ರಾಜೇಂದ್ರ ಸಿಂಗ್ ಬಾಬು ನೂರು ಕೋಟಿ ಬಜೆಟ್ ಚಿತ್ರ

By Rajendra

ಎಸ್ ವಿ ರಾಜೇಂದ್ರ ಸಿಂಗ್ ಬಾಬು ತಮ್ಮ ನೂರನೇ ಚಿತ್ರವನ್ನು ರು.100 ಕೋಟಿ ಬಜೆಟ್ ನಲ್ಲಿ ನಿರ್ಮಿಸಲಿದ್ದಾರೆ. ಹಾಲಿವುಡ್ 'ಅವತಾರ್' ಮಾದರಿಯಲ್ಲಿ ಗ್ರಾಫಿಕ್ಸ್, ತ್ರಿಡಿ ತಂತ್ರಜ್ಞಾನದಲ್ಲಿ ತಯಾರಿಸಲಾಗುವ ಈ ಚಿತ್ರಕ್ಕೆ ಉಡುಪಿಯಲ್ಲಿ ನಡೆದ ವಿಟ್ಲಪಿಂಡಿಯೇ ಸ್ಫೂರ್ತಿಯಂತೆ!

ಭಾರಿ ಬಜೆಟ್‌ನ ಈ ಚಿತ್ರವನ್ನು ಅವರು ಭಾರತದ 16 ಭಾಷೆಗಳು , ಇಂಗ್ಲಿಷ್, ಸ್ಪಾನಿಷ್, ಜರ್ಮನ್ ಸೇರಿದಂತೆ ಒಟ್ಟು 25 ಭಾಷೆಗಳಲ್ಲಿ ತಯಾರಿಸಲು ಸಿದ್ಧತೆಗಳು ನಡೆಯುತ್ತಿವೆ. ಶ್ರೀಕೃಷ್ಣನ ಬಾಲಲೀಲೆಗಳನ್ನು ಗ್ರಾಫಿಕ್ಸ್ ಮತ್ತು ತ್ರೀಡಿ ತಂತ್ರಜ್ಞಾನದಲ್ಲಿ ತೋರಿಸಲಿರುವುದೇ ಈ ಚಿತ್ರದ ವಿಶೇಷ.

ಈ ಸಂಬಂಧ ಬಾಬು ಅವರು ಪರ್ಯಾಯ ಶೀರೂರು ಶ್ರೀ ಲಕ್ಷ್ಮಿವರತೀರ್ಥ ಶ್ರೀಪಾದರ ಭೇಟಿ ಮಾಡಿ ಅನುಗ್ರಹ ಬೇಡಿದ್ದಾರೆ. ಶ್ರೀಕೃಷ್ಣನ ಹುಟ್ಟಿನಿಂದ ಹಿಡಿದು 17 ಅಥವಾ 25ರವರೆಗಿನ ಲೀಲೆಗಳನ್ನು ತೆರೆಗೆ ತರುವ ಬಗ್ಗೆ ಚಿಂತಿಸಲಾಗಿದೆ. ವಿದ್ವಾಂಸರು ಮತ್ತು ಸ್ವಾಮೀಜಿಗಳ ಜೊತೆ ಚರ್ಚಿಸಿ ಮುಂದಿನ ಹೆಜ್ಜೆ ಇಡಲು ಬಾಬು ತೀರ್ಮಾನಿಸಿದ್ದಾರೆ.

ಸಿಂಗ್ ಬಾಬು ಅವರ ತಂದೆ ಡಿ ಶಂಕರ್ ಸಿಂಗ್ ಅವರು 50 ಚಿತ್ರ ನಿರ್ಮಿಸಿದ್ದರು. ಸಿಂಗ್ ಬಾಬು ಅವರು 47 ಚಿತ್ರಗಳನ್ನು ನಿರ್ಮಿಸಿದ್ದಾರೆ. ಇದುವರೆಗೂ ಇವರ ಕುಟುಂಬದಿಂದ 97 ಚಿತ್ರಗಳು ಬಂದಿವೆ. ಬಾಬು ಕುಟುಂಬದಿಂದ ಬಂದ 97ನೇ ಚಿತ್ರ ಉಪೇಂದ್ರ ಮುಖ್ಯ ಭೂಮಿಕೆಯಲ್ಲಿರುವ 'ಭೀಮೂಸ್ ಬ್ಯಾಂಗ್ ಬ್ಯಾಂಗ್'. ಈಗ ಎರಡು ಕಾದಂಬರಿ ಆಧಾರಿತ ಚಿತ್ರಗಳನ್ನು ನಿರ್ಮಿಸಲು ಮುಂದಾಗಿರುವ ಬಾಬು ಕುಟುಂಬ ಶತಕದ ಹೊಸ್ತಿಲಲ್ಲಿ ಬಂದು ನಿಲ್ಲಲಿದೆ.

ತಮ್ಮ ನೂರನೇ ಚಿತ್ರವನ್ನು ನೂರು ಕೋಟಿ ಬಜೆಟ್ ನಲ್ಲಿ ನಿರ್ಮಿಸುವ ಕನಸು ಈಗ ಚಿಗುರೊಡೆದಿದೆ. ದಿವಂಗತ ಡಿ ಶಂಕರ್ ಸಿಂಗ್ ನಿರ್ಮಾಣದ ಮೊದಲ ಚಿತ್ರ 'ಶ್ರೀ ಕೃಷ್ಣ ಲೀಲಾ'. ಈಗ ರಾಜೇಂದ್ರ ಸಿಂಗ್ ಬಾಬು ನಿರ್ಮಿಸಲು ಹೊರಟಿರುವ 50ನೇ ಚಿತ್ರವೂ 'ಶ್ರೀಕೃಷ್ಣ ಲೀಲಾ' ಆಗಿರುವುದು ವಿಶೇಷ. ಸರಕಾರದ ನೆರವನ್ನು ಪಡೆದು ಸಹಕಾರಿ ವ್ಯವಸ್ಥೆಯಲ್ಲಿ ಚಿತ್ರವನ್ನು ನಿರ್ಮಿಸುವ ಯೋಚನೆ ಬಾಬು ಅವರದು.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X