ನಾಗತಿಹಳ್ಳಿ-ವಿಷ್ಣುವರ್ಧನ್ ಜೋಡಿಯ ಭಲೇ ಚಿತ್ರ!
ನಟ ವಿಷ್ಣು ವರ್ಧನ್ ಮತ್ತು ನಾಗತಿಹಳ್ಳಿ ಚಂದ್ರಶೇಖರ್ ಮೊದಲ ಬಾರಿಗೆ ಜೊತೆಯಾಗಿದ್ದಾರೆ. ಈ ಇಬ್ಬರ ಜೋಡಿಯ ‘ಮಾತಾಡು ಮಾತಾಡು ಮಲ್ಲಿಗೆ’ ಚಿತ್ರ ಮೋಡಿ ಮಾಡುವುದೇ ಎಂಬುದನ್ನು ಕಾದು ನೋಡಬೇಕು.
ನಾಗತಿಹಳ್ಳಿ ಅವರ ‘ಅಮೃತಧಾರೆ ’ ಚಿತ್ರ ನೋಡಿ ಬೆರಗಾಗಿರುವ ವಿಷ್ಣುಗೆ, ಈ ಚಿತ್ರ ಒಂದು ವಿಶೇಷ ಅನುಭವವಂತೆ. ಈ ಚಿತ್ರದ ಜೊತೆಯಲ್ಲಿಯೇ ನಾಗತಿ, ತನ್ನ ತವರು ನೆಲವಾದ ಕಿರುತೆರೆಯತ್ತಲೂ ಆಸಕ್ತಿ ವಹಿಸಿದ್ದಾರೆ. ಅವರ ‘ಒಲವೇ ನನ್ನ ಬದುಕು’ ಮೆಗಾ ಸೀರಿಯಲ್ ಸದ್ಯದಲ್ಲಿಯೇ ಆರಂಭಗೊಳ್ಳಲಿದೆ. ಈ ಧಾರಾವಾಹಿಯ ಪ್ರಮುಖ ಪಾತ್ರದಲ್ಲಿ ಪವಿತ್ರಾ ಲೋಕೇಶ್ ಅಭಿನಯಿಸುತ್ತಿದ್ದಾರೆ.
ರಾಕ್‌ಲೈನ್ ವೆಂಕಟೇಶ್ ನಿರ್ಮಾಣದ ‘ಸಿರಿವಂತ’ದಲ್ಲಿ ನಟ ವಿಷ್ಣುವರ್ಧನ್ ಅಭಿನಯಿಸಲಿದ್ದಾರೆ. ವಿಷ್ಣು ಮತ್ತು ನಿರ್ದೇಶಕ ನಾರಾಯಣ್ ಜೋಡಿ ಈ ಚಿತ್ರದಲ್ಲಿದೆ. ಸೂರ್ಯವಂಶ, ಸಿಂಹಾದ್ರಿಯ ಸಿಂಹ, ವೀರಪ್ಪ ನಾಯಕ, ಜಮೀನ್ದಾರ್ರು, ವರ್ಷ ಚಿತ್ರದ ಹಾದಿಯಲ್ಲಿ ‘ಸಿರಿವಂತ’ ಸಾಗಲಿದ್ದಾನೆ ಎಂಬ ವಿಶ್ವಾಸ ನಾರಾಯಣ್‌ಗಿದೆ. ಈ ಚಿತ್ರದ ಕತೆ, ಸಂಭಾಷಣೆ, ಸೇರಿದಂತೆ ವಿವಿಧ ವಿಭಾಗಗಳ ಹೊಣೆಯನ್ನು ನಾರಾಯಣ್ ಎಂದಿನಂತೆ ತಮ್ಮ ಹೆಗಲ ಮೇಲೆ ಹಾಕಿಕೊಂಡಿದ್ದಾರೆ.
‘ವೀರಪ್ಪ ನಾಯಕ’ ಚಿತ್ರದಲ್ಲಿ ವಿಷ್ಣುಗೆ ನಾಯಕಿಯಾಗಿ ಅಭಿನಯಿಸಿದ್ದ ಶ್ರುತಿ, ‘ಸಿರಿವಂತ’ಚಿತ್ರದ ಮೂಲಕ ಮತ್ತೆ ಚಿತ್ರರಂಗಕ್ಕೆ ಮರು ಪ್ರವೇಶ ಪಡೆಯುತ್ತಿದ್ದಾರೆ.
ಮುಖಪುಟ / ಸ್ಯಾಂಡಲ್‌ವುಡ್


Click it and Unblock the Notifications