತ್ರಮಂದಿರದಲ್ಲಿ ನೂಕುನುಗ್ಗಲು ಆರಂಭವಾಗಿದೆ. ಮುಂಜಾಗ್ರತಾ ಕ್ರಮವಾಗಿ ಯಾವುದೇ ಅಹಿತಕರ ಘಟನೆ ತಡೆಯಲು ಪೊಲೀಸರನ್ನು ನಿಯೋಜಿಸಿದ್ದಾರೆ.

ಕುಸೇಲನ್ ಚಿತ್ರ ಮಲೆಯಾಳಂ ಚಿತ್ರದ ರಿಮೇಕ್ ಆಗಿದ್ದು, ಮುಮ್ಮುಟ್ಟಿ ನಟಿಸಿದ್ದ ಪಾತ್ರವನ್ನು ತಮಿಳಿನಲ್ಲಿ ರಜನಿಕಾಂತ್ ನಟಿಸಿದ್ದಾರೆ. ಈ ಚಿತ್ರದಲ್ಲಿ ರಜನಿಕಾಂತ್ ಅವರು ಕೇವಲ 40 ನಿಮಿಷ ಮಾತ್ರ ಕಾಣಿಸಿಕೊಂಡಿದ್ದಾರೆ.

ಹೋಗೇನಕಲ್ ವಿವಾದದಲ್ಲಿ ರಜನಿಕಾಂತ್ ತಮಿಳು ಚಿತ್ರರಂಗ ಕರೆದಿದ್ದ ಹೊಗೇನಕಲ್ ಪ್ರತಿಭಟನೆಯಲ್ಲಿ ಭಾಗವಹಿಸಿ ಕನ್ನಡಿಗರನ್ನು ಒದೆಯಬೇಕು ಎಂದು ಹೇಳಿಕೆ ನೀಡಿದ್ದರು. ಇದು ಭಾರಿ ವಿವಾದಕ್ಕೆ ಕಾರಣವಾಗಿತ್ತು. ಕನ್ನಡಿಗರಾದ ರಜನಿಕಾಂತ್ ಕನ್ನಡಿಗರನ್ನು ಹೀಗೆ ಅವಹೇಳನ ಮಾಡಿದ್ದರಿಂದ ಕನ್ನಡಪರ ಸಂಘಟನೆಗಳು ರಜನಿಕಾಂತ್ ನಟನೆ ಚಿತ್ರಗಳನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡಲು ಅವಕಾಶ ನೀಡುವುದಿಲ್ಲ ಎಂದು ಪ್ರತಿಭಟಿಸಿದ್ದರು. ಈ ಎಲ್ಲ ಬೆಳವಣಿಗೆಯನ್ನು ಗಮನಿಸಿದ ರಜನಿಕಾಂತ್ ಗುರುವಾರ ಮಾಧ್ಯಮದ ಮೂಲಕ ಕ್ಷಮಾಪಣೆ ಕೇಳಿದ್ದರು. ಹಾಗು ಕುಸೇಲನ್ ಚಿತ್ರಕ್ಕೆ ಸಹಕರಿಸಿ ಎಂದು ಬಹಿಂಗವಾಗಿ ಹೇಳಿದ್ದರಿಂದ ಕನ್ನಡಪರ ಸಂಘಟನೆಗಳು ಈ ಮನವಿಗೆ ಮನ್ನಿಸಿ ಚಿತ್ರ ಬಿಡುಗಡೆಗೆ ಅವಕಾಶ ನೀಡಿದ್ದವು.

(ದಟ್ಸ್ ಕನ್ನಡ ವಾರ್ತೆ)

ಪೂರಕ ಓದಿಗೆ
ಕನ್ನಡಿಗರ ಪರೋಕ್ಷ ಕ್ಷಮೆ ಯಾಚಿಸಿದ ರಜನಿಕಾಂತ್
ರಜನಿ ಕ್ಷಮೆಯಾಚನೆ ನಂತರ ಕುಸೇಲನ್ ಬಿಡುಗಡೆ
ಓದುಗರ ಪತ್ರ : ಕುಸೇಲನ್ ಬಿಡುಗಡೆ ನಾಚಿಕೆಗೇಡು
ಕನ್ನಡದಲ್ಲಿ 'ಸಾಹೇಬ'ರಿಗೆ 'ಕುಸೇಲನ್' ಬರೆದ ಪತ್ರ
ಕರ್ನಾಟಕದಲ್ಲಿ ಸದ್ದಿಲ್ಲದಂತೆ 'ಕುಸೇಲನ್' ಬಿಡುಗಡೆ
'ಕುಸೇಲನ್‌' ರಜನಿಗೆ ಕರ್ನಾಟಕದಲ್ಲಿ ಸಂಕಟಕಾಲ!

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada