»   » ಕನ್ನಡ ಕಿರುತೆರೆಗೆ ತಮಿಳು ಮೂಲದ ಇನ್ನೊಂದು ಚಾನೆಲ್‌ ‘ವಿನ್‌ ಟಿವಿ’

ಕನ್ನಡ ಕಿರುತೆರೆಗೆ ತಮಿಳು ಮೂಲದ ಇನ್ನೊಂದು ಚಾನೆಲ್‌ ‘ವಿನ್‌ ಟಿವಿ’

Posted By: Staff
Subscribe to Filmibeat Kannada

ಬೆಂಗಳೂರು: ವೀಕ್ಷಕರ ರೇಟಿಂಗ್ಸ್‌ ಪಾಯಿಂಟ್‌ ಆಧಾರದಲ್ಲಿ ಟಿವಿ ಚಾನೆಲ್‌ಗಳಿಗೆ ಜಾಹೀರಾತು ನೀಡುತ್ತಿರುವ ಕಾರಣ ನಮ್ಮ ದೇಶದ 4,900 ಕೋಟಿ ರೂಪಾಯಿ ವಿದೇಶಕ್ಕೆ ಹರಿದು ಹೋಗುತ್ತಿದೆ. ಈ ಕುರಿತ ಸೂಕ್ತ ಕ್ರಮ ಕೈಗೊಳ್ಳುವಂತೆ ಕೇಂದ್ರ ವಾರ್ತಾ ಮತ್ತು ಸಂಪರ್ಕ ಸಚಿವ ಎಸ್‌.ಜೈಪಾಲ್‌ರೆಡ್ಡಿಯವರನ್ನು ಒತ್ತಾಯಿಸುವುದಾಗಿ ಮುಖ್ಯಮಂತ್ರಿ ಧರ್ಮಸಿಂಗ್‌ ಹೇಳಿದ್ದಾರೆ.

ಅವರು ನೂತನವಾಗಿ ಆರಂಭವಾದ 'ವಿನ್‌ಟಿವಿ ಕನ್ನಡ " ಚಾನೆಲ್‌ ಉದ್ಘಾಟಿಸಿ ಮಾತನಾಡುತ್ತಿದ್ದರು. ಇದಕ್ಕೂ ಮುನ್ನ ಮಾತನಾಡಿದ ವಿನ್‌ ಚಾನಲ್‌ ಅಧ್ಯಕ್ಷ ಟಿ. ದೇವನಾಥನ್‌ ನಮ್ಮ ದೇಶದಲ್ಲಿ ರೇಟಿಂಗನ್ನು ಖಾಸಾಗಿ ಸಂಸ್ಥೆಗಳು ನೀಡುತ್ತಿವೆ. ಇದನ್ನು ಆಧರಿಸಿದ ಜಾಹೀರಾತು ಸಣ್ಣ ಚಾನಲ್‌ಗಳಿಗೆ ಕಡಿಮೆ ದೊರಕುತ್ತಿವೆ ಎಂದು ತಿಳಿಸಿದರು.

 ಉದ್ಘಾಟನಾ ಸಮಾರಂಭದಲ್ಲಿ ಚಿತ್ರ ನಟರಾದ ಅಂಬರೀಶ್‌ ಮತ್ತು ವಿಷ್ಣುವರ್ಧನ್‌, ನಿರ್ಮಾಪಕಿ ಪಾರ್ವತಮ್ಮ ರಾಜ್‌ಕುಮಾರ್‌ ಮಂತಾದವರು ಹಾಜರಿದ್ದರು. ಸಮಾರಂಭದ ಅಧ್ಯಕ್ಷತೆಯನ್ನು ಶಾಸಕ ಎ.ಕೃಷ್ಣಪ್ಪ ವಹಿಸಿದ್ದರು. (ಇನ್ಫೋ ವಾರ್ತೆ)

English summary
Win TV kannada channel inaugurated by chief minister Dharma singh
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada