ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ತಲೆಗೆ ಸಣ್ಣ ಪೆಟ್ಟು
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ತಲೆಗೆ ಸಣ್ಣ ಪೆಟ್ಟಾದ ಘಟನೆ ಭಾನುವಾರ (ಮೇ.1) ಬೆಳಗ್ಗೆ ಗಾಂಧಿನಗರದಲ್ಲಿ ನಡೆದಿದೆ. ಅವರು ಕರ್ನಾಟಕ ಚಲನಚಿತ್ರ ಕಾರ್ಮಿಕರು ಹಮ್ಮಿಕೊಂಡಿದ್ದ ಮೇ ದಿನಾಚರಣೆ ಸಮಾರಂಭದಲ್ಲಿ ಭಾಗವಹಿಸಲು ಪತ್ನಿ ಗೀತಾ ಸಮೇತ ಬಂದಿದ್ದರು.
ಅವರು ಆಗಮಿಸುತ್ತಿದ್ದಂತೆ ಪಟಾಕಿಗಳನ್ನು ಸಿಡಿಸಿ ಸಂಭ್ರಮಿಸಲಾಯಿತು. ಈ ಸಂದರ್ಭದಲ್ಲಿ ಪ್ರವೇಶ ದ್ವಾರದಲ್ಲಿದ್ದ ಸ್ವ್ವಾಗತ ಕಮಾನಿಗೆ ಅವರ ತಲೆ ಬಡಿದು ಕೊಂಚ ಪೆಟ್ಟಾಯಿತು. ಇದರಿಂದ ಕ್ಷಣಕಾಲ ಆತಂಕ ಪರಿಸ್ಥಿತಿ ನೆಲೆಗೊಂಡಿತು. ಕೂಡಲೆ ಶಿವಣ್ಣ ನಗುಮುಖದಿಂದ ಏನಾಗಿಲ್ಲ ಎಂದಾಗ ಎಲ್ಲರೂ ನಿರಾಳರಾದರು.
ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಶಿವಣ್ಣ, ತಲೆಗೆ ಕೊಂಚ ಪೆಟ್ಟಾಯಿತಷ್ಟೆ, ಉಳಿದಂತೆ ತಮಗೆ ಏನೂ ಆಗಿಲ್ಲ, ಆರಾಮವಾಗಿಯೇ ಇದ್ದೇನೆ ಎಂದು ನಗುನಗುತ್ತಾಹೇಳಿದರು. ಕಾರ್ಮಿಕರ ದಿನಾಚರಣೆಯ ಸಭೆಯಲ್ಲಿ ಕರ್ನಾಟಕ ಚಲನಚಿತ್ರ ಕಾರ್ಮಿಕರು, ತಂತ್ರಜ್ಞರ ಸಂಘದ ಅಧ್ಯಕ್ಷ ಅಶೋಕ್ ಅವರು ಉಪಸ್ಥಿತರಿದ್ದರು.
More from Filmibeat
English summary
Hat Trick Hero Shivarajkumar sustained minor injuries, when he attending a function conducted by Karnataka film artists association for the occasion of May day celebrations, while bursting of crackers at function the star was hit by a small shell. Shivarajkumar is fine and the function continued without any delay.
ಶಿವರಾಜ್ ಕುಮಾರ್ ಹ್ಯಾಟ್ರಿಕ್ ಹೀರೋ ಮೇ 1 ಕಾರ್ಮಿಕರ ದಿನಾಚರಣೆ ಮೇ ಡೆ shiva rajkumar hat trick hero may 1 labours day may day


Click it and Unblock the Notifications











