»   » ಸ್ಲಂ ಬಾಲ ಹಾಗೂ ನವಗ್ರಹಗಳು ಒಟ್ಟಿಗೆ ತೆರೆಗೆ

ಸ್ಲಂ ಬಾಲ ಹಾಗೂ ನವಗ್ರಹಗಳು ಒಟ್ಟಿಗೆ ತೆರೆಗೆ

Posted By:
Subscribe to Filmibeat Kannada

ಈ ವಾರ ಕನ್ನಡ ಮಹಾಜನತೆಗೆ 'ನವಗ್ರಹ'ಗಳ ದರ್ಶನ. ಆದರೆ ಇವರಾರೂ ನವಗ್ರಹ ದೇವತೆಗಳಲ್ಲ. ಕನ್ನಡ ಚಿತ್ರರಂಗ ಕಂಡ ಪ್ರಸಿದ್ದ ಖಳನಟರ ಪುತ್ರರು. ತೂಗುದೀಪ ಪ್ರೊಡಕ್ಷನ್ಸ್‌ನ ಹೆಮ್ಮೆಯ ಚಿತ್ರ 'ನವಗ್ರಹ' ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ಸಿಂಹದ ಹೊಟ್ಟೆಯಲ್ಲಿ ಸಿಂಹವೇ ಜನಿಸುತ್ತದೆ ಎನ್ನುವುದು ರೂಢಿ ಮಾತು. ಈ ಮಾತು ನಟ ದಿವಂಗತ ತೂಗುದೀಪ ಶ್ರೀನಿವಾಸ್ ಅವರ ಕುಟುಂಬಕ್ಕೂ ಅನ್ವಯವಾಗುತ್ತದೆ. ಶ್ರೀನಿವಾಸ್ ಅವರ ಚೊಚ್ಚಲ ಪುತ್ರ ದರ್ಶನ್ ನಾಯಕನಾಗಿ ಹೆಸರಾದರೆ, ದ್ವಿತೀಯ ಪುತ್ರ ದಿನಕರ್ ನಿರ್ದೇಶಕರಾಗಿ ಯಶಸ್ವಿಯಾದವರು. ಮಕ್ಕಳು ಈ ರೀತಿ ಪ್ರಸಿದ್ದರಾದರೆ ಪತ್ನಿ ಮೀನಾತೂಗುದೀಪಶ್ರೀನಿವಾಸ್ ಸದಭಿರುಚಿಯ ಚಿತ್ರಗಳನ್ನು ನಿರ್ಮಿಸಿ ಸಾಕಷ್ಟು ಪ್ರತಿಭೆಗಳನ್ನು ಬೆಳ್ಳಿತೆರೆಗೆ ಪರಿಚಯಿಸುತ್ತಿದ್ದಾರೆ. ಪ್ರಸ್ತುತ ಅವರ ನಿರ್ಮಾಣದ 'ನವಗ್ರಹ' ಚಿತ್ರದಲ್ಲೂ ಹಲವು ನೂತನ ಪ್ರತಿಭೆಗಳಿಗೆ ಅವಕಾಶ ನೀಡಿದ್ದಾರೆ.

ಕೃಷ್ಣಕುಮಾರ್ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ವಿ.ಹರಿಕೃಷ್ಣ ಸಂಗೀತ ಸಂಯೋಜಿಸಿದ್ದಾರೆ. ತ್ರಿಭುವನ್ ನೃತ್ಯ, ರವಿವರ್ಮ ಸಾಹಸ, ಶಶಿಕುಮಾರ್ ಸಂಕಲನ, ಚಿಂತನ್ ಸಂಭಾಷಣೆ, ಸುಂದರಂ ಕಲೆ, ನಾಗೇಂದ್ರಪ್ರಸಾದ್ ಗೀತರಚನೆ ಮಲ್ಲಿಕಾರ್ಜುನ್ ಸಹನಿರ್ದೇಶನ, ಸುಂದರರಾಜ್, ಶ್ರೀನಿವಾಸ್ ನಿರ್ಮಾಣನಿರ್ವಹಣೆ 'ನವಗ್ರಹ'ಕ್ಕಿದೆ. ದರ್ಶನ್ ಅವರಿಂದ ಆರಂಭವಾಗುವ ನಾಯಕರ ಪಡೆಯಲ್ಲಿ ಸೃಜನ್‌ಲೋಕೇಶ್, ಗಿರಿದಿನೇಶ್, ನಾಗೇಂದ್ರಅರಸ್, ಧರ್ಮಕೀರ್ತಿರಾಜ್, ವಿನೋದ್‌ಪ್ರಭಾಕರ್, ತರುಣ್‌ಸುಧೀರ್ ಇದ್ದಾರೆ. 'ನೆನಪಿರಲಿ' ಖ್ಯಾತಿಯ ವರ್ಷ ಹಾಗೂ 'ಸಜನಿ' ಖ್ಯಾತಿಯ ಶರ್ಮಿಳಾಮಾಂಡ್ರೆ ಈ ನಾಯಕರಿಗೆ ನಾಯಕಿಯರಾಗಿದ್ದಾರೆ. ವಿಜಯ್ ಸಹನಿರ್ಮಾಪಕರಾಗಿದ್ದಾರೆ.ಸ್ಲಂಬಾಲ
'ಆ ದಿನಗಳು' ಚಿತ್ರದ ನಿರ್ಮಾಪಕರು ಮೇಘ ಮೂವೀಸ್ ಲಾಂಛನದಲ್ಲಿ ಈ ದಿನಗಳಲ್ಲಿ ನಿರ್ಮಿಸಿರುವ 'ಸ್ಲಂಬಾಲ' ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ನಿರ್ಮಾಪಕರಾದ ರವೀಂದ್ರ ಹಾಗೂ ಸೈಯ್ಯದ್ ಅಮಾನ್ ಅಗ್ನಿಶ್ರೀಧರ್ ಅವರು ಬರೆದಿರುವ 'ದಾದಾಗಿರಿಯ ದಿನಗಳು' ಪುಸ್ತಕದ ಒಂದು ಭಾಗವನ್ನು ಚಿತ್ರವನ್ನಾಗಿಸಿದ್ದಾರೆ. ಸ್ಲಂಬಾಲನಾಗಿ 'ದುನಿಯಾ' ಖ್ಯಾತಿಯ ವಿಜಯ್ ಅಭಿನಯಿಸಿದ್ದು ಬಾಲನ ನಾಯಕಿಯಾಗಿ ಶುಭಾಪುಂಜ ಇದ್ದಾರೆ.

ಅಗ್ನಿ ಪತ್ರಿಕೆಯಲ್ಲಿ ತಮ್ಮ ವಿಶಿಷ್ಟ ಬರಹಗಳಿಂದ ಗುರುತಿಸಿಕೊಂಡಿದ್ದ ಸುಮನಾ ಕಿತ್ತೂರ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಕನ್ನಡ ಚಿತ್ರವನ್ನು ನಿರ್ದೇಶಿಸಿದ್ದ ಕೆಲವೇ ಮಹಿಳೆಯರ ಸಾಲಿಗೆ ಸುಮನಾ ಸೇರ್ಪಡೆಯಾಗಿದ್ದಾರೆ. ಚಿತ್ರಕ್ಕೆ ಕತೆ, ಸಂಭಾಷಣೆ ಬರೆದಿರುವ ಅಗ್ನಿಶ್ರೀಧರ್ ಚಿತ್ರಕತೆಯನ್ನು ರಚಿಸಿದ್ದಾರೆ. ಎ.ಸಿ.ಮಹೇಂದರ್ ಛಾಯಾಗ್ರಹಣವಿರುವ ಚಿತ್ರಕ್ಕೆ ಅರ್ಜುನ್ ಸಂಗೀತ ಸಂಯೋಜಿಸಿದ್ದಾರೆ. ದೀಪು.ಎಸ್.ಕುಮಾರ್ ಸಂಕಲನ, ದಿನೇಶ್‌ಮಂಗ್ಳೂರ್ ಕಲೆ, ಮಧುಗಿರಿಪ್ರಕಾಶ್ ನಿರ್ಮಾಣನಿರ್ವಹಣೆಯಿರುವ ಚಿತ್ರದ ತಾರಾಬಳಗದಲ್ಲಿ ವಿಜಯ್, ಶುಭಾಪುಂಜಾ, ಉಮಾಶ್ರೀ, ಗಿರಿಜಾಲೋಕೇಶ್, ಶಶಿಕುಮಾರ್, ಅರ್ಚನಾ, ಬಿ.ಸುರೇಶ್, ಧರ್ಮ, ಸತ್ಯ ಮುಂತಾದವರಿದ್ದಾರೆ.
(ದಟ್ಸ್ ಕನ್ನಡ ಸಿನಿವಾರ್ತೆ)

ಅಗ್ನಿ ಶ್ರೀಧರ್ ಬತ್ತಳಿಕೆಯಲ್ಲಿನ ಹೊಸ ಅಸ್ತ್ರ!
ನವಗ್ರಹ ವಿತರಣೆ ವ್ಯವಹಾರ ಅಣಜಿಗೆ ಕೊಕ್

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada