ರಾಜ್‌ಕುಮಾರ್ ಚೇತರಿಕೆ : ಇನ್ನೆರಡು ದಿನಗಳಲ್ಲಿ ಮನೆಗೆ
ಬೆಂಗಳೂರು : ತೀವ್ರ ನಿಗಾ ಘಟಕದಿಂದ ವರನಟ ಡಾ। ರಾಜ್‌ಕುಮಾರ್ ಅವರನ್ನು ಸ್ಪೆಷಲ್ ವಾರ್ಡ್‌ಗೆ ವರ್ಗಾಯಿಸಲಾಗಿದೆ. ಇನ್ನೆರಡು ದಿನದಲ್ಲಿ ಅವರು ಮನೆಗೆ ತೆರಳಲಿದ್ದಾರೆ ಎಂದು ಆಸ್ಪತ್ರೆ ಮೂಲಗಳು ಬುಧವಾರ ತಿಳಿಸಿವೆ.
ತೀವ್ರ ಎದೆನೋವು ಮತ್ತು ಉಸಿರಾಟದ ಸಮಸ್ಯೆಯಿಂದ ನಗರದ ವೋಕ್ಹಾರ್ಟ್ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಆರೋಗ್ಯ ಚೇತರಿಕೆ ಕಂಡಿದ್ದು, ನಿಯಮಿತವಾಗಿ ಈಗ ಆಹಾರ ಸೇವಿಸುತ್ತಿದ್ದಾರೆ. ಅವರ ಆರೋಗ್ಯದ ಬಗ್ಗೆ ಆತಂಕಗೊಳ್ಳುವ ಅವಶ್ಯಕತೆ ಇಲ್ಲ ಎಂದು ವೈದ್ಯರು ತಿಳಿಸಿದ್ದಾರೆ.
ತಮ್ಮ ಸಹೋದರನ ನಿಧನದಿಂದ ರಾಜ್‌ಕುಮಾರ್ ತಲ್ಲಣಗೊಂಡಿದ್ದಾರೆ. ಅವರ ಅನಾರೋಗ್ಯದಿಂದ ರಾಜ್ ಅಭಿಮಾನಿಗಳು ಕಂಗೆಟ್ಟಿದ್ದರು.
(ದಟ್ಸ್ ಕನ್ನಡ ವಾರ್ತೆ)
Post your views
ಮುಖಪುಟ / ಸ್ಯಾಂಡಲ್‌ವುಡ್


Click it and Unblock the Notifications