ಒಂದು ಪ್ಲೇಟ್ ಸ್ಯಾಂಡಲ್‌ವುಡ್ ಚುರುಮುರಿ!
ಚಿತ್ರರಂಗದ ಗರಿಗರಿ ಸುದ್ದಿಗಳು.. ಇಲ್ಲಿ ನೋಟ 1, ಸುದ್ದಿ ಹತ್ತು! ಭಲೇಭಲೇ!!
- ‘ದುನಿಯಾ’ ಚಿತ್ರ 100 ದಿನ ಸಂಪೂರ್ಣ.
- ಸುನೀಲ್ ಕುಮಾರ್ ದೇಸಾಯಿ ನಿರ್ದೇಶನದ ‘ಕ್ಷಣ ಕ್ಷಣ’ ಈವಾರ(ಜೂ.01) ತೆರೆಗೆ. ಚಿತ್ರ ಸೋತರೇ, ದೇಸಾಯಿಗೆ ಕಷ್ಟ ಕಷ್ಟ!
- ‘ಮುಂಗಾರು ಮಳೆ’ 150ದಿನ ಪೂರೈಸಿ, ಮುನ್ನುಗಿದೆ. ಅಬ್ಬರ ಎಂದಿನಂತೆ.
- ‘ದುನಿಯಾ’ ನಿರ್ಮಾಪಕರ ದೊಡ್ಡತನ ದೊಡ್ಡದು. ನಿರ್ದೇಶಕ ಸೂರಿಗೆ 42ಲಕ್ಷ ರೂ.ಗಳ ಬಂಗಲೆಯನ್ನು ಪ್ರೀತಿಯಿಂದ ಅವರು ನೀಡಿದ್ದಾರೆ. ಅಂದ ಹಾಗೇ, ‘ದುನಿಯಾ’ ಚಿತ್ರದ ಹಕ್ಕುಗಳನ್ನು ಪರಭಾಷೆಗೆ ಮಾರಿದಾಗ ನಿರ್ಮಾಪಕರಿಗೆ ಸಿಕ್ಕಿದ್ದು; 42ಲಕ್ಷ!
- ಸ್ಟೇಟ್ಸ್ ಚಿತ್ರಮಂದಿರದಲ್ಲಿ ಜೂ.1ರಿಂದ ‘ಮಲ್ಲ’ ಎರಡನೇ ಇನ್ನಿಂಗ್ಸ್ ಆರಂಭ. ರವಿಚಂದ್ರನ್-ಪ್ರಿಯಾಂಕ ಜೋಡಿಯ ಈ ಚಿತ್ರ, ಪಡ್ಡೆಗಳ ನೆಚ್ಚಿನ ಚಿತ್ರ!
- ಕಾಮಿಡಿ ಟೈಂ ಗಣೇಶ್ ಮತ್ತು ರೇಖಾ ಅಭಿನಯದ ‘ಹುಡುಗಾಟ’ ಚಿತ್ರ ಜೂ.8ರಂದು ತೆರೆಗೆ.
- ಜೂ.7ರಂದು ಸುದೀಪ್ ಪಾಲಿಗೆ ಸತ್ವ ಪರೀಕ್ಷೆ. ಅಂದು ಅವರ ನಿರ್ದೇಶನ ಮತ್ತು ನಿರ್ಮಾಣದ ‘ಶಾಂತಿನಿವಾಸ’ ಬಿಡುಗಡೆ.
- ಟೈಮ್ಸ್ ಆಫ್ ಇಂಡಿಯಾ ಕನ್ನಡ ಅವತರಣಿಕೆಯಲ್ಲಿ, ರಾಜ್‌ಕುಮಾರ್ ಬಗ್ಗೆ ಅವರ ಪುತ್ರ ರಾಘವೇಂದ್ರ ರಾಜ್‌ಕುಮಾರ್ ಬರೆಯುತ್ತಿದ್ದಾರೆ. ಪ್ರತಿ ಭಾನುವಾರ, ಬುಧವಾರ ,ಶುಕ್ರವಾರ ‘ಅಪ್ಪಾಜಿ ಅಂತರಂಗ’ ಶೀರ್ಷಿಕೆಯಡಿ ರಾಘವೇಂದ್ರ, ಅಪ್ಪನನ್ನು ಸ್ಮರಿಸುತ್ತಿದ್ದಾರೆ.
- ವಿಜಯ ರಾಘವೇಂದ್ರ ಮದುವೆ ಫಿಕ್ಸ್ ಆಗಿದೆ. ಆ.24ರಂದು ಮದುವೆ.
- ಕನ್ನಡ ಗಾಯಕಿಯರಿಗೆ ಮಣೆ ಹಾಕಬೇಕು ಎಂಬುದು ವಿಷ್ಣುವರ್ಧನ್‌ರ ಒತ್ತಾಯ.


Click it and Unblock the Notifications