ರಾಮ್ ಚರಣ್ ತೇಜ ಎಂಗೇಜ್‌ಮೆಂಟ್ ಹೈಲೈಟ್ಸ್

By Rajendra

Ram Charan, Upasana engagement
ಮೆಗಾ ಪವರ್ ಸ್ಟಾರ್ ರಾಮ್ ಚರಣ್ ತೇಜ ಹಾಗೂ ಉಪಾಸನಾ ಕಾಮಿನೇನಿ ಎಂಗೇಜ್‌ಮೆಂಟ್ ಗುರುವಾರ (ಡಿ.1) ನಡೆಯಲಿದೆ. ಆಂಧ್ರಪ್ರದೇಶದಲ್ಲಿ ನಡೆಯುತ್ತಿರುವ ಮತ್ತೊಂದು ರಾಯಲ್ ಕಾರ್ಯಕ್ರಮ ಇದಾಗಿದ್ದು, ಈಗಾಗಲೆ ಭರದ ಸಿದ್ಧತೆಗಳು ಜೋರಾಗಿ ನಡೆದಿವೆ.

ಈ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ 300ಕ್ಕೂ ಅಧಿಕ ವಿಐಪಿ ಹಾಗೂ ವಿವಿಐಪಿಗಳು ಆಗಮಿಸುತ್ತಿದ್ದಾರೆ. ಹೈದರಾಬಾದಿನ ಮೋಯಿನಾಬಾದ್ ಪ್ರದೇಶದಲ್ಲಿರುವ ಕಾಮಿನೇನಿ ಫಾರ್ಮ್ ಹೌಸ್ ಟೆಂಪಲ್ ಟ್ರೀಸನ್ನು ದುಬಾರಿ ಬೆಲೆಯ ಹೂಗಳಿಂದ ಸಿಂಗರಿಸಲಾಗಿದೆ. ಥೈಲ್ಯಾಂಡ್ ಹಾಗೂ ಬ್ಯಾಂಕಾಕ್‌ನಿಂದ ವಿಶೇಷ ಪರಿಮಳದ ಪುಷ್ಪಗಳನ್ನು ತರಿಸಿ ಸಿಂಗರಿಸಲಾಗಿದೆ.

ಕಳೆದ ಕೆಲವು ದಿನಗಳಿಂದ ಕಾಮಿನೇನಿ ಅವರ ಫಾರ್ಮ್ ಹೌಸಿನ ಒಳಾಂಗಣ ವಿನ್ಯಾಸಕ್ಕಾಗಿ ಹಲವಾರು ಇಂಟೀರಿಯರ್ ಡಿಸೈನರ್‌ಗಳು ಶ್ರಮಿಸಿದ್ದಾರೆ. ಇದಕ್ಕಾಗಿ ವಿಶೇಷ ತಂಡವನ್ನೂ ಬ್ಯಾಂಕಾಕ್‌ನಿಂದ ಕರೆಸಲಾಗಿದೆ. ಮನೆಗೆ ವಿಶೇಷ ದೀಪಾಲಂಕಾರವನ್ನು ಮಾಡಲಾಗಿದೆ.

ನಿಶ್ಚಿತಾರ್ಥಕ್ಕೆ ಆಂಧ್ರಪ್ರದೇಶದ ಸಾಂಪ್ರದಾಯಿಕ ಅಡುಗೆಗಳ ಸುದೀರ್ಘ ಪಟ್ಟಿಯೇ ಇದೆ. ಎಂಗೇಜ್‌ಮೆಂಟ್ ಉಂಗುರದ ಬೆಲೆ ಕೇವಲ ರು.10 ಕೋಟಿ. ಇದನ್ನು ಬೆಲ್ಜಿಯಂನಿಂದ ತರಿಸಲಾಗಿದೆ. ರಾಮ್ ಚರಣ್ ತೇಜ ಶೆರ್ವಾನಿಯನ್ನು ರಾಜೇಶ್ ಪ್ರತಾಪ್ ಸಿಂಗ್ ವಿನ್ಯಾಸಗೊಳಿಸಿದ್ದು, ಇದರ ಬೆಲೆ ರು.1.5 ಲಕ್ಷ. (ಏಜೆನ್ಸೀಸ್)

More from Filmibeat

English summary
The engagement ceremony of Upasana & Ram Charan is slated for the 1st of December’2011 and is being meticulously planned in a grand manner by the Kamineni Family. 
 The venue is the sprawling farm house TEMPLE TREES of the Kamineni Family near Himayath Sagar, Hyderabad.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X