»   » ಕರ್ನಾಟಕದ ಸಿಂಗಿಂಗ್‌ ಸ್ಟಾರ್‌: ಚಿನ್ಮಯ್‌ ಅಥವಾ ಸೌಮ್ಯಶ್ರೀ?

ಕರ್ನಾಟಕದ ಸಿಂಗಿಂಗ್‌ ಸ್ಟಾರ್‌: ಚಿನ್ಮಯ್‌ ಅಥವಾ ಸೌಮ್ಯಶ್ರೀ?

Subscribe to Filmibeat Kannada


ಜೀ ಕನ್ನಡ ವಾಹಿನಿಯ ಜನಪ್ರಿಯ ಕಾರ್ಯಕ್ರಮ ‘ಸ ರಿ ಗ ಮ ಪ’ ಸಂಗೀತ ಸ್ಪರ್ಧೆಯ ಅಂತಿಮ ಹಣಾಹಣಿ, ಮೇ. 6ರಂದು ನಡೆಯಲಿದೆ.ಎಸ್‌ಎಂಎಸ್‌ ಮೂಲಕ ನಿಮ್ಮ ನೆಚ್ಚಿನ ಗಾಯಕ ಅಥವಾ ಗಾಯಕಿಯನ್ನು ಆರಿಸಿರಿ.

ಸೂಚನೆ:
ಚಿನ್ಮಯ್‌ ಅವರನ್ನು ಗೆಲ್ಲಿಸಲು ZKS CHINMAY ಎಂದು ಮೊಬೈಲ್‌ನಲ್ಲಿ ಟೈಪ್‌ ಮಾಡಿ 7575ಕ್ಕೆ ಎಸ್‌ಎಂಎಸ್‌ ಕಳಿಸಿ.

ಸೌಮ್ಯಶ್ರೀ ಅವರನ್ನು ಗೆಲ್ಲಿಸಲು ZKS SOWMYASHREE ಎಂದು ಮೊಬೈಲ್‌ನಲ್ಲಿ ಟೈಪ್‌ ಮಾಡಿ 7575ಕ್ಕೆ ಎಸ್‌ಎಂಎಸ್‌ ಕಳಿಸಿ.

‘ಸ ರಿ ಗ ಮ ಪ’ ಫೈನಲ್‌ ವಿಜೇತರಿಗೆ ಬಹುಮಾನಗಳ ಮಹಾಪೂರವೇ ಹರಿದು ಬರಲಿದೆ. ಪ್ರಥಮ ಸ್ಥಾನ ಗಳಿಸಿದ ಸ್ಪರ್ಧಿಗೆ ಸ್ಯಾಂಟ್ರೋ ಕಾರು, ಆಶ್ವಿನಿ ಆಡಿಯೋ ಸಂಸ್ಥೆಯಿಂದ ಧ್ವನಿಸುರಳಿ ಹೊರತರುವ ಸುವರ್ಣ ಅವಕಾಶ ಹಾಗೂ 15,000 ರೂ ಮೌಲ್ಯದ ಚಿನ್ನ ಸಿಗಲಿದೆ.

ರನ್ನರ್‌ ಅಪ್‌ ಸ್ಪರ್ಧಿಗೆ 50,000ರೂ ನಗದು ಹಾಗೂ 10,000ರೂ ಮೌಲ್ಯದ ಚಿನ್ನ ಲಭಿಸಲಿದೆ.

ಹಾಸನ, ಮೈಸೂರು, ಹುಬ್ಬಳ್ಳಿ, ರಾಯಚೂರು, ಶಿವಮೊಗ್ಗ, ಬೆಂಗಳೂರು ಹಾಗೂ ಇತರೆ ಜಿಲ್ಲೆಗಳಾದ್ಯಾಂತ ನಡೆದ ಆರಂಭದ ಸುತ್ತುಗಳಲ್ಲಿ 5000ಕ್ಕೂ ಅಧಿಕ ಜನ ಪಾಲ್ಗೊಂಡಿದ್ದರು. 8 ತಿಂಗಳುಗಳ ಕಾಲ ನಡೆದ ಸ್ಪರ್ಧೆಯ ಕೊನೆಯ ಹಂತದಲ್ಲಿ 52 ಜನ ಯುವ ಪ್ರತಿಭೆಗಳು ಆಯ್ಕೆ ಆಗಿದ್ದರು.

ಕರ್ನಾಟಕದ ಸಿಂಗಿಂಗ್‌ ಸ್ಟಾರ್‌ : ಚಿನ್ಮಯ್‌ ಅಥವಾ ಸೌಮ್ಯಶ್ರೀ?

ವೀಕ್ಷಕರು ಕಳಿಸುವ ಎಸ್‌ಎಂಎಸ್‌ ಸಂದೇಶ ಹಾಗೂ ತೀರ್ಪುಗಾರರ ಆಯ್ಕೆಯ ಮೇಲೆ ಆಧಾರಿತವಾದ ಈ ಸ್ಪರ್ಧೆಯ ಕೊನೆಯ ಹಂತದಲ್ಲಿ, ಬೆಂಗಳೂರಿನ ಚಿನ್ಮಯ್‌ ಹಾಗೂ ಚಿತ್ರದುರ್ಗದ ಸೌಮ್ಯಶ್ರೀ ಕಣದಲ್ಲಿದ್ದಾರೆ. ಬೆಂಗಳೂರಿನಲ್ಲಿ ಮೇ 6ರಂದು ನಡೆಯುವ ಬೃಹತ್‌ ಸಂಗೀತ ಸ್ಪರ್ಧೆಯ ಕಾರ್ಯಕ್ರಮದಲ್ಲಿ ಈ ಇಬ್ಬರಲ್ಲಿ ‘ಕರ್ನಾಟಕದ ಸಿಂಗಿಂಗ್‌ ಸ್ಟಾರ್‌’ ಯಾರು ಎಂಬುದು ನಿರ್ಧಾರವಾಗಲಿದೆ.

ಸುಮಾರು 1.5 ಲಕ್ಷಎಸ್‌ಎಂಎಸ್‌ ಸಂದೇಶಗಳು ಒಂದು ಎಪಿಸೋಡ್‌ಗೆ ಬರುತ್ತಿದೆ ಎಂದರೆ ಈ ಕಾರ್ಯಕ್ರಮದ ಜನಪ್ರಿಯತೆಯನ್ನು ನೀವು ಊಹಿಸಿಕೊಳ್ಳಬಹುದು. ನಮ್ಮ ಗುರಿ ಕರ್ನಾಟಕದ ಮೂಲೆಮೂಲೆಯಲ್ಲಿ ಇರುವ ಯುವಪ್ರತಿಭೆಗಳನ್ನು ಹೊರಜಗತ್ತಿಗೆ ಪ್ರದರ್ಶಿಸುವುದು ಎನ್ನುತ್ತಾರೆ ಜೀ ವಾಹಿನಿಯ ವಾಣಿಜ್ಯ ವಿಭಾಗದ ಅನೂಪ್‌ ಚಂದ್ರಶೇಖರ್‌ ಹಾಗೂ ಎಸ್‌.ಎಲ್‌. ಎನ್‌. ಸ್ವಾಮಿ.

ಕನ್ನಡ ಚಲನಚಿತ್ರಗಳಲ್ಲಿ ಕನ್ನಡದ ಗಾಯಕ-ಗಾಯಕಿಯರೇ ಹಾಡುವಂತಾಗಬೇಕು. ‘ಸ ರಿ ಗ ಮ ಪ ’ದಂತಹ ಕಾರ್ಯಕ್ರಮದಿಂದ, ನಮ್ಮಂಥ ಗಾಯಕರಿಗೆ ಸಂಗೀತ ಪ್ರಪಂಚಕ್ಕೆ ಕಾಲಿರಿಸಲು ಉತ್ತಮ ಅವಕಾಶ ನೀಡುವಂತಾಗುತ್ತದೆ. ಫೈನಲ್‌ಗಾಗಿ ಎದುರು ನೋಡುತ್ತಿದ್ದೇನೆ ಎನ್ನುತ್ತಾರೆ ಫೈನಲಿಸ್ಟ್‌ ಚಿನ್ಮಯ್‌.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada