»   » ಭಾವನಾಗೆ ಭಾವನಾನೇ ಸಾಟಿ! ಅವಳು ಜೂನಿಯರ್‌ ಕಲ್ಪನಾ...

ಭಾವನಾಗೆ ಭಾವನಾನೇ ಸಾಟಿ! ಅವಳು ಜೂನಿಯರ್‌ ಕಲ್ಪನಾ...

Posted By:
Subscribe to Filmibeat Kannada


ನಿನ್ನೆ(ಜ.31) ಭಾವನಾ ಹುಟ್ಟುಹಬ್ಬ... ಅವಳಿಗೊಂದು ಗ್ರೀಟಿಂಗ್‌ ಕಾರ್ಡಾ ಕೊಡೋಣ ಅಂದ್ರೆ, ಅವಳು ಎಲ್ಲಿದ್ದಾಳೋ ಯಾರಿಗೆ ಗೊತ್ತು? ಅವಳನ್ನು ನೆನೆಸಿಕೊಂಡರೆ ಮನಸ್ಸಿಗೆ ಜಾಸ್ತಿ ಬೇಜಾರು ಆಗುತ್ತೆ. ಆದ್ರೆ ಏನ್‌ ಮಾಡೋದು...?

  • ಏಳನೆ ಕ್ರಾಸ್‌ ಶೀನ

ನೀವು ನಂಬಿದ್ರೆ ನಂಬಿ, ಬಿಟ್ಟರೆ ಬಿಡಿ. ನಾನು-ನಮ್ಮುಡುಗರು ‘ಚಂದ್ರಮುಖಿ ಪ್ರಾಣಸಖಿ’ ಸಿನಿಮಾನ 21ಸಲ ನೋಡಿ ಮಜಾಮಾಡಿದ್ದೇವೆ! ತೆಂಗಿನಮರ, ಅದೇ ಸ್ವಾಮಿ ಮೊನ್ನೆಯಷ್ಟೇ ಮದ್ವೆಯಾಗಿ, ಗಂಡನ ಮನೆ ಸೇರಿದಳಲ್ಲಾ ಪ್ರೇಮಾ, ಹಾಂ ಅವಳ ತಂಗಿ ಪಾತ್ರದಲ್ಲಿ ನಮ್‌ ಭಾವನಾ ಎಷ್ಟು ಮುದ್ದಾಗಿ ನಟಿಸಿದ್ದಳು ಅಲ್ವಾ? ಅವಳ ಕಣ್ಣು, ಅವಳ ಮಾತು... ಅವಳಿಗೆ ಅವಳೇ ಸಾಟಿ...

ರಾಧಿ-ವಿಜಿ ಜೋಡಿಯ ‘ನಿನಗಾಗಿ’ ಸಿನಿಮಾದಲ್ಲಿ ವಿಚಿತ್ರವಾಗಿ ಕುಣಿದು, ಭಾವನಾ ನಮಗೆ ಇನ್ನಷ್ಟು ಅರ್ಥವಾದಳು! ಅವಳು ‘ಅಪ್ಪಿಕೊಳ್ಳಲ್ವಾ? ಒಂದು ಪಪ್ಪಿ ಕೊಡಲ್ವಾ’ ಅಂಥ ಹಾಡ್ತಾ, ಕುಣಿದು ಕುಪ್ಪಳಿಸ್ತಾ ಇದ್ರೆ, ಒಂದು ಚೂರು ಖುಷಿ, ಒಂದು ಚೂರು ಬೇಜಾರು ಎರಡೂ ಒಟ್ಟೊಟ್ಟಿಗೆ ಆಯ್ತು!

ನೀವು ಏನೇ ಅನ್ನಿ, ಭಾವನಾಗೆ ಭಾವನಾನೇ ಸಾಟಿ. ಅವಳು ಜೂನಿಯರ್‌ ಕಲ್ಪನಾ. ಅದ್ಯಾವುದೋ ಒಂದೇ ಪಾತ್ರವಿರೋ ‘ಶಾಂತಿ’ ಸಿನಿಮಾದಲ್ಲಿ ನಟಿಸಿ ಸೈ ಅನ್ನಿಸಿಕೊಂಡ ಭಾವನಾಗೆ, ಒಳ್ಳೆ ಪಾತ್ರಗಳೇ ಸಿಗಲಿಲ್ಲ. ನಮ್ಮವರು ಚಾನ್ಸ್‌ ಕೊಡಲಿಲ್ಲವೆಂದೋ, ಅಥವಾ ಬಾಲಿವುಡ್‌ನ ಆಕರ್ಷಣೆಗೋ ಇದ್ದಕ್ಕಿದ್ದಂತೆ ಮಾಯವಾದಳು! ಈ ಹುಡುಗಿಯರೇ ಹೀಗೆ ಅಲ್ವಾ?

ಅದಿರಲಿ ಬಾಲಿವುಡ್‌ನಲ್ಲಿ ಮಿಂಚೋದಕ್ಕೆ ಹೋದ ಭಾವನಾ, ಅಲ್ಲೂ ಇದ್ದಂಗಿಲ್ಲ. ಎಲ್ಲಿಗೆ ಹೋದಳೋ? ನಿನ್ನೆ(ಜ.31) ಭಾವನಾ ಹುಟ್ಟುಹಬ್ಬ... ಅವಳಿಗೊಂದು ಗ್ರೀಟಿಂಗ್‌ ಕಾರ್ಡಾ ಕೊಡೋಣ ಅಂದ್ರೆ, ಅವಳು ಎಲ್ಲಿದ್ದಾಳೋ ಯಾರಿಗೆ ಗೊತ್ತು? ಅವಳನ್ನು ನೆನೆಸಿಕೊಂಡರೆ ಮನಸ್ಸಿಗೆ ಜಾಸ್ತಿ ಬೇಜಾರು ಆಗುತ್ತೆ. ಆದ್ರೆ ಏನ್‌ ಮಾಡೋದು...?

ನಿಮಗೆ ಗೊತ್ತೆ? - ನಮ್ಮುಡುಗಿ ದಾಮಿನಿನೂ ತಪ್ಪಿಸಿಕೊಂಡಿದ್ದಾಳೆ!

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada