»   » ಏಪ್ರಿಲ್‌ 31 ರಂದು ಕಂಠೀರವ ಕ್ರೀಡಾಂಗಣದಲ್ಲಿ ಮದುವೆ, ತಪ್ಪದೇ ಬನ್ನಿ .

ಏಪ್ರಿಲ್‌ 31 ರಂದು ಕಂಠೀರವ ಕ್ರೀಡಾಂಗಣದಲ್ಲಿ ಮದುವೆ, ತಪ್ಪದೇ ಬನ್ನಿ .

Subscribe to Filmibeat Kannada

*ನೀಲಿ

‘ಹ್ಯಾಪಿ ಯುಗಾದಿ’ ಅನ್ನುತ್ತಲೇ ದಿಢೀರ್‌ ಪ್ರತ್ಯಕ್ಷರಾದ ಉಪೇಂದ್ರ ನಾವು ಚೇತರಿಸಿಕೊಳ್ಳಲೂ ಅವಕಾಶ ಕೊಡದೆ ಹೇಳಿದರು-

‘... ನಿಮ್ಗೇ ಗೊತ್ತಲ್ಲ ಸಾರ್‌, ನಮ್‌ ಪುನೀತ್‌ ರಾಜ್ಕುಮಾರ್‌ಗೆ ವರ್ಷದ ಹಿಂದೆಯೇ ಮದ್ವೆ ಆಯ್ತು. ಸುದೀಪೂ ಆವಾಗ್ಲೇ ಮದ್ವೆ ಆಗಿಬಿಟ್ಟ. ಈಗ ದರ್ಶನ್‌ ಕೂಡ ಮದುವೆಗೆ ತಯಾರಾಗಿದಾನೆ! ನಟಿ ಪ್ರೇಮಾ ಕೂಡ ಗುಟ್ಟಾಗಿ ಮದ್ವೆ ಆಗಿದಾರೆ ಅಂತಲೂ ರೂಮರ್ರು! ಅವರೆಲ್ಲರಿಗಿಂತ ನಾನು ಯಾವುದರಲ್ಲಿ ಕಡ್ಮೆ ಇದೀನಿ ಹೇಳಿ. ಉಳಿದೋರೆಲ್ಲ ಮದುವೆ ಮಜಾ ಅನುಭವಿಸಬಹುದಂತೆ... ನಾನು ಸುಮ್ನೆ ಉಳೀಬೇಕಾ? ನಾನು ತೀರ್ಮಾನ ಮಾಡಿಬಿಟ್ಟಿದೀನಿ, ಇದೇ 31ರಂದು ಕಂಠೀರವ ಕ್ರೀಡಾಂಗಣದಲ್ಲಿ ಮದ್ವೆ ಆಗ್ತಿದ್ದೀನಿ...

ಓಲ್ಡ್‌ ಈಸ್‌ ಗೋಲ್ಡ್‌ ಅನ್ನೋ ಮಾತಲ್ಲಿ ನಂಗೆ ವಿಪರೀತ ನಂಬಿಕೆಯಿದೆ. ಹಾಗಾಗಿ ನೋಡೋಕೆ ಲಕ್ಷಣವಾಗಿರುವ, 30 ವರ್ಷ ದಾಟಿರುವ, 36-24-36 ಅಂಗಸೌಷ್ಠವ ಹೊಂದಿರುವ (ಇದು ಕಡ್ಡಾಯ) ಹುಡುಗೀನ ಮದ್ವೆ ಆಗಿಬಿಡ್ತೀನಿ’ ಸಾರ್‌ ಎಂದ ಉಪೇಂದ್ರ ನಮ್ಮಿಂದ ಬೀಳ್ಕೊಡುವ ಮುನ್ನ ಇನ್ನೂ 2 ಮಹತ್ವದ ವಿಷಯ ಹೇಳಿದರು.

ನಂಬರ್‌ ಒನ್‌ : ಮದುವೆ ನೆಪದಲ್ಲಿ ಉಪೇಂದ್ರ ಕನ್ಯಾಪಿತೃಗಳಿಗಾಗಿ ಅಪರೂಪದ ಸ್ಪರ್ಧೆಯಾಂದನ್ನು ಹಮ್ಮಿಕೊಂಡಿದ್ದಾರೆ. ಆ ಪ್ರಕಾರ ಉಪ್ಪಿಯ ಮಾವನಾಗಬಯಸುವ ವ್ಯಕ್ತಿ ತನ್ನ ಹೆಂಡತಿಯಾಂದಿಗೆ ಮಹಾತ್ಮಗಾಂಧಿ ರಸ್ತೆಯುದ್ದಕ್ಕೂ ಎಂಟೀವಿ ಸುಬ್ಬುಲಕ್ಷ್ಮಿ ... ಹಾಡು ಹೇಳುತ್ತಾ ಕುಣಿಯಬೇಕು. ಹೆಂಡತಿಯಿಂದಲೂ ಕುಣಿಸಬೇಕು!

ನಂಬರ್‌ ಟೂ : ಉಪ್ಪಿಗೆ ಮುಂದಿನ ಎಲ್ಲ ಚಿತ್ರಗಳಲ್ಲೂ ಖಳನಾಯಕನ ಪಾತ್ರ ವಹಿಸಲು ಸಿದ್ಧನಿರಬೇಕು. ಅದಕ್ಕೂ ಬಾಂಡ್‌ ಪೇಪರಿನ ಮೇಲೆ ‘ಉಪ್ಪಿಗಿಂತ ರುಚಿಯಿಲ್ಲ , ಉಪೇಂದ್ರನಂಥ ಅಳಿಯನಿಲ್ಲ’ ಎಂದು ಬರೆದುಕೊಡಬೇಕು!

ಈ ಷರತ್ತುಗಳಿಗೆ ಒಪ್ಪುವ, 30 ವರ್ಷ ದಾಟಿದ, 36-24-36 ಅಂಗಸೌಷ್ಠವದ ಕನ್ಯಾಮಣಿಯನ್ನು ಹೊಂದಿರುವ ಮಾತಾಪಿತರು ಏಪ್ರಿಲ್‌ 1 ರ ಬೆಳಗ್ಗೆ 7 ಗಂಟೆಯಾಳಗಾಗಿ- ಉಪೇಂದ್ರ ಅಲಿಯಾಸ್‌ ತರ್ಲೆ ನನ್ಮಗ, ಸ್ವಸ್ತಿಕ್‌ ನಿವಾಸ, ಶ್‌ ಬಡಾವಣೆ, ಆಪರೇಷನ್‌ ಹಂತ, ಎ ಕ್ರಾಸ್‌, ಓಂ ನಗರ, ಈ ವಿಳಾಸವನ್ನು ಸಂಪರ್ಕಿಸಬಹುದು.

(ವಿಜಯ ಕರ್ನಾಟಕ)

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada