»   » ಮಿಂದು ಹೆಸರು ಮಾಡಿರುವ ರುಚಿತಾ ಪ್ರಸಾದ್‌ ಕನಸು ನನಸಾಗಿದೆ

ಮಿಂದು ಹೆಸರು ಮಾಡಿರುವ ರುಚಿತಾ ಪ್ರಸಾದ್‌ ಕನಸು ನನಸಾಗಿದೆ

By: *ಅಮೆಜಾನ್‌
Subscribe to Filmibeat Kannada

'ನಿನಗೋಸ್ಕರ" ಶೂಟಿಂಗ್‌ನಲ್ಲಿ ಸ್ವಿಮ್‌ ಸೂಟ್‌ ಧರಿಸಿ ಆಗ ತಾನೇ ನೆಂದು ಬಂದಿದ್ದ ರುಚಿತಾಗೆ ಸರ್‌ಪ್ರೆೃಸೊಂದು ಕಾದಿತ್ತು. ಚಿಕ್ಕಂದಿನಿಂದ ಆಕೆ ಕಟ್ಟಿಕೊಂಡಿದ್ದ ಕನಸು ನನಸಾಗುವ ಆಫರ್ರು ಬಾಲಿವುಡ್‌ನಿಂದ ಬಂದಿತ್ತು, ಅದೂ ಬರಿಗಾಲ ಫಕೀರ ಎಂ.ಎಫ್‌. ಹುಸೇನ್‌ರಿಂದ!

ಬೆಂಗಳೂರಿನ ಇಂದಿರಾನಗರದ ರುಚಿತಾ ಪ್ರಸಾದ್‌ ಮನೆಯಲ್ಲಿ ಮಿಂಚಿನ ಸಂಚಲನ. ಇದಕ್ಕೆ ಅವಕಾಶ ಸಿಕ್ಕಿದ್ದೊಂದೇ ಕಾರಣವಲ್ಲ. ಹುಸೇನ್‌ ಸಾಹೇಬರಿಗೆ ರುಚಿತಾ ಪ್ರಸಾದ್‌, ಮಾಧುರಿಯ ಪ್ರತಿರೂಪ ಎನಿಸಿದ್ದು ! ಯಾವ ಆ್ಯಂಗಲ್‌ನಿಂದ ನೋಡಿದರೂ ರುಚಿತಾ, ಕೊಂಚವೂ ಮಾಧುರಿಯನ್ನು ಹೋಲುವುದಿಲ್ಲವಲ್ಲ ಎಂಬುದು ಸ್ಯಾಂಡಲ್‌ವುಡ್ಡಿಗರ ಪ್ರಶ್ನೆ. ಒಳಗಣ್ಣಿನಿಂದ ನೋಡಿ ಅನ್ನೋದು ಹುಸೇನ್‌ ಸಾಹೇಬರ ಉತ್ತರ. ಅಂದಹಾಗೆ, ಈ ಮೊದಲು ಹುಸೇನರಿಗೆ ತಬು ಇಷ್ಟವಾಗಿದ್ದಳು. ರುಚಿತಾ ಕಂಡೊಡನೆ ತಬು ಸಾಹೇಬರ ಮನದ ಪಟಲದಲ್ಲಿ ಮಾಯ.

ಬಾಲಿವುಡ್‌ ಕನಸು ಕಾಣುತ್ತಲೇ ಟಾಲಿವುಡ್‌ನಲ್ಲೂ ಒಂದು ಕೈ ನೋಡಿ ಬಂದ ರುಚಿತಾಗೆ ಅಭಿನಯ ಪ್ರಧಾನದ ಚಿತ್ರಗಳೇ ಸಿಗಲಿಲ್ಲ. ಸಿನಿಮಾ ಮಂದಿ ಇದಕ್ಕೆ ಕೊಟ್ಟ ಕಾರಣ- ಆಕೆಗೆ ಅಭಿನಯದ ಗಂಧ ಗಾಳಿ ಇಲ್ಲ . ಆದರೇನಂತೆ, ಗ್ಲ್ಯಾಮರ್‌ಗೆ ಕೊರೆಯಿಲ್ಲ. 'ರಂಗೋಲಿ" ಎಂಬ ಸಿನಿಮಾದಲ್ಲಿ ಗಾಗ್ರಾ ಚೋಲಿ ಹಾಕಿ ಕೋಲಾಟ ಆಡಿದ್ದೇ ಲಾಸ್ಟು. ಆಮೇಲೆ ರುಚಿತಾ ಹೆಚ್ಚು ನಟಿಸಲಿಲ್ಲ. ನೆಂದಳು, ಮಿಂದಳು, ಹಾಡಿ- ಆಡಿ ಕುಣಿದಾಡಿದಳು. ಕೋತಿಗಳ ಜೊತೆ ಕೋತಿಯಾಟವಾಡಿದಳು. ಕಾಶೀನಾಥ್‌ ಸುಂದರನಾದರೆ, ರುಚಿತಾ ಸುಂದರಿಯಾದಳು. ಇದೀಗ 'ನಿನಗೋಸ್ಕರ"ದಲ್ಲಿ ನಖರಾ ನಾಯಕ ನವೀನ್‌ ಮಯೂರ್‌ ಜೊತೆ ಒದ್ದೆಯಾಟ ಆಡಿದ್ದಾಳೆ.

ನಿರ್ಮಾಪಕರೆದುರು ರುಚಿತಾ ಅಂದರೆ, ಬೇಡ ಖಂಡಿತ ಅಂತಾರೆ. ಅದಕ್ಕೆ ಕಾರಣವೂ ಇದೆ. ಏಸಿ ಕಾರು ಕಳಿಸಿಕೊಟ್ಟು, ಸಾಕಷ್ಟು ಅಡ್ವಾನ್ಸ್‌ ಕೊಟ್ಟು, ಸದಾ ಚಾಮರ ಬೀಸುತ್ತಿದ್ದರೆ ಮಾತ್ರ ಈ ಇಂದಿರಾ ನಗರದ ಇಂದಿರೆ ಬಳುಕೋದು. ಇಲ್ಲವಾದರೆ ಯದ್ವಾ ತದ್ವಾ ತುಳುಕಲು ಶುರುವಿಡುತ್ತಾಳಂತೆ.

ಪ್ರಾಯಶಃ ಬೆತ್ತಲ ಕಾಲಿನ ಕುಂಚ ಕಲಾವಿದ ಹುಸೇನರಿಗೂ ಈಕೆಗೂ ಆಗಿ ಬರಬಹುದು. ಯಾಕೆಂದರೆ, ಹುಸೇನ್‌ ಸಾಹೇಬರ ವರ್ತನೆ ಬಗೆಗೂ ಮಾತುಗಳು ಬಗೆಬಗೆ. ರುಚಿತಾ ಬಾಲಿವುಡ್‌ನವರನ್ನಾದರೂ ಗೋಳು ಹೊಯ್ದುಕೊಳ್ಳದಿರಲಿ.

English summary
Sandalwood star Ruchita prasads dream comes true, noe she is bollywood actress
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada