ಪ್ರಶಸ್ತಿ ಜವಾಬ್ದಾರಿಯನ್ನು ಹೆಚ್ಚಿಸಿದೆ; ಕ್ರೇಜಿಸ್ಟಾರ್

By Rajendra

ಕ್ರೇಜಿಸ್ಟಾರ್ ವಿ. ರವಿಚಂದ್ರನ್ ಅವರಿಗೆ ಕೊನೆ ಗಳಿಕೆಯಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಿಸಿದ ರಾಜ್ಯ ಸರಕಾರ ಅಚ್ಚರಿ ಮೂಡಿಸಿದೆ. ಈಗಾಗಲೆ 2010ರ ರಾಜ್ಯೋತ್ಸವ ಪ್ರಶಸ್ತಿ ಪಟ್ಟಿಯಲ್ಲಿ 162 ಮಂದಿಗೆ ಸ್ಥಾನ ಸಿಕ್ಕಿದೆ. ಭಾನುವಾರ (ಅ.31) ಚಿತ್ರಣ ಬದಲಾಗಿದ್ದು ರವಿ ಸೇರಿದಂತೆ 12 ಮಂದಿಗೆ ಪ್ರಶಸ್ತಿ ನೀಡುವ ಮೂಲಕ ಪಟ್ಟಿ ಇನ್ನಷ್ಟು ಉದ್ದವಾಗಿದೆ.

ಪ್ರಶಸ್ತಿ ಬಂದ ಹಿನ್ನೆಲೆಯಲ್ಲಿ ರವಿ ಮಾತನಾಡುತ್ತಾ, ಮಲಗಿದ್ದವನನ್ನು ಎಬ್ಬಿಸಿ ರಾಜ್ಯೋತ್ಸವ ಪ್ರಶಸ್ತಿ ಬಂದಿದೆ ಎಂದರು. ಪ್ರಶಸ್ತಿಯನ್ನು ನಾನು ನಿರೀಕ್ಷಿಸಿರಲಿಲ್ಲ. ರಾಜ್ಯ ಸರಕಾರ ಕೊನೆ ಗಳಿಗೆಯಲ್ಲಿ ಪ್ರಶಸ್ತಿ ನೀಡಿ ಚಕಿತಗೊಳಿಸಿದೆ ಎಂದರು. ರವಿಚಂದ್ರನ್ ಮನೆಯಲ್ಲಿ ಈಗ ಸಂಭ್ರಮದ ವಾತಾವಾರಣ ನೆಲೆಗೊಂಡಿದೆ.

ಪ್ರಶಸ್ತಿಯು ಜವಾಬ್ದಾರಿಯನ್ನು ಹೆಚ್ಚಿಸಿದೆ. ಖಂಡಿತವಾಗಿಯೂ ಮುಂದೆ ಇನ್ನೂ ಉತ್ತಮ ಚಿತ್ರಗಳನ್ನು ಪ್ರೇಕ್ಷಕರಿಗೆ ನೀಡುತ್ತೇನೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು. ಸದ್ಯಕ್ಕೆ 'ನಾರಿಯ ಸೀರೆ ಕದ್ದ' ಚಿತ್ರೀಕರಣದಲ್ಲಿ ರವಿಚಂದ್ರನ್ ಬಿಜಿಯಾಗಿದ್ದಾರೆ. ಅವರ ಮಹತ್ವಾಕಾಂಕ್ಷಿ 'ಮಂಜಿನಹನಿ' ಚಿತ್ರಕ್ಕೆ ಇನ್ನೂ ಮಂಜು ಕರಗಿ ಹನಿಯಾಗುವ ಸೌಭಾಗ್ಯ ಸಿಕ್ಕಿಲ್ಲ. ಮಲ್ಲಿಕಾರ್ಜುನ, ಹ್ಯಾಪಿ ಹಸ್ಪೆಂಡ್, ಕೀಚಕ ಚಿತ್ರಗಳು ನಿರ್ಮಾಣ ಹಂತದಲ್ಲಿವೆ. ರವಿಚಂದ್ರನ್ ಅವರಿಗೆ ಶುಭಾಶಯಗಳು.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X