»   » ಕೇಂದ್ರ ಸೆನ್ಸಾರ್‌ ಮಂಡಳಿ ಸದಸ್ಯೆಯಾಗಿ ಭಾರತಿ ಆಯ್ಕೆ

ಕೇಂದ್ರ ಸೆನ್ಸಾರ್‌ ಮಂಡಳಿ ಸದಸ್ಯೆಯಾಗಿ ಭಾರತಿ ಆಯ್ಕೆ

Subscribe to Filmibeat Kannada

ಬೆಂಗಳೂರು : ಕೇಂದ್ರ ಸೆನ್ಸಾರ್‌ ಮಂಡಳಿಯ ಕರ್ನಾಟಕದ ಸದಸ್ಯೆಯಾಗಿ ಹಿರಿಯ ಚಿತ್ರನಟಿ ಭಾರತಿ ವಿಷ್ಣುವರ್ಧನ್‌ ಆಯ್ಕೆಯಾಗಿದ್ದು, ಮಂಗಳವಾರ ಅಧಿಕಾರವಹಿಸಿಕೊಂಡಿದ್ದಾರೆ.

ಇದಕ್ಕೂ ಮೊದಲು ಕರ್ನಾಟಕದ ಸದಸ್ಯೆಯಾಗಿ ಶಾಂತಾ ಹಲಗಿ ಕಾರ್ಯ ನಿರ್ವಹಿಸುತ್ತಿದ್ದರು. ಚಲನಚಿತ್ರಗಳಿಗೆ ಪ್ರಮಾಣಪತ್ರ ನೀಡುವಾಗ ಲಂಚ ಪಡೆಯುತ್ತಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ, ಶಾಂತಾ ಅವರ ಸದಸ್ಯತ್ವವನ್ನು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯ ರದ್ದು ಪಡಿಸಿತ್ತು. ಶಾಂತಾ ಅವರಿಂದ ತೆರವಾದ ಸ್ಥಾನಕ್ಕೆಭಾರತಿ ಅವರನ್ನು ನೇಮಕ ಮಾಡಲಾಗಿದೆ.

ಸದಸ್ಯತ್ವದ ಅವಧಿ ಒಟ್ಟು ಮೂರು ವರ್ಷವಿದ್ದು, ಶಾಂತಾ ಹಲಗಿ ಒಂದು ವರ್ಷವನ್ನೂ ಪೂರೈಸಿರಲಿಲ್ಲ. ಸದಸ್ಯತ್ವ ರದ್ದುಪಡಿಸಿದ ಪ್ರಸಂಗ ದೇಶದ ಇತಿಹಾಸದಲ್ಲಿ ಮೊದಲ ಬಾರಿಗೆ ನಡೆದಿದೆ.

(ಇನ್ಫೋ ವಾರ್ತೆ)

Post your views

ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada