For Quick Alerts
  ALLOW NOTIFICATIONS  
  For Daily Alerts

  ಜೀ ಕನ್ನಡದಲ್ಲಿ ಕುಣಿಯೋಣು ಬಾರಾ ಕಿಡ್ಸ್ ಸ್ಪೆಷಲ್

  By Staff
  |

  ಜೀ ಕನ್ನಡದ ಪ್ರಮುಖ ಕಾರ್ಯಕ್ರಮ 'ಕುಣಿಯೋಣು ಬಾರಾ' (ಭಾಗ 4) ನೃತ್ಯ ಕಾರ್ಯಕ್ರಮ ಕಿರುತೆರೆ ವೀಕ್ಷಕರನ್ನು ಮೆಚ್ಚಿಸುವಲ್ಲಿ ಸಫಲವಾಗಿದೆ. ಕರ್ನಾಟಕದಾದ್ಯಂತದಿಂದ 7ರಿಂದ12 ವಯಸ್ಸಿನ ಒಳಗಿನ ನೃತ್ಯ ಪ್ರತಿಭೆಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದ್ದು ಇವರ ನಡುವೆ ಈಗಾಗಲೇ ಸ್ಪರ್ಧೆ ಪ್ರಾರಂಭವಾಗಿದೆ. ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 8ರಿಂದ 9 ರವರೆಗೆ ಪ್ರಸಾರವಾಗುತ್ತಿದೆ.

  ಪುಟ್ಟ ಪುಟ್ಟ ಹೆಜ್ಜೆಗಳಿಂದ ನರ್ತಿಸುವ ಈ ಪುಟಾಣಿಗಳನ್ನು ನೋಡುವುದೇ ಸೊಗಸು. ಶಾಸ್ತ್ರೀಯ ನೃತ್ಯದೊಂದಿಗೆ ಸಿನೆಮಾ ಹಾಡುಗಳ ಫ್ಯೂಷನ್‌ನಂತಹ ಕಠಿಣ ಪ್ರಯೋಗಗಳನ್ನು ಮಾಡುವ ಈ ಪುಟಾಣಿಗಳ ಪ್ರತಿಭೆ ಬೆರಗು ಹುಟ್ಟಿಸುವಂತಹದ್ದು. ಮೈಸೂರಿನ ಜೇಷ್ಠ, ಮಂಗಳೂರಿನ ಜ್ಞಾನ, ಧಾರವಾಡದ ನಿಹಾಲ್, ಮೂಡುಬಿದಿರೆಯ ಪಂಚಮಿ ಎಲ್ಲರೂ ಒಬ್ಬರಿಗಿಂತ ಒಬ್ಬರು ಉತ್ತಮವಾಗಿ ನರ್ತಿಸುತ್ತಿದ್ದಾರೆ. ಪುಟ್ಟ ಮಕ್ಕಳಿಗಾಗಿ 'ಸರಿಗಮಪ' ಗಾಯನ ಸ್ಪರ್ಧೆ ನಡೆಸಿ ಯಶಸ್ವಿಯಾದ ಜೀ ಕನ್ನಡ ಈಗ ಮಕ್ಕಳಲ್ಲಿರುವ ನೃತ್ಯ ಪ್ರತಿಭೆಯನ್ನು ಹೊರಗೆಡಹುವಲ್ಲಿ ಸಫಲವಾಗಿದೆ.

  ಈ ಕಾರ್ಯಕ್ರಮದ ಇನ್ನೊಂದು ವಿಶೇಷವೆಂದರೆ ಕಾರ್ಯಕ್ರಮದ ನಿರೂಪಕರಾಗಿ 'ಸರಿಗಮಪ' ಲಿಟ್ಲ್ ಚಾಂಪ್ಸ್ ಪ್ರತಿಭೆಗಳಾದ ಸಹನಾ ಹೆಗ್ಡೆ ಹಾಗೂ ಅನಿರುದ್ಧ ನಿರೂಪಕರಾಗಿದ್ದಾರೆ. ವಾರದಿಂದ ವಾರಕ್ಕೆ ಉತ್ತಮ ಕುತೂಹಲ ಮೂಡಿಸುತ್ತಿರುವ ಈ ಕಾರ್ಯಕ್ರಮ ಕಿರುತೆರೆ ವೀಕ್ಷಕರ ನೆಚ್ಚಿನ ಕಾರ್ಯಕ್ರಮವಾಗಿ ಮೂಡಿ ಬಂದಿದೆ. ಈಗಾಗಲೆ ಸ್ಪರ್ಧೆಗೆ ಆಯ್ಕೆಯಾದ ಪುಟಾಣಿ ನೃತ್ಯ ಪಟುಗಳು ಜನಪದ, ಸಿನೆಮಾ, ಹಳೆಯ ಸಿನೆಮಾ ಗೀತೆಗಳು, ಐಟಂ ಗೀತೆಗಳು ಮುಂತಾದವುಗಳ ನೃತ್ಯವನ್ನು ಪ್ರದರ್ಶಿಸುವ ಸುಮಾರು 11 ರೌಂಡ್‌ಗಳಲ್ಲಿ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸುತ್ತಿದ್ದಾರೆ.

  ಪ್ರತಿಯೊಬ್ಬ ಸ್ಪರ್ಧಿಗೂ ನೃತ್ಯ, ವಸ್ತ್ರ ವಿನ್ಯಾಸ, ಆಂಗೀಕ ಅಭಿವ್ಯಕ್ತಿಯ ಪ್ರಾಮುಖ್ಯತೆ, ನೃತ್ಯದಲ್ಲಿ ನವೀನತೆ ಮುಂತಾದವುಗಳ ಕುರಿತು ಪರಿಣಿತರಿಂದ ತರಬೇತಿ ನೀಡಲಾಗುತ್ತಿದೆ. ಜೀ ಕನ್ನಡದ ಈ ಕಾರ್ಯಕ್ರಮ ನೃತ್ಯ, ಸಂಗೀತ, ಹಾಸ್ಯ ಇಷ್ಟ ಪಡುವ ಪ್ರೇಕ್ಷಕರಿಗೆ ಇದೊಂದು ಸುಂದರ ಕೊಡುಗೆ ಎಂದು ಜೀ ಕನ್ನಡ ವಾಹಿನಿಯ ವ್ಯವಹಾರ ಮುಖ್ಯಸ್ಥ ಅನುಪ್ ಚಂದ್ರಶೇಖರನ್ ತಿಳಿಸಿದ್ದಾರೆ.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X