»   » ಸುಮನ್ ಮತ್ತೆ ಕುಣಿಯಲಿದ್ದಾರೆ ಅಂಜದಿರಿ!!

ಸುಮನ್ ಮತ್ತೆ ಕುಣಿಯಲಿದ್ದಾರೆ ಅಂಜದಿರಿ!!

Subscribe to Filmibeat Kannada

ಚಿತ್ರಗಳ ಪ್ರಮುಖಾಂಶಗಳಲ್ಲಿ ನೃತ್ಯ ಕೂಡ ಒಂದು. ಅದರಲೂ ನಟಿ ನೋಡಲು ಅಂದವಾಗಿದ್ದು ಆಕೆಯ ಕುಣಿತವೂ ಚೆಂದವಾಗಿದ್ದರೆ ನೋಡುಗನ ಸಂತಸಕ್ಕೆ ಪಾರವೇ ಇಲ್ಲ. ನಮ್ಮ ಕನ್ನಡತಿ ಸುಮನ್‌ರಂಗನಾಥ್ ಕೂಡ ಒಳ್ಳೆ ನೃತ್ಯಗಾರ್ತಿ. ಇತ್ತೀಚೆಗೆ ಇವರು ಉಪೇಂದ್ರರೊಂದಿಗೆ 'ಚಿತ್ರಾನ್ನ' ಹಾಡಿಗೆ ಕುಣಿದಿದ್ದು ಪ್ರೇಕ್ಷಕರ ಮನದಲ್ಲಿ ಇನ್ನೂ ಹಸಿರಾಗಿರುವ ಬೆನ್ನಲ್ಲೇ ಸುಮನ್‌ರಂಗನಾಥ್ 'ಅಂಜದಿರು' ಚಿತ್ರಕ್ಕಾಗಿ ತಂಗಾಳಿ ನಾಗಾರಾಜ್ ರಚಿಸಿರುವ ಕಣ್ಣಲ್ಲೇ ಸ್ಕೆಚ್ ಹಾಕಿ ಕೊಲ್‌ಬ್ಯಾಡ . .ನಿನ್ನನ್ನ' ಎಂಬ ಗೀತೆಗೆ ಹೆಜ್ಜೆ ಹಾಕಿದ್ದಾರೆ. ಸಂಪತ್‌ರಾಜ್ ನೃತ್ಯ ಸಂಯೋಜಿಸಿದ್ದ ಈ ಗೀತೆಯನ್ನು ಮೈಸೂರುಲ್ಯಾಂಪ್ಸ್ ಆವರಣದಲ್ಲಿ ನಿರ್ಮಿಸಲಾಗಿದ್ದ ಪಾಳು ಬಿದ್ದ ಕಾರ್ಖಾನೆಯ ಸೆಟ್‌ನಲ್ಲಿ ಚಿತ್ರೀಕರಿಸಿಕೊಳ್ಳಲಾಯಿತು.

ಸುಮನ್‌ರಂಗನಾಥ್, ದ್ವಾರಕೀಶ್, ಮುರಳಿಧರ್, ಆದಿಲೋಕೇಶ್ ಈ ಹಾಡಿನ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು. ಪ್ರೀಮಿಯರ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಕೃಷ್ಣೇಗೌಡರ ಆಶೀರ್ವಾದದೊಂದಿಗೆ ಮುರುಳಿಧರ್ ನಿರ್ಮಿಸುತ್ತಿರುವ ಈ ಚಿತ್ರವನ್ನು ಜನಾರ್ದನ್ ಕತೆ, ಚಿತ್ರಕತೆ ಬರೆದು ನಿರ್ದೇಶಿಸುತ್ತಿದ್ದಾರೆ. ಸುಂದರ್.ಪಿ.ಬಾಬು ಸಂಗೀತ, ಸುಂದರನಾಥ ಸುವರ್ಣ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ, ರವಿವರ್ಮ ಸಾಹಸ, ರಾಜೇಶ್, ಮಾಲೂರ್‌ಶ್ರೀನಿವಾಸ್ ನೃತ್ಯ, ಮಹಂತೇಶ್ ಸಹನಿರ್ದೇಶನ, ವೇಣು ನಿರ್ಮಾಣನಿರ್ವಹಣೆಯಿದೆ.

ಚಿತ್ರದ ತಾರಾಬಳಗದಲ್ಲಿ ಪ್ರಶಾಂತ್, ಶುಭಾಪುಂಜ, ಸುಮನ್‌ರಂಗನಾಥ್, ಮುರಳಿಧರ್, ಆದಿಲೋಕೇಶ್, ರವಿಕಾಳೆ, ದ್ವಾರಕೀಶ್, ಕೃಷ್ಣೇಗೌಡ, ಶ್ರೀನಿವಾಸಮೂರ್ತಿ, ಅವಿನಾಶ್, ಮುಖ್ಯಮಂತ್ರಿಚಂದ್ರು, ಪದ್ಮಜಾರಾವ್ ಇದ್ದಾರೆ.

(ದಟ್ಸ್ ಕನ್ನಡ ವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada