»   » ಪುನೀತ್‌ ಈಗ ಇಬ್ಬರು ಪುತ್ರಿಯರ ಮುದ್ದಿನ ಅಪ್ಪ !

ಪುನೀತ್‌ ಈಗ ಇಬ್ಬರು ಪುತ್ರಿಯರ ಮುದ್ದಿನ ಅಪ್ಪ !

Subscribe to Filmibeat Kannada

ನಟ ಪುನೀತ್‌ ಈಗ ಎರಡನೇ ಸಲ ಅಪ್ಪ ಆಗಿದ್ದಾರೆ! ಅವರ ಪತ್ನಿ ಅಶ್ವಿನಿ, ನಗರದ ರಿಪಬ್ಲಿಕ್‌ ನರ್ಸಿಂಗ್‌ ಹೋಮ್‌ನಲ್ಲಿ ಹೆಣ್ಣುಮಗುವಿಗೆ ಜನ್ಮ ನೀಡಿದ್ದಾರೆ.

ತಂದೆಯನ್ನು ಕಳೆದುಕೊಂಡು ನೋವಿನಲ್ಲಿದ್ದ ಪುನೀತ್‌ ಬದುಕಲ್ಲಿ, ಇದೊಂದು ಪುಟ್ಟ ಮಿಂಚು. ಅಕ್ಷಯ ತೃತೀಯದ ವಿಶೇಷ ದಿನವಾದ ಭಾನುವಾರ(ಏ.30), ರಾಜ್‌ ಕುಟುಂಬಕ್ಕೆ ಹೊಸ ಸದಸ್ಯೆ ಸೇರ್ಪಡೆಯಾಗಿದ್ದಾಳೆ. ಆ ಮೂಲಕ ಸದಾಶಿವ ನಗರದ ಯಜಮಾನನಿಲ್ಲದ ಸೂತಕದ ಮನೆಯಲ್ಲಿ ತುಸು ಲವಲವಿಕೆಯ ಹೊಸ ಬೆಳಕು ಮೂಡಿದೆ.

ಪುಟ್ಟ ರಾಜಕುಮಾರಿ ಬಂದ ಸಂಭ್ರಮ, ನೋವಿನ ನಡುವೆಯೂ ಸಡಗರ ತಂದಿದೆ. ಮಗುವಿನ ಕಣ್ಣು, ಮೂಗು ಎಲ್ಲವೂ ಅಪ್ಪನನ್ನೇ ಹೋಲುತ್ತಿದೆ ಎನ್ನುವ ಸಂಭ್ರಮ ಪುನೀತ್‌ ಅವರದು. ಹುಣ್ಣಿಮೆಯಂತೆ ಬಂದ ಮುದ್ದಾದ ಕಂದ, ಪಾರ್ವತಮ್ಮನವರ ಮುಖದಲ್ಲೂ ಒಂದಿಷ್ಟು ಉತ್ಸಾಹ ತರಿಸಿದೆ.

ಏ.12ರಂದು ರಾಜ್‌ಕುಮಾರ್‌ ಮೃತಪಟ್ಟರು. ಆದಾದ 18ದಿವಸಕ್ಕೆ ಸರಿಯಾಗಿ, ಹೊಸ ಸದಸ್ಯೆ ಆಗಮನ ಕೇವಲ ಕಾಕತಾಳೀಯ.

ಈ ಹಿಂದೆ ‘ಅಪ್ಪು ’ ಚಿತ್ರದ ಸಂಭ್ರಮದಲ್ಲಿದ್ದ ಪುನೀತ್‌, ಆಗ ಅಪ್ಪ ಆಗಿದ್ದರು(ಏ.22,2003). ಈಗ ಅವರ ನಾಯಕತ್ವದ ‘ಅಜಯ್‌’ ಚಿತ್ರ ಮೇ 4ರಂದು ತೆರೆಕಾಣುತ್ತಿದೆ. ಈ ಸಂದರ್ಭದಲ್ಲಿಯೇ ಪುನೀತ್‌ ಮತ್ತೊಮ್ಮೆ ಅಪ್ಪ ಆಗಿದ್ದಾರೆ. ಪುನೀತ್‌ ಅಣ್ಣ ಶಿವಣ್ಣನಿಗೂ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada