»   » ಅದರಲ್ಲಿ ಒಂಭತ್ತನ್ನು ಆರಿಸಿ ಅಂತ ರಾಮು ಮುಂದೆ ಕುಂತಿದ್ದಾರೆ

ಅದರಲ್ಲಿ ಒಂಭತ್ತನ್ನು ಆರಿಸಿ ಅಂತ ರಾಮು ಮುಂದೆ ಕುಂತಿದ್ದಾರೆ

Posted By: Staff
Subscribe to Filmibeat Kannada

ದೊಡ್ಡ ಪೋಸ್ಟರ್‌. ಅದ ರಲ್ಲಿ ಹಂಸ ಲೇಖಾ ಹಾರ್ಮೋನಿಯಂ ಬಾರಿಸುವ ಚಿತ್ರ, ಪಕ್ಕದಲ್ಲೊಂದು ಗ್ರಾಮ ಫೋನ್‌. ಕೆಳಗೆ ನಂಜುಂಡಿ ಅನ್ನೋ ಟೈಟಲ್ಲು. ಅದರ ಮೇಲೆ ಕೆಳಗೆ ಎರಡು ಘೋಷ ವಾಕ್ಯಗಳು. 'ಸಂಗೀತದ ಅಕ್ಷಯ ಪಾತ್ರೆ ಹಂಸಲೇಖಾ ಸಂಗೀತ ನಿರ್ದೇ ಶನದ 250ನೇ ಚಿತ್ರ 'ನಂಜುಂಡಿ". ಇದು ಹಳ್ಳಿ ಸೊಗಡಿನ ಜನಪದ ಗೀತೆಗಳ ಉಗ್ಗಿ".

'ಅರೆರೆ... ಉಗ್ಗಿ ಅಲ್ಲಾ ಸ್ವಾಮಿ ಹುಗ್ಗಿ" ಅಂದವರ ಬಾಯಿ ಮುಚ್ಚಿಸಲು ಕೆಲವು ಪ್ರಭೃತಿಗಳು ಹೇಳಿದ್ದು- ಸುಗ್ಗಿಯ ತದ್ಭವ ರೂಪ ಉಗ್ಗಿ. ಹಂಸಲೇಖಾ 'ಸುಗ್ಗಿ"ಯ ಕೈಬಿಟ್ಟರೂ ಸುಗ್ಗಿ ಅವರನ್ನು ಬಿಟ್ಟಿಲ್ಲ. ಹಂಸಲೇಖಾಗೆ ಅಕ್ಷ ಯ ಪಾತ್ರೆ ಅನ್ನೋ ಬಿರುದು ಕೊಟ್ಟ ವರಾರೋ ಗೊತ್ತಿಲ್ಲ. ಅದನ್ನು ರುಜು ವಾತು ಮಾಡುವ ಸಲುವಾಗಿಯೋ ಏನೋ ನಂಜುಂಡಿ ಚಿತ್ರಕ್ಕಾಗಿ ಅವರು ಅರವತ್ತು ರಾಗಗಳನ್ನು ಎತ್ತಿ ಕೊಂಡಿದ್ದಾರೆ. ಅದರಲ್ಲಿ ಒಂಭತ್ತನ್ನು ಆಯ್ಕೆ ಮಾಡಬೇಕಾದ ಗುರುತರ ಜವಾಬ್ದಾರಿ ನಿರ್ಮಾ ಪಕ ರಾಮು ಮೇಲೆ ಕುಂತಿದೆ.

ಮಾತಲ್ಲಿ ಹಂಸಲೇಖಾರನ್ನೇ ಮೀರಿಸುವಂಥಾ ಆರ್‌ ಅಂಡ್‌ ಆರ್‌ ಬ್ರದರ್ಸ್‌ ಚಿತ್ರದ ನಿರ್ದೇಶಕರು. ವಧು ಪರೀಕ್ಷೆಗೆ ಕುಳಿತ ಹುಡುಗಿ ಹಾಡು ಎಂದಾಕ್ಷಣ ಹಾಡುವಂತೆ ಆರ್‌ ಅಂಡ್‌ ಆರ್‌ ಬ್ರದರ್ಸ್‌, ಸೀನ್‌ ಹೇಳಿ ಅಂದಾಕ್ಷಣ ಶುರು ಹಚ್ಕೋತಾರೆ. ಒಂದು ರೀಲನ್ನು ಸಾಕ್ಷಾತ್‌ ಕಂಡ ಇಫೆಕ್ಟು ಅವರ ಮಾತಲ್ಲಿರುತ್ತದೆ. ಅಂದ ಹಾಗೆ ಆರ್‌ ಅಂಡ್‌ ಆರ್‌ ಬ್ರದರ್ಸ್‌ ಹಂಸಲೇಖಾ ಶಿಷ್ಯಂದಿರು.

ಹಂಸಲೇಖಾ ಸ್ಟುಡಿಯೋ ನಿರ್ಮಾಣಕ್ಕೆ ನೆರವಾದವರ ಹೆಸರು ನಂಜುಂಡಿ. ಹೀಗೇ ರಾಮು ಖರ್ಚಲ್ಲಿ ಹಂಸಲೇಖಾ ಋಣ ತೀರಿಸುತ್ತಿ ದ್ದಾ ರೆಯೇ? ಇಂಥಾದ್ದೊಂದು ಪ್ರಶ್ನೆ ಬೇರೆಯೇ ರೀತಿಯಲ್ಲಿ ಪ್ರತ್ಯಕ್ಷ ವಾದಾಗ ಛೆ...ಛೆ... ಎಲ್ಲಾ ದರೂ ಉಂಟೇ ಎಂದು ಕೈಮುಗಿದರು ಹಂಸ್‌. ರಾಮು ಸುಮ್ಮನಿದ್ದರು, ಯಾಕೆಂದರೆ ಅವರ ಎಲ್ಲಾ ಚಿತ್ರಗಳಿಗೆ ಖಾಯಂ ಆಗಿ ಫೈನಾನ್ಸ್ಸ್‌ ಮಾಡುವವರೂ ನಂಜುಂಡಿ ಅವರೇ.

English summary
Hamsalekha picks 60 Ragas for Nanjundi !

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada