»   » ಮನೋಹರ್ ಸಂಗೀತದಲ್ಲಿ ಮತ್ತೆ ಶಿವಣ್ಣನ ಚಿತ್ರ

ಮನೋಹರ್ ಸಂಗೀತದಲ್ಲಿ ಮತ್ತೆ ಶಿವಣ್ಣನ ಚಿತ್ರ

Subscribe to Filmibeat Kannada

ಕೆ.ಕೆ.ಮೂವೀಸ್ ಅವರ ನಂದ ಚಿತ್ರಕ್ಕೆ ನಿಗದಿತ ಯೋಜನೆಯಂತೆ ಚಿತ್ರೀಕರಣ ನಡೆಸಿದ ನಿರ್ದೇಶಕ ಅನಂತರಾಜು ಇತ್ತೀಚೆಗೆ ಕರಿಸುಬ್ಬು ಸ್ಟೂಡಿಯೋದಲ್ಲಿ ಮಾತುಗಳ ಜೋಡಣೆ ಪ್ರಕ್ರಿಯೆಯನ್ನು ಪೂರೈಸಿದ್ದಾರೆ. ಚಿತ್ರದಲ್ಲಿ ಐದು ಗೀತೆಗಳಿದ್ದು ರೀರೆಕಾರ್ಡಿಂಗ್ ಕಾರ್ಯವನ್ನು ರಾಜರಾಜೇಶ್ವರಿ ನಗರದ ಸಿಂಫೋನಿ ಥಿಯೇಟರ್‌ನಲ್ಲಿ ಪೂರ್ಣಗೊಳಿಸಿದ್ದಾರೆ ಶತಕದ ಸಂತಸದಲ್ಲಿರುವ ಸಂಗೀತ ನಿರ್ದೇಶಕ ವಿ.ಮನೋಹರ್.

ಹ್ಯಾಟ್ರಿಕ್‌ಹೀರೋ ಶಿವರಾಜಕುಮಾರ್ ನಂದನಾಗಿ ಅಭಿನಯಿಸುತ್ತಿರುವ ಈ ಚಿತ್ರದಲ್ಲಿ ಕಾದಲ್ ಸಿನೆಮಾ ಖ್ಯಾತಿಯ ಸಂಧ್ಯಾ ನಾಯಕಿಯಾಗಿದ್ದಾರೆ. ಅನಂತರಾಜು ಪ್ರಥಮವಾಗಿ ನಿರ್ದೇಶಿಸಿರುವ ನಂದನನ್ನು ಮಾಹಿನ್ ಅವರು ನಿರ್ಮಿಸಿದ್ದಾರೆ. ನಿರ್ಮಾಪಕರ ನಿಜಜೀವನದಲ್ಲಿ ನಡೆದ ಕತೆಗೆ ನಿರ್ದೇಶಕರು ಚಿತ್ರಕತೆ ಬರೆದಿದ್ದಾರೆ. ರಮೇಶ್‌ಬಾಬು ಛಾಯಾಗ್ರಹಣ, ಎಸ್.ಮನೋಹರ್ ಸಂಕಲನ, ರಾಮು, ಗಂಡಸಿನಾಗರಾಜ್ ನಿರ್ಮಾಣನಿರ್ವಹಣೆಯಿರುವ ಚಿತ್ರದ ತಾರಾಬಳಗದಲ್ಲಿ ಶಿವರಾಜಕುಮಾರ್, ಸಂಧ್ಯಾ, ಮೈತ್ರೇಯಿ, ರಂಗಾಯಣರಘು, ಮಿಥುನ್‌ತೇಜಸ್ವಿ, ಮಾಹಿನ್, ಕಿಶೋರ್, ಶರತ್‌ಲೋಹಿತಾಶ್ವ, ವನಿತಾವಾಸು, ಭವ್ಯ, ಮುನಿ ಮುಂತಾದವರಿದ್ದಾರೆ.

(ದಟ್ಸ್ ಕನ್ನಡ ಸಿನಿವಾರ್ತೆ)

ಮಾತಿನ ಲೇಪನ ನಂತರ ವಿದೇಶಕ್ಕೆ ಹಾರಿದ ನಂದ
'ನಂದ' ಚಿತ್ರದಲ್ಲಿ ಶಿವಣ್ಣನ ಮೇಲೆ ಕೊಲೆ ಆರೋಪ
ನಂದ ಚಿತ್ರದಲ್ಲಿ ಶಿವರಾಜ್ ಕುಮಾರ್, ಸಂಧ್ಯಾ ನರ್ತನ
ಸೀಮೆಗಿಲ್ಲದ ನಂದನ ತ್ರಿಕೋನ ಪ್ರೇಮಕಥೆ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada