»   » ಉಪೇಂದ್ರ-ಪ್ರಿಯಾಂಕ-ಪುಟ್ಟಗೌರಿ!

ಉಪೇಂದ್ರ-ಪ್ರಿಯಾಂಕ-ಪುಟ್ಟಗೌರಿ!

Subscribe to Filmibeat Kannada

ನಟ ಉಪೇಂದ್ರರ ಮನೆಗೆ ಪುಟ್ಟಲಕ್ಷ್ಮಿ ಆಗಮಿಸಿದ್ದಾಳೆ. ಹೌದು ‘ ಹೂವೇಹೂವೇ...’ ಹುಡುಗಿ ಪ್ರಿಯಾಂಕ ಮತ್ತೆ ತಾಯಿಯಾಗಿದ್ದಾಳೆ!

ಈ ತಾರಾ ಜೋಡಿಗೆ ಈಗ ಕೀರ್ತಿಗೊಬ್ಬ ಮಗ ಮಾತ್ರವಲ್ಲ, ಆರತಿಗೊಬ್ಬ ಮಗಳು ಸಹಾ ಬಂದಿದ್ದಾಳೆ. ಪುತ್ರ ಆಯುಷ್‌ಗೆ ಪುಟಾಣಿ ತಂಗಿಯಾಬ್ಬಳು ಸಿಕ್ಕಿದ್ದಾಳೆ. ಮನೆಗೆ ಬಂದಿರುವ ಹೊಸ ಅತಿಥಿಗೆ ತಾರಾಜೋಡಿ, ಚೆಂದದ ಹೆಸರನ್ನು ಹುಡುಕುತ್ತಿದೆ. ತಮ್ಮ ಚಿತ್ರಗಳಿಗೆ ಎ, ಶ್‌, ಓಂ ಸೇರಿದಂತೆ ಚಿತ್ರವಿಚಿತ್ರ ಹೆಸರುಗಳನ್ನು ಹುಡುಕುವ ಉಪೇಂದ್ರ ಅವರಿಗೆ ಮಗಳಿಗೊಂದು ಹೆಸರು ಹುಡುಕುವುದು ಅಷ್ಟು ಕಷ್ಟವೇನಲ್ಲ...ಆದರೆ ಅವರ ಶ್ರೀಮತಿ ಆ ಹೆಸರಿಗೆ ಸಮ್ಮತಿಸಬೇಕಲ್ಲ!

ಗಾಂಧಿನಗರದ ಕಣ್ಣುಕಟ್ಟಿ ಮದುವೆಯಾಗಿದ್ದ ಉಪೇಂದ್ರ, ಪ್ರತಿಯಾಂದರಲ್ಲೂ ಗುಟ್ಟು ಮಾಡಿದ್ದರು. ಮೊದಲ ಮಗನ ನಾಮಕರಣವಾಗುವ ತನಕ ಅಪ್ಪನಾದ ಗುಟ್ಟನ್ನು ಅವರು ಬಿಟ್ಟುಕೊಟ್ಟಿರಲಿಲ್ಲ! ಉಪೇಂದ್ರ-ರಮ್ಯಾ ಜೋಡಿಯ ‘ಗೌರಮ್ಮ’ ಚಿತ್ರ ತೆರೆಕಾಣಲು ಸಜ್ಜಾಗಿರುವ ಸಂದರ್ಭದಲ್ಲಿಯೇ, ಮನೆಗೆ ಪುಟ್ಟಗೌರಿ ಬಂದ ವಿಷಯ ಹೊರಬಿದ್ದಿದೆ.

ಪಶ್ಚಿಮ ಬಂಗಾಳದಲ್ಲಿ ತಮ್ಮ ಒಂದು ತಿಂಗಳ ಮಗುವಿನೊಂದಿಗೆ ಪ್ರಿಯಾಂಕ ಆರೋಗ್ಯವಾಗಿದ್ದಾರೆ.

Post your views

ಇದನ್ನೂ ಓದಿ :
ನನ್ನಂಥ ಅಪ್ಪ ಇಲ್ಲ - ಉಪೇಂದ್ರ


ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada