»   » ಉಪೇಂದ್ರ ಈಗ ‘ಕೆಂಪೇಗೌಡ’!

ಉಪೇಂದ್ರ ಈಗ ‘ಕೆಂಪೇಗೌಡ’!

Posted By:
Subscribe to Filmibeat Kannada

ಉಪೇಂದ್ರ ಅವರ ಹೊಸ ಚಿತ್ರದ ಹೆಸರು ‘ಕೆಂಪೇಗೌಡ’. ಬೆಂಗಳೂರು ಕಟ್ಟಿದ ಕೆಂಪೇಗೌಡ ಸ್ಮರಣೆಯ ವಿಶೇಷ ಕಾರ್ಯಕ್ರಮಗಳು ರಾಜಧಾನಿಯಲ್ಲಿ ನಡೆಯುತ್ತಿರುವ ಬೆನ್ನಲ್ಲಿಯೇ ಹೊಸ ಚಿತ್ರದ ಪ್ರಕಟಣೆ ಹೊರಬಿದ್ದಿದೆ.

ಕೋಟಿಗೊಬ್ಬ, ಸೂರಪ್ಪ, ಕದಂಬ ಚಿತ್ರಗಳ ನಿರ್ಮಾಪಕ ಜೋಡಿ ಸೂರಪ್ಪ ಬಾಬು ಮತ್ತು ಕೋಮಲಾಕರ್‌ ಅವರೊಂದಿಗೆ ಕೈಜೋಡಿಸಿರುವ ಸಿಂಹಾದ್ರಿಯ ಸಿಂಹ ಚಿತ್ರದ ನಿರ್ಮಾಪಕ ವಿಜಯಕುಮಾರ್‌, ‘ಕೆಂಪೇಗೌಡ’ ಚಿತ್ರದ ನಿರ್ಮಾಣಕ್ಕೆ ಮುಂದಾಗಿದ್ದಾರೆ.

ಚಿತ್ರದ ಶೀರ್ಷಿಕೆ ನೋಡಿ, ಐತಿಹಾಸಿಕ ಚಿತ್ರವಿರಬಹುದೆಂದು ಅನುಮಾನಪಡಬೇಡಿ. ಚಿರಂಜೀವಿ ಅಭಿನಯದ ತೆಲುಗು ಚಿತ್ರ ‘ಮುಠಾಮೇಸ್ತ್ರಿ ’ ರಿಮೇಕ್‌ ರೂಪವೇ ‘ಕೆಂಪೇಗೌಡ’. ಎಂ.ಎಸ್‌.ರಮೇಶ್‌ ಸಂಭಾಷಣೆ ಬರೆದು, ಚಿತ್ರವನ್ನು ನಿರ್ದೇಶಿಸಲು ಸಜ್ಜಾಗಿದ್ದಾರೆ. ಹಿಟ್‌ ಹಾಡುಗಳ ಸರ್ದಾರ ಗುರುಕಿರಣ್‌ ಚಿತ್ರಕ್ಕೆ ಸಂಗೀತ ನೀಡುವರು. ವಿಜಯನಗರದಲ್ಲಿನ ಅಶ್ವಿನಿ ಸ್ಟುಡಿಯೋದಲ್ಲಿ ಚಿತ್ರದ ಹಾಡುಗಳ ಧ್ವನಿಮುದ್ರಣಕ್ಕೆ ವ್ಯವಸ್ಥೆ ಮಾಡಲಾಗಿದೆ.

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada