»   » ಬಿಗ್ ಟಿವಿಯಿಂದ ಕನ್ನಡ ಚಾನೆಲ್ಗಳ ಸುರಿಮಳೆ

ಬಿಗ್ ಟಿವಿಯಿಂದ ಕನ್ನಡ ಚಾನೆಲ್ಗಳ ಸುರಿಮಳೆ

Posted By:
Subscribe to Filmibeat Kannada

ಬೆಂಗಳೂರು, ಸೆ.1: ರಿಲಯನ್ಸ್ ಕಮ್ಯೂನಿಕೇಶನ್ಸ್ ಲಿಮಿಟೆಡ್‌ನ ಅಧೀನ ಸಂಸ್ಥೆಯಾದ ರಿಲಯನ್ಸ್ ಬಿಗ್ ಟಿವಿ ಲಿಮಿಟೆಡ್ ಪ್ರಾರಂಭದಲ್ಲೇ ಕನ್ನಡಿಗರಿಗೆ ಉತ್ತಮ ಕೊಡುಗೆ ನೀಡಲು ಮುಂದಾಗಿದೆ. ಕನ್ನಡ ಸಿನಿಮಾ ಚಾನೆಲ್ ಒಳಗೊಂಡಂತೆ 10 ಕನ್ನಡ ಚಾನೆಲ್‌ಗಳನ್ನು ಬಿಗ್ ಟಿವಿ ಪ್ರಾರಂಭಿಸಿದೆ.

ಸ್ಟಾರರ್ ಪ್ಯಾಕ್‌ಗಾಗಿ 1490 ರು.ಗಳು ಹಾಗೂ ಪಾಪ್ಯುಲರ್ ಪ್ಯಾಕ್‌ಗಾಗಿ1690 ರು.ಗಳನ್ನು ನೀಡಿ ಕರ್ನಾಟಕದ ವೀಕ್ಷಕರು ಅತ್ಯುತ್ತಮ ಗುಣಮಟ್ಟದ ಡಿಜಿಟಲ್ ಚಿತ್ರ ಮತ್ತು ಶಬ್ದವನ್ನೊಳಗೊಂಡ ತಮ್ಮ ನೆಚ್ಚಿನ ಕಾರ್ಯಕ್ರಮಗಳನ್ನು 200ಕ್ಕೂ ಅಧಿಕ ಚಾನೆಲ್‌ಗಳ ಮುಖಾಂತರ ವೀಕ್ಷಿಸಬಹುದಾಗಿದೆ.

500 ರು.ಗಳನ್ನು ನೀಡಿ ಚಂದಾದಾರರಾದವರು ಬಿಗ್ ಟಿವಿ ಉಡುಗೊರೆಯಾದ 32 ಪ್ರತ್ಯೇಕ ಬಿಗ್ ಸಿನಿಮಾ ಚಾನೆಲ್‌ಗಳನ್ನು ಆರಂಭದ 3 ತಿಂಗಳು ಉಚಿತವಾಗಿ ಪಡೆಯಬಹುದು. ಇದೇ ವೇಳೆಯಲ್ಲಿ ಬಿಗ್ ಟಿವಿ ಗ್ರಾಹಕರು ಹಿಂದಿ, ಇಂಗ್ಲಿಷ್ ಜೊತೆಗೆ ಕನ್ನಡವನ್ನೊಳಗೊಂಡ ದಕ್ಷಿಣ ಭಾರತದ ನಾಲ್ಕು ಪ್ರಮುಖ ಭಾಷೆಗಳ ಸಿನಿಮಾ ಚಾನೆಲ್‌ಗಳನ್ನು 'ವೀಕ್ಷಣೆಗಾಗಿ ಪಾವತಿ ನಿಯಮದಡಿ ಪಡೆಯಬಹುದಾಗಿದೆ.

ಬಿಗ್ ಟಿವಿಯು ತನ್ನ ಪೂರ್ಣ ಪ್ರಮಾಣದ ಡಿಜಿಟಲ್ ಚಿತ್ರ ಮತ್ತು ಶಬ್ದದ ಮುಖಾಂತರ ಅಂತಾರಾಷ್ಟ್ರೀಯ ಗುಣಮಟ್ಟದ ಟಿವಿ ವೀಕ್ಷಣೆಯ ಸೌಲಭ್ಯವನ್ನು ಗ್ರಾಹಕರಿಗೆ ಒದಗಿಸಲಿದೆ. ಬಿಗ್ ಟಿವಿಯ 200 ಕ್ಕೂ ಅಧಿಕ ಚಾನೆಲ್‌ಗಳಲ್ಲಿ ಸ್ಥಳೀಯ ಭಾಷಾ ಹಾಗೂ ಸಿನಿಮಾ ಚಾನೆಲ್‌ಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ದಕ್ಷಿಣ ಭಾರತದ ನಾಲ್ಕು ಪ್ರಮುಖ ಭಾಷೆಗಳಲ್ಲಿ ಗ್ರಾಹಕರಿಗೆ 24x7 ಹೊತ್ತು ಗ್ರಾಹಕ ಸೇವಾ ಸವಲತ್ತುಗಳನ್ನು ನೀಡಲಾಗುವುದು ಎಂದು ಬಿಗ್ ಟಿವಿ ಡಿಟಿಎಚ್ ಅಧ್ಯಕ್ಷರಾದ ಅರುಣ್ ಕೆ. ಕಪೂರ್ ಹೇಳಿದರು. ಚಾನೆಲ್‌ಗಳ ಸಂಖ್ಯೆಯಾಗಲಿ ಅಥವಾ ಆಯ್ಕೆಯಾಗಲಿ, ಹಣದ ಮೌಲ್ಯವಾಗಲಿ ಅಥವಾ ಉತ್ತಮ ವೀಕ್ಷಣಾ ಅನುಭವವಾಗಲಿ, ರೀಟೈಲ್ ಸವಲತ್ತು ಲಭ್ಯವಾಗಲಿ ಅಥವಾ ಪೂರ್ವೋಚಿತ ಸೇವಾ ಖರೀದಿಯಾಗಲಿ, ಬಿಗ್ ಟಿವಿಯು ಯಾವಾಗಲೂ ದೇಶಾದ್ಯಂತ ಉತ್ತಮ ಮನರಂಜನಾ ಸೇವೆಯನ್ನು ನೀಡುತ್ತಿದೆ ಎಂದು ಕಪೂರ್ ತಿಳಿಸಿದರು.

ಬಿಗ್ ಟಿವಿಯು ನಾಲ್ಕು ದಕ್ಷಿಣ ಭಾರತ ಭಾಷೆಗಳ 152 ಚಾನೆಲ್‌ಗಳನ್ನು ಹೊಂದಿದ್ದು ಅದರಲ್ಲಿ 120 ಸಿನಿಮಾ ಹಾಗೂ 10 ಆಡಿಯೋ ಚಾನೆಲ್‌ಗಳು ಒಳಗೊಂಡಿವೆ. ಈ ಚಾನೆಲ್‌ಗಳು ಕರ್ನಾಟಕದ 388 ನಗರಗಳಲ್ಲಿನ 6552 ರಿಟೈಲ್ ಮಾರುಕಟ್ಟೆಗಳಲ್ಲಿ ಹಾಗೂ ದಕ್ಷಿಣ ಭಾರತದ ನಾಲ್ಕು ಪ್ರಮುಖ ರಾಜ್ಯಗಳ 1614 ಸ್ಥಳಗಳಲ್ಲಿನ 28885 ರಿಟೈಲ್ ಮಾರುಕಟ್ಟೆಗಳಲ್ಲಿ ಲಭ್ಯವಾಗಲಿದೆ ಎಂದು ಬಿಗ್ ಟಿವಿ ಪ್ರಕಟಣೆಯಲ್ಲಿ ತಿಳಿಸಿದೆ.

(ದಟ್ಸ್‌ಕನ್ನಡ ವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada