»   » ಜು.9ರಂದು ಅರಮನೆ ಮೈದಾನದಲ್ಲಿ ರಾಜ್‌ ಸಂಭ್ರಮ

ಜು.9ರಂದು ಅರಮನೆ ಮೈದಾನದಲ್ಲಿ ರಾಜ್‌ ಸಂಭ್ರಮ

Posted By:
Subscribe to Filmibeat Kannada

ಬೆಂಗಳೂರು : ನಟ ಡಾ.ರಾಜ್‌ ಕುಮಾರ್‌ ಅವರನ್ನು ಕರ್ನಾಟಕ ಸರ್ಕಾರ ಸನ್ಮಾನಿಸುವ ‘ ಸಾರ್ಥಕ ಸಂಭ್ರಮ’ ಕಾರ್ಯಕ್ರಮವನ್ನು ನಗರದಲ್ಲಿ ಜುಲೈ 9ರಂದು ಆಯೋಜಿಸಲಾಗಿದೆ.

ನಗರದ ಅರಮನೆ ಆವರಣದಲ್ಲಿ ಜುಲೈ 9ರಂದು ಸಂಜೆ 7ಗಂಟೆಗೆ ಕಾರ್ಯಕ್ರಮ ಆರಂಭಗೊಳ್ಳಲಿದೆ. ಕನ್ನಡ ಬೆಳ್ಳಿತೆರೆಗೆ ರಾಜ್‌ಕುಮಾರ್‌ ಸಲ್ಲಿಸಿದ ಐದು ದಶಕಗಳ ಸೇವೆಗೆ ಕೃತಜ್ಞತೆ ಸಲ್ಲಿಸಲು, ರಾಜ್ಯ ಸರ್ಕಾರ ಈ ಕಾರ್ಯಕ್ರಮವನ್ನು ಸಂಘಟಿಸಿದೆ.

77ನೇ ವಸಂತದಲ್ಲಿ ಇಂತಹ ಪುಳಕ ರಾಜ್‌ ಪಾಲಿಗೆ, ವಿಶೇಷವಾಗಿ ಅವರ ಅಭಿಮಾನಿಗಳಿಗೆ ಲಭ್ಯವಾಗಿದೆ. ಮುಖ್ಯಮಂತ್ರಿ ಎನ್‌.ಧರ್ಮಸಿಂಗ್‌ ಸೇರಿದಂತೆ ಸಚಿವರ ದಂಡು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದೆ. ಕಿರುತೆರೆ ಮತ್ತು ಬೆಳ್ಳಿತೆರೆಯ ಹಿರಿಕಿರಿಯರೆಲ್ಲಾ ‘ಸಾರ್ಥಕ ಸಂಭ್ರಮ’ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ.

ಸಿ.ಅಶ್ವತ್ಥ್‌ ನೇತೃತ್ವದಲ್ಲಿ ನಡೆದ ‘ಕನ್ನಡವೇ ಸತ್ಯ’ ಕಾರ್ಯಕ್ರಮವನ್ನು ಮರೆಯಲಾಗದ ನೆನಪುಗಳನ್ನಾಗಿಸಿದ ಗ್ಲೋಬಲ್‌ ಕನ್ಸಲ್ಟೆಂಟ್‌ಗೆ ಕಾರ್ಯಕ್ರಮದ ನಿರ್ವಹಣೆಯ ಹೊಣೆ ಹೊತ್ತಿದೆ.

ಕಳೆದ ಮೇ ತಿಂಗಳಲ್ಲಿ ಆಯೋಜಿಸಲಾಗಿದ್ದ ಈ ‘ಸಾರ್ಥಕ ಸಂಭ್ರಮ’ ಕಾರ್ಯಕ್ರಮವನ್ನು ಶಿವಮೊಗ್ಗ ಮತ್ತು ಚಾಮರಾಜಪೇಟೆ ಮರುಚುನಾವಣೆಗಳ ಹಿನ್ನೆಲೆಯಲ್ಲಿ ಸರ್ಕಾರ ಮುಂದೂಡಿತ್ತು.

(ಏಜನ್ಸೀಸ್‌)

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada